ನವದೆಹಲಿ; ಉತ್ತರ ಪ್ರದೇಶದ ಪ್ರಯೋಗ್‌ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Maha Kumbhamela) ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿದ ದುರಂತದಲ್ಲಿ ಮಡಿದವರ ಸಂಖ್ಯೆಯನ್ನು ಕೇಂದ್ರ ಸರ್ಕಾರ ಮುಚ್ಚಿಟ್ಟಿದೆ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ (Santosh lad) ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಕುಂಭ ಮೇಳದ ಅವ್ಯವಸ್ಥೆ ಬಗ್ಗೆ ಮಾತಾಡಿದರೆ ರಾಜಕೀಯ ಅಂತಾರೆ. ಹಿಂದೂ ಭಾವನಾತ್ಮಕ ವಿಚಾರವಾದ ಕುಂಭಮೇಳವನ್ನು ಗೌರವಿಸಬೇಕಿದೆ. ಆದರೆ ಈ ರೀತಿ ಅವ್ಯವಸ್ಥೆಗೆ ಕಾರಣ ಯಾರು..?
ಕುಂಭಮೇಳದಲ್ಲಿ ಎಲ್ಲರೂ ಸಾಮಾನ್ಯ. ಆದರೆ ಪ್ರಮೋಟ್ ಮಾಡಲೆಂದು ವಿಐಪಿಗಳಿಗೆ ಆದ್ಯತೆ ಕೊಡುತ್ತಿದ್ದಾರೆಂಬ ಆರೋಪಗಳಿವೆ. ಪ್ರಚಾರಕ್ಕೋಸ್ಕರ ಹೆಚ್ಚು ವಿವಿಐಪಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗ್ತಾ ಇದೆ. ಎಲ್ಲರಿಗೂ ಸಮವಾಗಿರಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಸಂಭವಿಸಿದ್ದ ಸಾವಿನ ಸಂಖ್ಯೆಗಳ ಅಂಕಿ-ಅಂಶ ಮುಚ್ಚಿಟಿದಂತೆಯೇ ಕುಂಭಮೇಳದಲ್ಲಿ ನಡೆದ ಕಾಲ್ತುಳಿತದಲ್ಲಿ ಆಗಿರುವ ಮೃತರ ಸಂಖ್ಯೆಯನ್ನು ಮುಚ್ಚಿಡುವ ಕೆಲಸ ಸರ್ಕಾರ ಮಾಡಿದೆ.
ಮಾಧ್ಯಮಗಳಲ್ಲಿ 30 ಎನ್ನಲಾಗುತ್ತಿದೆ. ಆದರೆ ಮತ್ತೊಂದು ವರದಿ 200ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ ಎನ್ನಲಾಗುತಿದೆ. ವಿಪರ್ಯಾಸ ಅವರು ಯಾವತ್ತು ವಾಸ್ತವಾಂಶವನ್ನು ಹೇಳುವುದಿಲ್ಲ.
ಬಿಜೆಪಿ ಸರ್ಕಾರ ಇದೊಂದೆ ಅಲ್ಲ, ಅಪರಾಧ ಪ್ರಕರಣ, ಸಾವಿನ ಪ್ರಕರಣವಾಗಿರಲಿ, ಶಿಕ್ಷಣ ವರದಿ, ಜಿಡಿಪಿ ವರದಿ, ದೇಶದ ಬೆಳವಣಿಗೆ ಸೇರಿದಂತೆ ಜನರಿಂದ ಮುಚ್ಚಿಡಲಾಗುತ್ತದೆ. ಇದ್ಯಾವುದು ಸಾರ್ವಜನಿಕವಾಗಿ ಚರ್ಚೆ ಆಗುವುದಿಲ್ಲ.
ಕೋವಿಡ್ ಡೆತ್ ಕೇಸ್ ಚರ್ಚೆ ಆಗ್ಲಿಲ್ಲ ಇದನ್ನು ಮಾಡಲು ಅವರು ಬಿಡಲ್ಲ, ಮಾಧ್ಯಮಗಳ ಮೂಲಕ ತಡೆಯುವುದು, ಉಸಿರು ಕಟ್ಟಿಸುವ ವಾತಾವರಣ ಸೃಷ್ಟಿಸುವುದು ಮಾಡ್ತಾರೆ. ಆದರೆ ನಾ ರಾಜಕೀಯವಾಗಿ ಈ ಪ್ರಕರಣವನ್ನು ಮಾತಾಡಲ್ಲ. ಆದಾಗ್ಯೂ ಇದು ಎಷ್ಟು ಸರಿ..? ಎಂಬುದು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದರು.