ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಅಷ್ಟಮಿ ಜನವರಿ.22.2025 ಬುಧವಾರ ಮಹಾ ವಿಷ್ಣುವನ್ನು ಆರಾಧನೆ ಮಾಡಿದರೆ ಅತ್ಯಂತ ಶುಭಕರ astrology
ಮೇಷ ರಾಶಿ: ಒಳ್ಳೆಯ ಆರೋಗ್ಯ.. ತಡವಾದ ನಿರ್ಧಾರ, ಮನಸ್ಸಿಗೆ ನೆಮ್ಮದಿ, ಅತ್ಯಂತ ಒಳ್ಳೆಯ ಅವಕಾಶಗಳು ಬರುತ್ತವೆ. ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಶುಭವಾಗುತ್ತದೆ. (ಪರಿಹಾರಕ್ಕೆ ರುದ್ರ ಮಂತ್ರವನ್ನು ಜಪಿಸಿ)
ವೃಷಭ ರಾಶಿ: ಅತ್ಯಂತ ಶುಭವಾದ ದಿನ, ವ್ಯವಹಾರಗಳಲ್ಲಿ ಶುಭ, ಅಧಿಕ ಧನ ಲಾಭ, ತಿರುಗಾಟವಿಲ್ಲ, ಎಲ್ಲಾ ಕೆಲಸದಲ್ಲೂ ಉತ್ಸಾಹ, ಆನಂದ_ ಬಂಧು ಮಿತ್ರರಲ್ಲಿ ಒಳ್ಳೆಯ ಸುದ್ದಿ. (ಪರಿಹಾರಕ್ಕಾಗಿ ಆಂಜನೇಯನ ನಾಮ ಸ್ಮರಣೆ)
ಮಿಥುನ ರಾಶಿ: ವೈಜ್ಞಾನಿಕ ಮನೋಭಾವನೆ ಬಳಸಿಕೊಳ್ಳಿ, ಬಹಳ ಮುಖ್ಯ ಅತಿಯಾಗಿ ಧನವನ್ನು ಖರ್ಚು ಮಾಡಬೇಡಿ. ಎಚ್ಚರಿಕೆಯಿಂದ ವಿವರಿಸಿ, ಮಕ್ಕಳಿಗೆ ಆರೋಗ್ಯ ಶುಭವಾಗುತ್ತದೆ. (ಪರಿಹಾರಕ್ಕೆ ಅಮ್ಮನವರಿಗೆ ಪೂಜೆ ಮಾಡಿ)
ಕಟಕ ರಾಶಿ: ಒಂದು ಸ್ವಲ್ಪ ಕಲಹ, ಮನಸ್ಸಿಗೆ ತಟಸ್ಥವಾದ ನಿರ್ಧಾರ ಇಲ್ಲದೆ ಯೋಚನೆ. ಸ್ವಲ್ಪ ಚಿಂತೆ, ಭಯ ನಾಶಕ್ಕಾಗಿ ಪರದಾಟ.. ಆಲೋಚನೆ ಮಾಡಬೇಡಿ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿಸಿ)
ಸಿಂಹ ರಾಶಿ: ಒಳ್ಳೆಯ ದಿನ, ಬೆಂಕಿಯ ಭಯ ಆರೋಗ್ಯದಲ್ಲಿ ಸ್ವಲ್ಪ ತೊಂದರೆ, ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸುದಿನ, ವಿದ್ಯಾರ್ಥಿಗಳಿಗೆ ಅನುಕೂಲ ಧನದ ಆಗಮನ ನಿಧಾನವಾಗುತ್ತದೆ. (ಪರಿಹಾರಕ್ಕೆ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ)
ಕನ್ಯಾ ರಾಶಿ: ಆರೋಗ್ಯ ಚಿಂತೆ, ವಿದ್ಯಾರ್ಥಿಗಳಿಗೆ ಶುಭ. ಸರ್ಕಾರಿ ಕೆಲಸಗಳು ತಿರುಗಾಟವಿಲ್ಲದೆ ಆಗುತ್ತವೆ. ಅಧಿಕವಾದ ಲಾಭ, ಯಶಸ್ಸು ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ಶಿವನ ಮಾಡಿ)
ತುಲಾ ರಾಶಿ: ಶಿಕ್ಷಣದಲ್ಲಿ ಅಭಿವೃದ್ಧಿ, ಕಲೆ ಶೈಕ್ಷಣಿಕ ವಿಷಯಗಳಲ್ಲಿ ಜ್ಞಾನಾರ್ಜನೆಗೆ ಅತ್ಯಂತ ಶುಭವಾದ ದಿನ. ಧನಾಗಮ ನಿಧಾನ, ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಎಲ್ಲಾ ಕಾರ್ಯದಲ್ಲೂ ಶುಭ (ಪರಿಹಾರಕ್ಕಾಗಿ ನಾರಾಯಣನ ಸ್ಮರಣೆ ಮಾಡಿ)
ವೃಶ್ಚಿಕ ರಾಶಿ: ಕೆಲಸಗಳಲ್ಲಿ ಅಭಿವೃದ್ಧಿ, ಅಧಿಕವಾದ ತಿರುಗಾಟವಿಲ್ಲ. ಸಂತೋಷಭರಿತ ಜೀವನ, ಸ್ವಲ್ಪ ಆಸೆಗೆ ಕಡಿವಾಣ ಹಾಕಿಕೊಳ್ಳಬೇಕು. ಎಲ್ಲ ಕಾರ್ಯಗಳನ್ನು ಸಾಧಿಸಬೇಕೆಂಬ ಉತ್ಸಾಹ, ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ಪಾರ್ವತಿಯ ಪೂಜೆಯನ್ನು ಮಾಡಿ)
ಧನಸ್ಸು ರಾಶಿ: ಅತಿಯಾದ ಚಿಂತೆ ಬೇಡ.. ಸಾಹಿತಿಗಳಿಗೆ ಒಳ್ಳೆಯ ದಿನ. ಕಾವ್ಯಗಳನ್ನು ಓದುವುದು ಅಭ್ಯಾಸ ಮಾಡಿಕೊಳ್ಳುವುದು ನಿಮಗೆ ಯಶಸ್ಸು ತಂದುಕೊಡುತ್ತದೆ. (ಪರಿಹಾರಕ್ಕಾಗಿ ಗಣಪತಿಯನ್ನು ಪೂಜೆ ಮಾಡಿ)
ಮಕರ ರಾಶಿ: ಶತ್ರುಗಳ ಅಧಿಕಾರ ದಿನ. ಬಹಳ ಆಲೋಚನೆಯಿಂದ ಸಂಧಾನ ಕಾರ್ಯ ಮುಂದುವರೆಯಲಿ. ವಿದ್ಯಾರ್ಜನೆ, ಲಾಭ ಏಕಾಗ್ರತೆಯ ಕೊರತೆ, ಕಿಂಚಿತ್ ಆರೋಗ್ಯ ಸಮಸ್ಯೆ. ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಮಹಾ ಸುದರ್ಶನ ಪೂಜೆ ಹೋಮ ಮಾಡಿಸಿಕೊಳ್ಳಿ)
ಕುಂಭ ರಾಶಿ: ನೀವು ಕೆಲವು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ನೀವು ಬಹಳ ಸಮಯದಿಂದ ಕಾಯುತ್ತಿರುವ ಹಳೆಯ ಸ್ನೇಹಿತನನ್ನು ಭೇಟಿ ಯಾಗುತ್ತೀರಿ. ಹೊಸದಾಗಿ ಮದುವೆಯಾದವರ ಜೀವನದಲ್ಲಿ ಹೊಸ ಅತಿಥಿಯ ಆಗಮನ ಆಗಬಹುದು. (ಪರಿಹಾರಕ್ಕೆ ಭಕ್ತಿಯಿಂದ ಶ್ರೀ ಕುಲದೇವತೆ ಪ್ರಾರ್ಥನೆ ಮಾಡಿ ಶುಭವಾಗುವುದು.)
ಮೀನ ರಾಶಿ: ನಿಮ್ಮ ಮುಂದೆ ಅನೇಕ ರೀತಿಯ ತೊಡಕುಗಳು ಬರುತ್ತದೆ, ಆದರೆ ಆ ಗೊಂದಲ ಗಳಿಗೆ ಹೆದರದೆ ನಿಮ್ಮ ಹೂಡಿಕೆ ಯ ಮಾರ್ಗಗಳನ್ನು ನೀವು ಕಂಡುಕೊಳ್ಳುತ್ತಿರಿ, ಆ ಧೈರ್ಯ ದಿಂದಲೇ ನೀವು ಲಾಭಗಳಿಸಲು ಸಾಧ್ಯವಾಗುತ್ತದೆ. (ಪರಿಹಾರಕ್ಕೆ ಭಕ್ತಿಯಿಂದ ಶ್ರೀ ಶಾರದಾ ಪರಮೇಶ್ವರಿ ಪ್ರಾರ್ಥನೆ ಮಾಡಿ ಶುಭವಾಗುವುದು.)
ರಾಹುಕಾಲ: 12-೦೦PM ರಿಂದ 1-3೦PM
ಗುಳಿಕಕಾಲ: 10-30AM ರಿಂದ 12-00PM
ಯಮಗಂಡಕಾಲ: 7-30AMರಿಂದ 9-00AM
ಹೆಚ್ಚಿನ ಮಾಹಿತಿಗಾಗಿ; ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572