ದಂಡಪಿಂಡಗಳಿಂದ ದೆಹಲಿ ಯಾತ್ರೆ; ಯತ್ನಾಳ್ ಬಣವನ್ನ ಹಿಗ್ಗಾಮುಗ್ಗಾ ಬೈಯ್ದ ರೇಣುಕಾಚಾರ್ಯ

Delhi Yatra from Dandapindas; Renukacharya

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿನ (BJP) ಬಣಬಡಿದಾಟ ದೆಹಲಿಗೆ ಹಂತಕ್ಕೆ ತಲುಪಿದರು, ರಾಜ್ಯದಲ್ಲಿ ಪರ ವಿರೋಧವಾಗಿ ಮುಖಂಡರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ‌

ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ (Vijayendra) ಅವರನ್ನು ಕೆಳಗಿಳಿಸುವ ಸಲುವಾಗಿ ಸಮರ ಸಾರಿರುವ ರೆಬೆಲ್ ನಾಯಕರು ದೆಹಲಿ (Delhi) ಯಾತ್ರೆ ಕೈಗೊಂಡಿದ್ದಾರೆ.

ಇತ್ತ ವಿಜಯೇಂದ್ರ ಬಣ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ (MP Renukacharya) ನೇತೃತ್ವದಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮನೆಯಲ್ಲಿ ಸಭೆ ನಡೆಸಿದ್ದು, ನಂತರ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Yatnal) ಬಣದ ಕುರಿತು ಹಿಗ್ಗಾಮುಗ್ಗಾ ಬೈಯ್ದಿದ್ದಾರೆ.

ಸನ್ಮಾನ್ಯ ಯತ್ನಾಳ್ ಅವರೇ, ನೀವು ಕಾಂಗ್ರೆಸ್ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡಿದ್ದೀರಿ. ಅಪ್ಪು ಪಟ್ಟಣ್ ಶೆಟ್ಟಿಗೆ ಟಿಕೆಟ್ ಕೊಟ್ಟಿದ್ರೆ ನೀನು ಎಂಎಲ್‌ಎ ಆಗ್ತಿರಲಿಲ್ಲ.. ಎಂಬಿ ಪಾಟೀಲ್ ಹಾಗೂ ಯತ್ನಳ್ ನಡುವೆ ಒಳ ಒಪ್ಪಂದವಿದೆ.

ಈ ಹಿಂದೆ ಪಕ್ಷದಿಂದ ಸಸ್ಪೆಂಡ್ ಆಗಿ ಯಡಿಯೂರಪ್ಪ ನವರ ಕಾಲು ಹಿಡಿದವರು? ಮಿಸ್ಟರ್ ಯತ್ನಾಳ್ ಇದು ಸರಿಯಲ್ಲ. ನಾಲಿಗೆ ಬಿಗಿ ಹಿಡಿದು ಮಾತಾಡು, ನಿಮಗೆ ಗೌರವ ಕೊಡ್ತೇವೆ ನಾವು.

ಇವರು ಯಾರು ಮೂಲ ಬಿಜೆಪಿಯಲ್ಲ. ಬಿಜೆಪಿಗೆ ಮೂಲ ಇವರೆಲ್ಲ. ಬಸ್ಸಲ್ಲಿ ಟಿಕೆಟ್ ಹರಿದ್ದಿದ್ದು ಹೇಳಬೇಕಾ‌‌..? ಸಿದ್ದೇಶ್ವರ್ ಸಂಸ್ಥೆ ನೀನು ಕಟ್ಟಿದ್ದಲ್ಲ. ಅಲ್ಲಿ ಬಂದು ಸಂಸ್ಥೆ ಕಬ್ಜ್ ಮಾಡಿದಿಯಲ್ಲ. ಅಲ್ಲಿ ನಿಮ್ಮ ಮಗನ್ನ ಪ್ರಚಾರ ಮಾಡ್ತಾ ಇದ್ದಿಯಲ್ಲ ಇದು ಕುಟುಂಬ ರಾಜಕಾರಣ ಅಲ್ವಾ?

ಮಿಸ್ಟರ್ ಕುಮಾರ್ ಬಂಗಾರಪ್ಪ

ಮಿಸ್ಟರ್ ಕುಮಾರ್ ಬಂಗಾರಪ್ಪ (Kumar Bangarappa), ನಿಮ್ಮ ತಂದೆ ಬಂಗಾರಪ್ಪನವರು ಬಿಜೆಪಿಗೆ ಬಂದಾಗ ನೀನು ಬಿಜೆಪಿಗೆ ಬಂದಿರಲಿಲ್ಲ. ಬಿಜೆಪಿಯ ಸೊರಬಾ ಕಾರ್ಯಕ್ರಮಕ್ಕೆ ನೀನು ಬಂದಿಲ್ಲ.

ಮೂಲ ಬಿಜೆಪಿಯವರನ್ನ ನೀನು ಮರೆತಿದ್ದಕ್ಕೆ ನೀನು ಸೋಲಬೇಕಾಯ್ತು. 2023ಚುನಾವಣೆ ಬಳಿಕ ಕ್ಷೇತ್ರ ಮರೆತಿದ್ದಾರೆ. ಸೋತಮೇಲೆ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದ್ರು. ಸಹೋದರ ಮಧು ಸೇರಿಸಿಕೊಳ್ಳಬಾರದೆಂದು ಅಡ್ಡಗಾಲಾದ್ರು.

ಈಗ ನ್ಯಾಷನಲ್ ಲೀಡರ್ ಆಗ್ಬೇಕು ಎಂದು ಕೊಂಡಿದ್ದೀಯಾ? ಬಿಜೆಪಿ ಯಾವ ಹೋರಾಟಕ್ಕೂ ನೀನು ಬಂದಿಲ್ಲ, ಕಾಂಗ್ರೆಸ್ ವಿರುದ್ಧ ನಿಮ್ಮ ಹೋರಾಟ ಇರಬೇಕಿತ್ತು. ಮಿಸ್ಟರ್ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರಲು ಯತ್ನಿಸಿರಲಿಲ್ವಾ?

ಮೂರ್ ನಾಲ್ಕು ದಿನದಿಂದ ದೆಹಲಿಯಲ್ಲಿ ಇದ್ದಾರೆ ವರಿಷ್ಠರ ಭೇಟಿ ಆಯ್ತಾ.‌..? ಕಾಮಿಡಿ ಪೀಸ್ ಆಗಿದ್ದಾರೆ. ಮಾಧ್ಯಮದಲ್ಲಿ ಸ್ಟೋರಿನ ಪ್ಲಾಂಟ್ ಮಾಡಿಸ್ತಾರೆ, ನಡ್ಡಾ ಭೇಟಿ ಯಾದೆವು, ಆದ್ರೆ ಅವರು ಯಾವುದೇ ಫೋಟೋ ಬೇಡ ಎಂದರು ಎನ್ನುತ್ತಾರೆ. ಅವರು ಯಾರನ್ನೂ ಭೇಟಿಯೇ ಆಗಿಲ್ಲ ಎಂದರು. ಈ ಆಟಗಳನ್ನು ಬಿಡಲಿಲ್ಲ ಅಂದರೆ ಈ ರಾಜ್ಯದ ಜನ ದಂಗೆ ಎದ್ದೇಳುತ್ತಾರೆ.

ರಾಜ್ಯ ಸರ್ಕಾರ ಅಭಿವೃದ್ಧಿ ಮರೆತಿದೆ ಅದರ ಬಗ್ಗೆ ಹೋರಾಟ ಮಾಡುವುದು ಬಿಟ್ಟು ಣ ಪಕ್ಷ ಸಂಘಟನೆ ಮಾಡ್ತಾ ಇರುವ ವಿಜಯೇಂದ್ರನ ಕೆಳಗಿಳಿಸಲು ಬಾಯಿಗೆ ಬಂದಂತೆ ಮಾತಾಡ್ತಾರೆ.

ಇಂದು ತುರ್ತಾಗಿ ಸೇರಿದ್ದೇವೆ, ನಾವು ಸೈಲೆಂಟ್ ಆಗಿದ್ದೇವು. ಯಡಿಯೂರಪ್ಪ ವಿಜಯೇಂದ್ರ ಮಾತಾಡಬಾರದು, ಪಕ್ಷ ಸಂಘಟನೆ ಮಾಡಬೇಕು ಎಂದಿದ್ದಾರೆ.

ಆದರೆ ನಾವು ತುರ್ತಾಗಿ ನಾವು 12 ಜನ ಸೇರಿದ್ದೇವೆ. ಮುಂದಿನ ಬುಧವಾರ 100ಕ್ಕು ಹೆಚ್ಚು ಮಂದಿ ಸಭೆ ಸೇರುತ್ತೇವೆ.. ಬಿಜೆಪಿಯಿಂದ ಇವರನ್ನು ಉಚ್ಛಾಟನೆ ಮಾಡಬೇಕಿದೆ.

ಬಿಜೆಪಿ ಅಧಿಕಾರಕ್ಕೆ ತರುವ ಶಕ್ತಿ ಇರುವುದು ವಿಜಯೇಂದ್ರಗೆ ಮಾತ್ರ ಎಂಬುದು ವರಿಷ್ಠರ ತೀರ್ಮಾನ, ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡುವುದು ಒಂದೇ ಮೋದಿ, ಅಮಿತ್ ಶಾ ಅವರನ್ನು ಭೇಟಿಯಾಗುವುದು ಒಂದೇ.

ಮುಂದಿನ ಬುಧವಾರ ಸಭೆ ನಡೆಸಿ ದೆಹಲಿ ತೆರಳುತ್ತೇವೆ. ನಾಯಕರ ಗಮನಕ್ಕೆ ತರುತ್ತೇವೆ.. ಇವರಂತೆ ಹಾವ್ ಬಿಡುತ್ತೇವೆ ಹಾವ್ ಬಿಡುತ್ತೇವೆ ಎಂಬುದಿಲ್ಲ.. ಇವರದು ದಂಡ ಯಾತ್ರೆ ದಂಡ ಪಿಂಡಗಳ ದಂಡಯಾತ್ರೆ, ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ರೇಣುಕಾಚಾರ್ಯ ಬೈಯ್ದರು.

ರಾಜಕೀಯ

ಬೆಂಗಳೂರು ಗ್ರಾಮಾಂತರ ಜಿ.ಪಂ ಸೇರಿ 8 ಕ್ಷೇತ್ರಗಳ ಪುನರ್ ವಿಂಗಡಣೆ

ಬೆಂಗಳೂರು ಗ್ರಾಮಾಂತರ ಜಿ.ಪಂ ಸೇರಿ 8 ಕ್ಷೇತ್ರಗಳ ಪುನರ್ ವಿಂಗಡಣೆ

ಬೆಂಗಳೂರು ಗ್ರಾಮಾಂತರ ಸೇರಿದಂತೆ ಎಂಟು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ (Z.P) ಕ್ಷೇತ್ರಗಳ (Constituencies) ಗಡಿ ಗುರುತಿಸಿ ಮತ್ತು ಚುನಾಯಿತ ಸದಸ್ಯರ ಸಂಖ್ಯೆ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

[ccc_my_favorite_select_button post_id="121409"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ವೇಶ್ಯಾವಾಟಿಕೆ ದಂಧೆ; ಇಬ್ಬರ ಬಂಧನ

ವೇಶ್ಯಾವಾಟಿಕೆ ದಂಧೆ; ಇಬ್ಬರ ಬಂಧನ

ಗ್ರಾಮದ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದು, ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.

[ccc_my_favorite_select_button post_id="121407"]
ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ (Tempo) ಡಿವೈಡರ್ ಮೇಲೆ ಸಾಗಿ, ಮತ್ತೊಂದು ರಸ್ತೆಯಲ್ಲಿ ಎದುರು ಬರುತ್ತಿದ್ದ ಟ್ಯಾಂಕರ್ಗೆ (Canter) ಡಿಕ್ಕಿ ಹೊಡೆದ ಪರಿಣಾಮ (Accident), ಟೆಂಪೋ ಚಾಲಕ ಸಾವನಪ್ಪಿರುವ ಘಟನೆ ತಾಲೂಕಿ ಕೂಗೇನಹಳ್ಳಿ ಕಾಲೋನಿ

[ccc_my_favorite_select_button post_id="121396"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]