ಮುಂಬೈ: ವಾರದ ಆರಂಭಿಕ ದಿನ ಸೋಮವಾರವಾದ ಇಂದು ಭಾರತದ ರೂಪಾಯಿ (Rupee) ಬೆಲೆ ಸಾರ್ವಕಾಲಿಕ ಮಟ್ಟಕ್ಕೆ ಕುಸಿಯುತ್ತಲೇ ಸಾಗಿದ್ದು, ಅಮೆರಿಕದ ಡಾಲರ್ (dollar) ಮೌಲ್ಯ ಹೆಚ್ಚುತ್ತಿದೆ.
ಇಂದು ಡಾಲರ್ ಎದುರು ರೂಪಾಯಿ ಬೆಲೆಯು ಬರೋಬ್ಬರಿ 87.10 ರೂಪಾಯಿಗೆ ಕುಸಿತ ಕಂಡಿರುವುದು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿ ಸರಿ ಇಲ್ಲವೆಂಬ ಆರೋಪ ಕೇಳಿ ಬಂದಿದೆ.
1 ಡಾಲರ್ (dollar) ಬೆಲೆ 87.10 ರೂಪಾಯಿಗೆ (Rupee) ಕುಸಿತ ಕಂಡಿರುವುದು ಸಹಜವಾಗಿ ಭಾರತದ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೋದಿ ಆಪ್ತರಾದ ಟ್ರಂಪ್ ಈಗಾಗಲೇ ಕೆನಡಾ ಮತ್ತು ಮೆಕ್ಸಿಕೋ ದೇಶಗಳ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಘೋಷಣೆ ಮಾಡಿದ್ದಾರೆ.
ಅಂತೆಯೇ ಭಾರತ, ರಷ್ಯಾ, ಚೀನಾ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಸೇರಿ ರಚನೆ ಮಾಡಿರುವ ಬ್ರಿಕ್ಸ್ ಒಕ್ಕೂಟದ ದೇಶಗಳ ವಿರುದ್ಧ ಕೂಡ ಭಾರಿ ತೆರಿಗೆ ಹೆಚ್ಚಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಈ ಮೂಲಕ ಡಾಲರ್ ಎದುರು ರೂಪಾಯಿ ಬೆಲೆ ಸಾರ್ವಕಾಲಿಕ ಪತನ ಕಂಡಿದೆ ಎಂದು ವರದಿಯಾಗಿದೆ.