ಬಿಜಾಪುರ: ಛತ್ತೀಸ್‌ಗಢದ ಬಿಜಾಪುರದ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಭದ್ರತಾ ಪಡೆ ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 31 ಮಂದಿ ನಕ್ಸಲರು (naxal) ಸಾವನ್ನಪ್ಪಿದ್ದಾರೆ.
ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಸೈನಿಕರನ್ನು ಹೆಲಿಕಾಪ್ಟರ್ ಮೂಲಕ ರಾಯ್‌ಪುರಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಮಾವೋವಾದಿಗಳ ಬಗ್ಗೆ ಮಾಹಿತಿ ಬಂದ ನಂತರ ಸ್ಥಳಕ್ಕೆ ಪಡೆಗಳನ್ನು ನಿಯೋಜಿಸಲಾಗಿದೆ.
ಇಂದು ಬೆಳಗ್ಗೆಯಿಂದ ಗುಂಡಿನ ಚಕಮಕಿ ನಡೆಯುತ್ತಿತ್ತು. ಪ್ರಸ್ತುತ, ನಕ್ಸಲೀಯರನ್ನು ಬಿಜಾಪುರ ಡಿಆರ್‌ಜಿ, ಎಸ್‌ಟಿಎಫ್ ಮತ್ತು ಬಸ್ತಾರ್ ಫೈಟರ್ಸ್‌ನ ಸೈನಿಕರು ಸುತ್ತುವರಿದಿದ್ದಾರೆ.
ಇದು ಒಂದು ದೊಡ್ಡ ಕಾರ್ಯಾಚರಣೆಯಾಗಿದ್ದು, ಹತ್ಯೆಯಾದ ನಕ್ಸಲೀಯರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡಿಐಜಿ ಹೇಳಿದ್ದಾರೆ.
31 naxal terror!sts killed by SFs in Indravati National Park in Chhattisgarh's Bijapur district today morning in a gun battle.
— JJohnnymeitei (@JohnnyMeetei) February 9, 2025
While in Manipur,the SFs are made to stand down like cowards evn when they are being attacked & k!lled by chin kuki terror!sts.
pic.twitter.com/93eEqmAYuP
ಮಾಹಿತಿಯ ಪ್ರಕಾರ, ಹತ್ಯೆಗೀಡಾದ ನಕ್ಸಲೀಯರಿಂದ ಅನೇಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಈ ಮುಂಚೆ 12 ಮಂದಿ ನಕ್ಸರು ಸಾವನಪ್ಪಿದ್ದಾರೆಂದು ವರದಿಯಾಗಿತ್ತು.