ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಪಕ್ಷ ದಶಮಿ: ಜ.24.2025 ಶುಕ್ರವಾರ ವಿಶೇಷವಾಗಿ ಮಹಾ ಲಕ್ಷ್ಮಿ ಪೂಜೆಯನ್ನು ಮಾಡಿ ಬಿಲ್ವಪತ್ರೆಯಿಂದ ಅರ್ಚಿಸಿದರೆ ಎಲ್ಲ ಕಾರ್ಯವು ಅನುಕೂಲವಾಗುತ್ತದೆ.
ಮೇಷ ರಾಶಿ: ಎಲ್ಲ ಕಾರ್ಯದಲ್ಲೂ ಆಸಕ್ತಿ, ವಿಶೇಷವಾದ ಆನಂದವನ್ನು ಅನುಭವಿಸುವಿರಿ. ಸ್ವಲ್ಪ ಮಾತು ಜಾಸ್ತಿ, ರೋಗ ಭಯ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವಿದ್ಯಾಭ್ಯಾಸದ ಕೊರತೆ, ಆಲಸ್ಯ. (ಪರಿಹಾರಕ್ಕಾಗಿ ಅಮ್ಮನವರ ಪೂಜೆ ಆರಾಧನೆ ಮಾಡಿ)
ವೃಷಭ ರಾಶಿ: ಶುಭ ಸಂಗತಿಯನ್ನು ಕೇಳುವಿರಿ. ಆರೋಗ್ಯ ಉತ್ತಮ, ಚಂಚಲವಾದ ಮನಸ್ಸು, ಕೋಪದಿಂದ ಸಂತಾನ ಸಮಸ್ಯೆ.. ವ್ಯವಹಾರದಲ್ಲಿ ಚಿಂತೆ. ಉದ್ಯೋಗದಲ್ಲಿ ಕಷ್ಟ ಆರ್ಥಿಕ ಹಾನಿ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಅಭಿಷೇಕ ಪೂಜೆ ಮಾಡಿಸಿ)
ಮಿಥುನ ರಾಶಿ: ಮನಸ್ಸಿನಲ್ಲಿ ನಾನಾ ಚಿಂತೆ, ರಾಗ ದ್ವೇಷಗಳ ಸಮದರ್ಶನ, ಯಾವುದರಲ್ಲೂ ದೃಢವಾದ ನಿರ್ಧಾರವಿಲ್ಲ, ವಿದ್ಯೆಗಿಂತ ಬುದ್ದಿವಂತಿಕೆಯಲ್ಲಿ ಯತ್ನ, ಕಾರ್ಯದ ಅನುಕೂಲ, ವಿದ್ಯಾಭ್ಯಾಸಕ್ಕೆ ಹಿನ್ನೆಡೆ. (ಪರಿಹಾರಕ್ಕಾಗಿ ಗುರುಗಳ ಸ್ಮರಣೆಯನ್ನು ಮಾಡಿ)
ಕಟಕ ರಾಶಿ: ಚಿಂತೆಗಳ ಉತ್ತುಂಗಕ್ಕೆ ಏರಿದ್ದೀರಾ, ಇದರ ಜೊತೆಗೆ ಕೋಪ ಬೇರೆ. ಸೋದರ ಸೋದರಿಯರ ಭಾಂದವ್ಯದಲ್ಲಿ ಒಡಕು, ಕಣ್ಣಿನ, ಹೃದಯದ ಆರೋಗ್ಯಕ್ಕೆ ತೊಂದರೆ.. ಸ್ವಲ್ಪ ಎಚ್ಚರಿಕೆ ಇರಲಿ. ವಿದ್ಯಾನುಕೂಲ ಶುಭವಾಗಿದೆ. (ಪರಿಹಾರಕ್ಕಾಗಿ ಆದಿತ್ಯ ಹೃದಯದ ಪಾರಾಯಣ ಮಾಡಿ ಅಥವಾ ಕೇಳಿಸಿಕೊಳ್ಳಿ)
ಸಿಂಹ ರಾಶಿ; ಧೈರ್ಯವಿಲ್ಲ, ಮುನ್ನುಗುವುದಕ್ಕೆ ಸಾಹಸ, ಕೆಲಸ ಕಾರ್ಯದಲ್ಲಿ ಪ್ರಗತಿ.. ಕೋಪದಿಂದ ಮಿತ್ರರು ಬಂಧುಗಳು ಸ್ವಲ್ಪ ದೂರವಾಗುತ್ತಾರೆ. ಯಾರಾದರೂ ಮಾಟ ಮಂತ್ರ ಮಾಡಿಸಿದ್ದಾರೆ ಎಂಬ ಭಯ ಆತಂಕ. (ಪರಿಹಾರಕ್ಕಾಗಿ ಆಂಜನೇಯ ರಕ್ಷಾ ಸ್ತೋತ್ರವನ್ನು ಓದಿ)
ಕನ್ಯಾ ರಾಶಿ: ಮಾನಸಿಕ ವೇದನೆ, ಮನಸ್ಸಿನಲ್ಲಿ ಹೇಳಲಾಗದ ದುಃಖ, ತನ್ನ ಮೇಲೆ ತನಗೆ ಕೋಪ. ಕೆಲಸ ಕಾರ್ಯಗಳಲ್ಲಿ ಅಡಚಣೆ, ಸ್ವಲ್ಪ ದುಃಖ, ಅಹಂಕಾರದಿಂದ ಕೆಲವು ಕಾರ್ಯಗಳು ನಷ್ಟವಾಗುತ್ತವೆ ಎಚ್ಚರಿಕೆ. (ಪರಿಹಾರಕ್ಕಾಗಿ ದುರ್ಗಾ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಮಾಡಿಸಿ)
ತುಲಾ ರಾಶಿ: ಪಿತೃ ದೋಷ, ಕೆಲವು ಕಾರ್ಯಗಳ ಅಭಿವೃದ್ಧಿ, ಚಿಕ್ಕಪುಟ್ಟ ಆರೋಗ್ಯ ಸಮಸ್ಯೆ. ಆದರೆ ಬಾಧೆ ಮಾತ್ರ ವಿಪರೀತ, ದುಡ್ಡೆಲ್ಲವೂ ವ್ಯರ್ಥವಾಗಿ ಖರ್ಚಾಗುತ್ತದೆ ಎಂಬ ಭಯ. ಈ ಭಯದಿಂದ ದುಃಖ. (ಪರಿಹಾರಕ್ಕಾಗಿ ನವ ನಾಗ ಸ್ತೋತ್ರ ಪಾರಾಯಣ ಮಾಡಿ)
ವೃಶ್ಚಿಕ ರಾಶಿ: ದಾಂಪತ್ಯ, ಸುಖ ಪುಣ್ಯವು ಸ್ವಲ್ಪ ವಿರಳ, ಅಜ್ಞಾನ, ಸ್ವಲ್ಪ ಅಧಿಕವಾದರಿಂದ ಕಾರ್ಯಗಳು ನೀವು ಅಂದುಕೊಂಡಂತೆ ಆಗುವುದಿಲ್ಲ ಭಯ ಆತಂಕ. (ಅನುಕೂಲಕ್ಕಾಗಿ ಪರಿಹಾರಕ್ಕಾಗಿ ಅಮರವರ ಪೂಜೆಯನ್ನು ಮಾಡಿ)
ಧನಸ್ಸು ರಾಶಿ: ಕಾರ್ಯಗಳಲ್ಲಿ ಯಶಸ್ವಿ. ಆದರೆ ಮನಸ್ಸಿನಲ್ಲಿ ಸ್ವಲ್ಪ ಚಿಂತೆ, ತಾಯಿಯ ಸಂಬಂಧ ಕಡೆಯಿಂದ ಭಯ, ಆರೋಗ್ಯ ವೃದ್ಧಿ, ಅಪಘಾತ ವಾಗುವ ಸಂಭವ. ಕೆಲಸಗಳಿಂದ ಕಾರ್ಯಗಳಿಂದ ಅಥವಾ ವ್ಯವಹಾರದಿಂದ ವಿಮುಖ. (ಪರಿಹಾರಕ್ಕಾಗಿ ಗಣಪತಿಯ ಆರಾಧನೆಯನ್ನು ಮಾಡಿ)
ಮಕರ ರಾಶಿ: ಕೋಪ, ಉದ್ವೇಗ, ಆತಂಕ, ಭಯ, ಸ್ವತಂತ್ರವಾದ ಮಾತುಗಳು, ಆದರೂ ಸ್ವಲ್ಪ ಸ್ವಾಭಿಮಾನ, ಧನಾಗಮ ಕುಂಟಿತ, ಬಂಧು ಮಿತ್ರರ ಬೇಟಿ ಶುಭವಾಗಲಿ. (ಪರಿಹಾರಕ್ಕಾಗಿ ವನದುರ್ಗಾದೇವಿಗೆ ಬೆಲ್ಲದ ಆರತಿಯನ್ನು ಮಾಡಿ)
ಕುಂಭ ರಾಶಿ: ಒಳ್ಳೆಯ ಸಂದೇಶ, ಎಲ್ಲಾ ಕಾರ್ಯಗಳ ಆರಂಭದಲ್ಲಿ ಸ್ವಲ್ಪ ಉತ್ಸಾಹ. ಒಂಟಿತನ ಇದರಿಂದ ಸ್ವಲ್ಪ ಕಷ್ಟನಷ್ಟಗಳ ಪರಿಸ್ಥಿತಿ, ಎದುರಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ರುದ್ರಾಭಿಷೇಕ ಮಾಡಿಸಿ)
ಮೀನ ರಾಶಿ: ದೃಢವಾದ ಮನಸ್ಸು, ನಿರ್ಧಾರಕ್ಕೆ ಸ್ವಲ್ಪ ಅಡೆತಡೆ, ಎಚ್ಚರಿಕೆಯ ಮಾತುಗಳಿಂದ ಮನಸ್ಸಿನ ಸಂದೇಹ ನಿವಾರಣೆ.. ಆರೋಗ್ಯ, ಸ್ವಲ್ಪ ಚಿಂತೆ, ವಿದ್ಯಾರ್ಥಿಗಳಿಗೆ ಸ್ವಲ್ಪ ಕಾರ್ಯಾನುಕೂಲ. (ಪರಿಹಾರಕ್ಕಾಗಿ ಸಕ್ಕರಾಯಪಟ್ಟಣದ ಅವಧೂತರ ಸ್ಮರಣೆ ಮಾಡಿ)
ರಾಹುಕಾಲ: 10-30AM ರಿಂದ 12-00PM
ಗುಳಿಕಕಾಲ: 7-30AM ರಿಂದ 9-00 AM
ಯಮಗಂಡಕಾಲ: 3-00PMರಿಂದ 4-30P
ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572