ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಮುಂದುವರಿದಿದ್ದು ಇಂದು ಕುಮಾರ್ ಬಂಗಾರಪ್ಪ ಅವರ ನಿವಾಸದಲ್ಲಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಬಣದ ನಾಯಕರು ಸಭೆ ನಡೆಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal), ಇನ್ನು ಮುಂದೆ ಪಕ್ಷದ ಒಳಿತಿಗಾತಿಗಾಗಿ ರಾಜ್ಯಾಧ್ಯಕ್ಷ ಬದಲಾವಣೆ ಡೂ ಆರ್ ಡೈ (ಮಾಡು ಇಲ್ಲವೇ ಮಡಿ) ನಮ್ಮ ಹೋರಾಟದ ಯುದ್ಧವಾಗಿದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದರು ಎಂದರು.

ದೆಹಲಿಯಲ್ಲೂ ಮತ್ತೆ ಸಭೆ ಮಾಡುತ್ತೇವೆ. ಅಲ್ಲಿಯೇ ರಾಜ್ಯಾಧ್ಯಕ್ಷ ಸ್ಪರ್ಧೆ ಬಗ್ಗೆ ತೀರ್ಮಾನಿಸಿ ಅಭ್ಯರ್ಥಿಯನ್ನು ಪ್ರಕಟಿಸುತ್ತೇವೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷರಾದವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ಭಾವನೆ ಮೂಡಬೇಕು. ಆದರೆ ವಿಜಯೇಂದ್ರ ಹಾಗೇ ಮಾಡುತ್ತಿಲ್ಲ. ರಾಜ್ಯಾಧ್ಯಕ್ಷ ಎಂದರೆ ಕೇವಲ ಒಂದು ಟೀಂನ ನಾಯಕನಲ್ಲ ಇಡೀ ಪಕ್ಷಕ್ಕೆ ನಾಯಕನಾಗಿರಬೇಕು.
ನಾಯಕತ್ವದ ಬಗ್ಗೆ ವಿಜಯೇಂದ್ರಗೆ ಏನೂ ಗೊತ್ತಿಲ್ಲ ನಾಯಕತ್ವವು ನಮಗೆ ಎಲ್ಲೂ ಕಾಣಿಸುತ್ತಿಲ್ಲ. ಬರೀ ವಿಜಯೇಂದ್ರನ ಉದ್ಧಟತನ ಕಾಣಿಸುತ್ತಿದೆ ಎಂದು ಗುಡುಗಿದರು.
ಬಸವರಾಜ ಬೊಮ್ಮಾಯಿ (Savaraj bommai), ಆರ್ ಅಶೋಕ (R Ashoka), ಸದಾನಂದ ಗೌಡ (Sadanada gowda) ಅಶ್ವಥ್ ನಾರಾಯಣ (Ashwath narayan) ಸಿಟಿ ರವಿ (CT Ravi) ಸೇರಿದಂತೆ ಯಾರೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಅರ್ಹರಲ್ಲದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ ಹೀಗೆ ಮಾಡಿದರೆ ಪಕ್ಷದ ಅಸ್ಥಿತ್ವ ಎಲ್ಲಿ ಉಳಿಯುತ್ತದೆ? ನೇರ ನೇರವಾಗಿ ಆರೋಪಗಳು ಹೊತ್ತಿರುವವರನ್ನು ಬೇರೆ ಪಕ್ಷದಿಂದ ಬಂದಿರುವವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿಕೊಂಡಿದ್ದಾರೆ.
ಇದು ಪಕ್ಷದ ಭವಿಷ್ಯಕ್ಕಾಗಿ ನಮಗೆ ಆತಂಕ ಮೂಡಿಸಿದೆ. ಹೀಗಾಗಿ ಇದು ಕೊನೆಯಾಗಬೇಕು ಎಂಬುವುದು ನಮ್ಮ ಬೇಡಿಕೆ ಎಂದು ಯತ್ನಾಳ್ ಮತ್ತೊಮ್ಮೆ ವಿಜಯೇಂದ್ರ ವಿರುದ್ಧ ಕಿಡಿಕಾರಿದರು.
ವಿಶ್ವನಾಥ್ ವಾಗ್ದಾಳಿ ಕುರಿತು ಸುದ್ದಿಗಾರರ ಪ್ರಶ್ನೆಗೆ, ಅದ್ ಒನ್ ಟು ಒನ್ ಇದೆ.. ನೀವ್ ಒನ್ ಟೂ ಇಡೀ ಸ್ಟೇಟ್ ಮಾಡೋಕ್ ಹೋಗಬೇಡಿ, ಅದು ಸುಧಾಕರ್ ಮತ್ತು ವಿಶ್ವನಾಥ್ ನಡುವಿನ ಜಗಳ.. ನಮಗೇನ್ ಸಂಬಂಧ ಎಂದು ತಿರುಗೇಟು ನೀಡಿದರು.
ಸುಧಾಕರ್ (Sudhakar), ವಿಶ್ವನಾಥ್ (Vishwanath) ನಮ್ಮೊಂದಿಗೆ ಇದ್ದಾರೆ.. ವಿಶ್ವನಾಥ್ ಅವರ ನಿಷ್ಠೆ ಯಡಿಯೂರಪ್ಪ ಅವರಿಗೆ ಹೊರತು ಅವರ ಮಗನಿಗಲ್ಲ ಎಂದರು.
ಹೇಳುವುದು ಇಷ್ಟೆ.. ನಮ್ಮ ಗುಂಪು ದೊಡ್ಡದಾಗಿದೆ.. ಭಾರತೀಯ ಜನತಾ ಪಾರ್ಟಿ 140 ಸೀಟಿ ಪಡೆಯುವ ಶಕ್ತಿ ಇರುವಂತಹ ಗುಂಪು ತಯಾರಾಗಿದೆ. ಅಂತೋರ್ ಇಂತೋರ್ ಹೇಳಿಕೆಗೆ ಉತ್ತರ ನೀಡಲು ಸಮಯವಿಲ್ಲ..
ಇದು ಡೂ ಆರ್ ಡೈ ಯುದ್ಧ ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ.. ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಸಮರ ಸಾರಿರುವುದಾಗಿ ಯತ್ನಾಳ್ ಹೇಳಿದರು.
ಸಭೆಯಲ್ಲಿ ರಮೇಶ್ ಜಾರಕಿಹೊಳಿ, ಜಿ.ಎಂ ಸಿದ್ದೇಶ್ವರ, ಬಿ.ಪಿ ಹರೀಶ್, ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕ ಮುಖಂಡರು ಇದ್ದರು