ಜ.23 ದಿನ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕ ಘಟನೆಯಿಂದ ಲಾಭವಾಗುವ ಸಾಧ್ಯತೆ – ಎನ್ ಎಸ್ ಶರ್ಮ

Astrology: Likely to be a memorable day

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣನವಮಿ ಜನವರಿ.23.2025: ಈ ದಿನ ವಿಶೇಷವಾಗಿ ಮಹಾಲಕ್ಷ್ಮಿಯ ಆರಾಧನೆಯನ್ನು ಮಾಡಿ ದಿನವನ್ನು ಶುರು ಮಾಡಿದರೆ ಅತ್ಯಂತ ಶುಭ. Astrology

ಮೇಷ ರಾಶಿ: ಆಕಸ್ಮಿಕ ಘಟನೆಯಿಂದ ಲಾಭ, ಅತ್ಯುನ್ನತ ಅಧಿಕಾರದ ಹುದ್ದೆ . ತಂದೆ-ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಿರ್ಣಾಯಕ ಕೆಲಸ ಕಾರ್ಯಗಳಲ್ಲಿ ಯಶಸ್ಸು. (ಪರಿಹಾರಕ್ಕೆ ಆಂಜನೇಯ ಮಂತ್ರವನ್ನು ಜಪಿಸಿ)

ವೃಷಭ ರಾಶಿ: ಆತ್ಮವಿಶ್ವಾಸದಲ್ಲಿ ವೃದ್ಧಿ, ಶಿಕ್ಷಣ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಮುನ್ನಡೆ.. ವಿವಾಹ, ಸಂತತಿ, ತೀರ್ಥಯಾತ್ರೆ ವಿದೇಶ ಪ್ರವಾಸಕ್ಕೆ ಅನುಕೂಲ ಉತ್ತರಾರ್ಧದಲ್ಲಿ ಸುಲಭರೂಪದಲ್ಲಿ ಅವಕಾಶ ಕೂಡಿ ಬರಲಿದೆ. (ಪರಿಹಾರಕ್ಕೆ ದುರ್ಗಾದೇವಿಯನ್ನು ಆರಾಧನೆ ಮಾಡಿ)

ಮಿಥುನ ರಾಶಿ: ಮನಸ್ಸು ಕೆಟ್ಟದ್ದನ್ನು ಆಲೋಚಿಸುತ್ತಿದೆ. ಸ್ವಲ್ಪ ಅವಕಾಶಗಳನ್ನು ನೋಡಿಕೊಳ್ಳಿ, ಬಂಧು ಮಿತ್ರರೊಂದಿಗೆ ಕೆಟ್ಟದಾಗಿ ಚಿಂತಿಸಬೇಡಿ, ಯೋಚಿಸಬೇಡಿ, ಅನುಕೂಲವಾಗುತ್ತದೆ/ ಆದರೆ ಕೆಲವು ಕೆಟ್ಟ ಸ್ವಭಾವಗಳನ್ನು ಬಿಡಬೇಕು. (ಪರಿಹಾರಕ್ಕಾಗಿ ಚಂದ್ರಶೇಖರ ಅಷ್ಟಕವನ್ನು ಕೇಳಿ)

ಕಟಕ ರಾಶಿ: ಒಳ್ಳೆಯ ವಿಚಾರಗಳಿಗೆ ಆತ್ಮೀಯವಾಗಿ ಯೋಚಿಸುತ್ತೀರಿ. ಆದರೆ ಧರ್ಮ ಬುದ್ಧಿಯ ಚಿಂತನೆ ಕಮ್ಮಿಯಾಗಿದೆ. ಸ್ವಲ್ಪ ಬುದ್ಧಿವಂತರಾಗಿ, ಧರ್ಮದ ಕಡೆ ಒಲವು ಇರಲಿ, ಅನಾವಶ್ಯಕ ಚಿಂತೆ ಬೇಡ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)

ಸಿಂಹ ರಾಶಿ: ಶುಭದಿನ ಉತ್ತಮವಾದ ವಾತಾವರಣ. ಮನೆಯಲ್ಲಿ ನೆಮ್ಮದಿ, ಸತ್ಯ ಜ್ಞಾನದಿಂದ ಜೀವನ ಮಾಡಬೇಕೆಂಬ ಆಸೆ. ಮನಸ್ಸಿಗೆ ತೃಪ್ತಿಯಿದೆ, ಎಲ್ಲಾ ರೀತಿಯಲ್ಲೂ ಶುಭ. (ಪರಿಹಾರಕ್ಕಾಗಿ ಸರ್ವಮಂಗಳೆ ಅಮ್ಮನವರ ಪೂಜೆ ಮಾಡಿ)

ಕನ್ಯಾ ರಾಶಿ: ಆರೋಗ್ಯ, ವಿದ್ಯಾರ್ಥಿಗಳಿಗೆ ಶುಭ, ಕೆಲಸಗಳು ತಿರುಗಾಟವಿಲ್ಲದೆ ಕೆಲವು ಕೆಲಸಗಳು ಆಗುತ್ತವೆ ಅಧಿಕವಾದ ಲಾಭ, ಯಶಸ್ಸು ಅನುಕೂಲವಾಗುತ್ತದೆ (ಪರಿಹಾರಕ್ಕಾಗಿ ಶಿವನ ಪ್ರಾರ್ಥನೆ ಮಾಡಿ)

ತುಲಾ ರಾಶಿ: ಜ್ಞಾನಾರ್ಜನೆಗೆ ಉತ್ತಮವಾದ ಅತ್ಯಂತ ಶುಭವಾದ ದಿನ. ಧನಾಗಮ ನಿಧಾನವಾದರೂ ಚೆನ್ನಾಗಿರುತ್ತದೆ.. ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಎಲ್ಲಾ ಕಾರ್ಯದಲ್ಲೂ ಶುಭ. (ಪರಿಹಾರಕ್ಕಾಗಿ ಶಿವ ಸ್ಮರಣೆ ಮಾಡಿ)

ವೃಶ್ಚಿಕ ರಾಶಿ: ಶುಭ ಸಮಯ. ಆದರೆ ವಿನಾಕಾರಣ ಚಿಂತೆ, ಯೋಚಿಸತಕ್ಕದಲ್ಲದ ವಿಷಯದಲ್ಲೆಲ್ಲ ತಲೆಕೆಡಿಸಿಕೊಳ್ಳುತ್ತೀರಿ, ಇದರಿಂದ ಹೊರಬರಬೇಕು‌ ನಿಧಾನವಾಗಿ ಧ್ಯಾನವನ್ನು ಅಭ್ಯಾಸ ಮಾಡಿ, ಅನುಕೂಲವಾಗುತ್ತದೆ‌. (ಪರಿಹಾರಕ್ಕಾಗಿ ಶ್ರೀ ಕೃಷ್ಣನನ್ನು ಪೂಜೆ ಮಾಡಿ)

ಧನಸ್ಸು ರಾಶಿ: ಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಧನವನ್ನು ಯಾವ ಕಾರ್ಯಕ್ಕೆ ಮಾಡಲು ನಿರ್ಣಯಿಸಿರುವಿರೋ ಅದಕ್ಕೆ ಮಾತ್ರ ಖರ್ಚು ಮಾಡಿ. ವಿಪರೀತವಾದ ದುಂದು ಬೆಚ್ಚ ಬೇಡ, ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಿ‌. (ಪರಿಹಾರಕ್ಕಾಗಿ ದುರ್ಗಾದೇವಿಯ ಸ್ತೋತ್ರವನ್ನು ಕೇಳಿ)

ಮಕರ ರಾಶಿ: ಅನಾವಶ್ಯಕ ಮಾತುಗಳು, ಅದೈರ್ಯದಿಂದ ಕೆಟ್ಟ ನಿರ್ಧಾರಗಳು, ಧೈರ್ಯ ಸಾಲದು, ಶುಭ ಕಾರ್ಯಕ್ಕಾಗಿ ಮುನ್ನುಗ್ಗಬೇಕು. (ಪರಿಹಾರಕ್ಕಾಗಿ ಸೂರ್ಯನಮಸ್ಕಾರವನ್ನು ಮಾಡಿ)

ಕುಂಭ ರಾಶಿ: ದೀರ್ಘವಾದ ಚಿಂತನೆ, ಆಲೋಚನೆ, ಮನಸ್ಸಿಗೆ ಕಿರಿಕಿರಿ‌‌‌.. ಒಳ್ಳೆಯ ಭಾವನೆ, ಇದ್ದರೂ ಭಗವಂತನಲ್ಲಿ ಪ್ರಾರ್ಥನೆ ಇರಬೇಕು‌. ನಿರಂತರವಾಗಿ ಒಳ್ಳೆಯವರ ಸಂಪರ್ಕದಲ್ಲಿ ಇರಿ. ಆರೋಗ್ಯವಂತರಾಗಿರುತ್ತೀರಿ, ದೃಢವಾದ ಕಾರ್ಯದಲ್ಲಿ ನಿಶ್ಚಯತೆಯನ್ನು ಇಟ್ಟುಕೊಳ್ಳಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆ ಮಾಡಿ)

ಮೀನ ರಾಶಿ: ಒಳ್ಳೆಯ ದಿನಗಳು ಬಂದಿವೆ, ಮಾಡಬೇಕಾದ ಕೆಲಸವೂ ಸಾಕಷ್ಟಿದೆ. ನಿಧಾನವಾಗಿ ಎಲ್ಲಾ ಕಾರ್ಯಗಳನ್ನು ತೂಗಿಸಿ, ಅನುಕೂಲವಾಗುತ್ತದೆ ಅತಿಯಾದ ಆಲೋಚನೆ ಬೇಡ ಉತ್ಸಾಹಿಗಳಾಗಿರಿ. (ಪರಿಹಾರಕ್ಕಾಗಿ ಶನೇಶ್ಚರ ಮಂತ್ರವನ್ನು ಜಪ ಮಾಡಿ)

ರಾಹುಕಾಲ: 1-30PM ರಿಂದ 3-00PM
ಗುಳಿಕಕಾಲ: 9-00AM ರಿಂದ 10-30 AM
ಯಮಗಂಡಕಾಲ: 6-00AMರಿಂದ 7-30AM

ಹೆಚ್ಚಿನ ಮಾಹಿತಿಗಾಗಿ; ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!