ದೆಹಲಿ: ಮಹಾಕುಂಭ ಮೇಳದಲ್ಲಿ (Maha Kumbhamela) ಸಂಭವಿಸಿದೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೆ ಎಸೆಯಲಾಗಿದೆ, ಇದರಿಂದಾಗಿ ನೀರು ಕಲುಷಿತವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ಗಂಭೀರ ಆರೋಪ ಮಾಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಇಂದು ಜಲಶಕ್ತಿ ಯೋಜನೆ ಕುರಿತು ಪ್ರಶ್ನೋತ್ತರ ನಡೆಯುತ್ತಿದೆ. ಕಲುಷಿತ ನೀರಿನ ಕುರಿತು ಚರ್ಚೆಯಾಗಬೇಕಿದೆ.. ಸದ್ಯಕ್ಕೆ ಹೆಚ್ಚು ಕಲುಷಿತ ನೀರು ಎಲ್ಲಿದೆ? ಕುಂಭದಲ್ಲಿದೆ.

ಅಲ್ಲಿನ ಸ್ವಚ್ಛತೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೆ ಎಸೆಯಲಾಗಿದೆ, ಇದರಿಂದಾಗಿ ನೀರು ಕಲುಷಿತವಾಗಿದೆ. ಇದೇ ನೀರು ಜನರಿಗೆ ತಲುಪುತ್ತಿದೆ.
ಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಚಿಕಿತ್ಸೆ ನೀಡಲಾಗುತ್ತಿಲ್ಲ, ಕೋಟಿಗಟ್ಟಲೆ ಜನರು ಭೇಟಿ ನೀಡಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಯಾವುದೇ ಸಮಯದಲ್ಲಿ ಆ ಸ್ಥಳದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರುತ್ತಾರೆ?. ಅದು ಸಾಧ್ಯವೆ.
ಮಹಾಕುಂಭ ನಡೆಯುತ್ತಿರುವ ಸ್ಥಳದ ನಿಜವಾದ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ. ಮಹಾಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಯಾವುದೇ ವಿಶೇಷ ಚಿಕಿತ್ಸೆ ಸಿಗುತ್ತಿಲ್ಲ. ನೀವುಗಳು ದೊಡ್ಡವರ ಸುದ್ದಿ ಮಾತ್ರ ತೋರಿಸಿತ್ತೀರಿ. ಜನಸಾಮಾನ್ಯರಿಗೆ ಸರಿಯಾದ ಯಾವುದೇ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆ ದನಿ ಎತ್ತುತ್ತಿಲ್ಲ.
#WATCH | Delhi: Samajwadi Party MP Jaya Bachchan says, "… Where is the water most contaminated right now? It's in Kumbh. Bodies (of those who died in the stampede) have been thrown in the river because of which the water has been contaminated… The real issues are not being… pic.twitter.com/9EWM2OUCJj
— ANI (@ANI) February 3, 2025
ಉತ್ತರ ಪ್ರದೇಶ ಸರ್ಕಾರ ಈ ವಾಸ್ತವದ ಸಮಸ್ಯೆಗಳಿಗೆ ಯಾವುದೇ ಉತ್ತರಗಳನ್ನು ನೀಡುತ್ತಿಲ್ಲ.
ಮಹಾ ಕುಂಭಕ್ಕೆ ಭೇಟಿ ನೀಡುವ ಸಾಮಾನ್ಯ ಅಥವಾ ಬಡ ಜನರಿಗೆ ಯಾವುದೇ ವ್ಯವಸ್ಥೆಯನ್ನು ಒದಗಿಸಲಾಗಿಲ್ಲ. ಆದರೆ ವಿಐಪಿಗಳಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಯಾ ಬಚ್ಚನ್ ಆರೋಪಿಸಿದ್ದಾರೆ.
