ಚೆನ್ನೈ: ವಿವಾದಿತ ದೇವಮಾನವ ನಿತ್ಯಾನಂದ (Nithyananda) ಪ್ರತ್ಯೇಕ ದೇಶ ಮಾಡಿಕೊಂಡಿದ್ದೇನೆಂಬ ಸುಳ್ಳಾಗಿದ್ದು, ಆತ ಈಕ್ವಡಾರ್‌ನಲ್ಲಿದ್ದಾನೆ ಎಂದು ತಮಿಳುನಾಡು ಸರ್ಕಾರ ಚೆನ್ನೈ ನ್ಯಾಯಾಲಯಕ್ಕೆ ತಿಳಿಸಿದೆ.
ಮಠಗಳ ನಿರ್ವಹಣೆಗೆ ಠಕ್ಕರ್ ಅವರನ್ನು ನೇಮಿಸಿ ತಮಿಳುನಾಡು ಸರ್ಕಾರ (Tamilunadu Gourmet) ಹೊರಡಿಸಿದ್ದ ಆದೇಶ ರದ್ದುಗೊಳಿಸುವಂತೆ ಕೋರಿ ನಿತ್ಯಾನಂದ ಪರವಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ರಾಜ್ಯಸರ್ಕಾರ ಈ ಮಾಹಿತಿ ನೀಡಿದೆ.
ಆದರೆ ನಿತ್ಯಾನಂದ (Nithyananda) ಭಾರತದಲ್ಲಿಲ್ಲದಿರುವುದರಿಂದ ಆತನ ಪ್ರಕರಣವನ್ನು ನ್ಯಾಯಾಲಯ ವಜಾ ಮಾಡಿದೆ. ಭಾರತದಲ್ಲಿರದವನು ಹೇಗೆ ಮೊಕದ್ದಮೆ ಹೂಡಲು ಸಾಧ್ಯ ಎಂದೂ ಪ್ರಶ್ನಿಸಿದೆ.
ನಿತ್ಯಾನಂದ ಆಸ್ಟ್ರೇಲಿಯಾ ಸಮೀಪ ಇರುವ ದ್ವೀಪವನ್ನು ಖರಿದಿಸಿ ಅಲ್ಲಿ ತನ್ನದೇ ದೇಶವನ್ನು ಕಟ್ಟಿಕೊಂಡು ಹಿಂದೂ ಧರ್ಮದ ಮತ ಪ್ರಚಾರ ಮಾಡುತ್ತಿದ್ದಾನೆ ಎಂದು ಇದುವರೆಗೂ ಹೇಳಲಾಗಿತ್ತು.
ಈ ದೇಶದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ, ಆರೋಗ್ಯ ವ್ಯವಸ್ಥೆ ಕಲ್ಪಿಸಲಾಗುವುದೆಂದು ಈ ವಿವಾದಿತ ದೇವಮಾನವ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬೊಗಳೆ ಬಿಡುತ್ತಿದ್ದ, ಆಸ್ಟ್ರೇಲಿಯಾ, ಆಫ್ರಿಕಾ, ಕೆರಿಬಿಯನ್ ದ್ವೀಪ, ಫೆಸೆಫಿಕ್, ದಕ್ಷಿಣ ಅಮೆರಿಕ ಸೇರಿದಂತೆ ಏಳು ಕಡೆಗಳಲ್ಲಿ ಕೈಲಾಸ ದೇಶಕ್ಕೆ ಸೇರಿದ ಆಸ್ತಿಗಳಿವೆ ಎಂದೂ ಹೇಳಿಕೊಂಡಿದ್ದ.
ಆದರೀಗ ರಾಜ್ಯಸರ್ಕಾರ ಆತ ಈಕ್ವಡಾರ್ ನಲ್ಲಿದ್ದಾನೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.