ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಕರಣದ ಕುರಿತು ಬಸನಗೌಡ ಪಾಟೀಲ್ ಯತ್ನಾಳರಿಗೆ (Basana Gouda Patila Yatnal) ಸರ್ವೋಚ್ಚ ನ್ಯಾಯಾಲಯ ‘ಕ್ಲಾಸ್’ ತೆಗೆದುಕೊಂಡಿದೆ ಎಂದು ಕೆಲ ಚಾನಲ್‌ಗಳು ವರದಿ ಮಾಡಿವೆ.
ಆದರೆ ಈ ವರದಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.. ಈ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಕೋರ್ಟ್ ಕಲಾಪಗಳನ್ನು ಸರಿಯಾಗಿ ಅರ್ಥೈಸಿಕೊಂಡು ವರದಿ ಮಾಡಬೇಕೆಂದು ನಾನು ವಿನಂತಿಸುತ್ತೇನೆ.
‘ಸುದ್ದಿ ವೈಭವೀಕರಣ’ ಮಾಡುವ ಭರದಲ್ಲಿ ವಾಸ್ತವಿಕವಾಗಿ ತಪ್ಪಾಗಿ ವರದಿ ಮಾಡುವುದು ತಪ್ಪು ಹಾಗೂ ಖಂಡನೀಯ.
ಘನತೆವೆತ್ತ ನ್ಯಾಯಾಧೀಶರು ನಾವು ಹೂಡಿರುವ ದಾವೆ ಆದಾಯ ತೆರಿಗೆ ಸಂಬಂಧಪಟ್ಟಿದ್ದು ಎಂದು ತಿಳಿದಿದ್ದರು. ಇದಕ್ಕೆ ಕಾರಣ ಡಿಕೆ ಶಿವಕುಮಾರ್ (DK Shivakumar) ಅವರು ಆದಾಯ ತೆರಿಗೆ ಇಲಾಖೆಯ ವಿರುದ್ಧ ಹೂಡಿದ್ದ ಕೇಸ್ ಹಾಗೂ ನಾವು ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಕೇಂದ್ರ ತನಿಖಾ ದಳದ ಒಪ್ಪಿಗೆ ಹಿಂತೆಗೆದುಕೊಳ್ಳುವ ಕೇಸಿನಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರು ಹೆಸರು ಬಂದಿದ್ದರಿಂದ ಈ ಅಪಗ್ರಹಿಕೆಗೆ ಕಾರಣವಾಯಿತು.
(ಡಿಕೆ ಶಿವಕುಮಾರ್ (DK Shivakumar) ಅವರು ಆದಾಯ ತೆರಿಗೆ ಇಲಾಖೆಯ ವಿರುದ್ಧ ದಾಖಲಿಸಿದ್ದ ಪ್ರಕರಣ ಇದೆ ಕೋರ್ಟ್ ರೂಮ್ ಸಂ:35 ರಲ್ಲಿ ಲಿಸ್ಟ್ ಆಗಿತ್ತು)
ನಮ್ಮ ವಕೀಲರು ಕೂಡಲೇ ಆದಾಯ ತೆರಿಗೆ ಪ್ರಕರಣ ಬೇರೆ ಹಾಗೂ ನಾವು ಹೂಡಿರುವ ದಾವೆಯೇ ಬೇರೆ ಎಂದು ಘನತೆವೆತ್ತ ನ್ಯಾಯಾಧೀಶರಿಗೆ ಸಮಜಾಯಿಷಿ ನೀಡಿ ಗೊಂದಲವನ್ನು ನಿವಾರಿಸಿದರು. ನ್ಯಾಯಾಲಯವು ಸಹ ನಾವು ನೀಡಿದ ಮಾಹಿತಿಯನ್ನು ಅಂಗೀಕರಿಸಿತು.
ಇದನ್ನೂ ಓದಿ: ತಾರಕಕ್ಕೇರಿದ ಬಿಜೆಪಿ ಬಣ ಬಡಿದಾಟ.. ವಿಜಯೇಂದ್ರ ವಿರುದ್ಧ ಸಿಡಿದೆದ್ದ ಸಂಸದ ಡಾ.ಕೆ ಸುಧಾಕರ್
ಆದರೆ, ಕೆಲ ಮಾಧ್ಯಮಗಳು ನ್ಯಾಯಾಧೀಶರು ನ್ಯಾಯಾಲಯದಲ್ಲಿ ನಡೆದ ಕಲಾಪವನ್ನು ಸರಿಯಾಗಿ ಅರ್ಥೈಸದೆ, ಅಥವಾ ವಿಷಯ ತಜ್ಞರೊಂದಿಗೆ ಚರ್ಚೆ ಮಾಡದೆ ಸುದ್ದಿಯನ್ನು ವೈಭವೀಕರಿಸುವ ನಿಟ್ಟಿನಲ್ಲಿ ತಪ್ಪು ಮಾಹಿತಿಯನ್ನು ನೀಡಿದ್ದಾರೆ.
ನ್ಯಾಯಾಲಯದಲ್ಲಿ ನಡೆದ ಕಲಾಪಗಳ ಬಗ್ಗೆ ಈ ರೀತಿಯಾದ ತಪ್ಪು ಮಾಹಿತಿ ನೀಡುವುದು ಇದೆ ಮೊದಲೇನಲ್ಲ, ಈ ಹಿಂದೆ ಕೂಡ ಬೇರೆಯೊಂದು ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರು. ಬಸನಗೌಡ ಯತ್ನಾಳರ ಮೇಲೆ ವಾರೆಂಟ್ ಹೊರಡಿಸಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದರು.
ಬಸನಗೌಡ ಪಾಟೀಲ್ ಯತ್ನಾಳರಿಗೆ ಸರ್ವೋಚ್ಚ ನ್ಯಾಯಾಲಯ 'ಕ್ಲಾಸ್' ತೆಗೆದುಕೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
— Basanagouda R Patil (Yatnal) (@BasanagoudaBJP) January 29, 2025
ಈ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಕೋರ್ಟ್ ಕಲಾಪಗಳನ್ನು ಸರಿಯಾಗಿ ಅರ್ಥೈಸಿಕೊಂಡು ವರದಿ ಮಾಡಬೇಕೆಂದು ನಾನು ವಿನಂತಿಸುತ್ತೇನೆ. 'ಸುದ್ದಿ ವೈಭವೀಕರಣ' ಮಾಡುವ ಭರದಲ್ಲಿ ವಾಸ್ತವಿಕವಾಗಿ ತಪ್ಪಾಗಿ ವರದಿ ಮಾಡುವುದು… https://t.co/MudXlWu5c1
ಸುದ್ದಿ ವೈಭವೀಕರಣ ಮಾಡುವ ಭರದಲ್ಲಿ ತಪ್ಪು ಮಾಹಿತಿ ನೀಡದೆ ಜವಾಬ್ದಾರಿಯುತವಾಗಿ ವರದಿ ಮಾಡಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಬಿಜೆಪಿ ಹಾಲಿ ಶಾಸಕರಿಂದ ನನ್ನ ಸೋಲಿಸಲು ಷಡ್ಯಂತ್ರ; ಡಾ.ಕೆ ಸುಧಾಕರ್ ಕೆಂಡಾಮಂಡಲ