ಹರಿತಲೇಖನಿ ದಿನಕ್ಕೊಂದು ಕಥೆ: ದುರಾಸೆಯ ದುಷ್ಪರಿಣಾಮ !

Bad effect of greed!

ಓರ್ವ ಭಿಕ್ಷುಕನಿದ್ದನು. ದೇವರ ಮೇಲೆ ಶ್ರದ್ಧೆ ಇದ್ದ ಕಾರಣ ಅವನು ದಿನಪೂರ್ತಿ ನಾಮಜಪ ಮಾಡುತ್ತಿದ್ದನು. ಭಗವಂತನು ಅವನ ನಾಮಜಪದಿಂದ ಪ್ರಸನ್ನನಾಗಿ ಒಂದು ದಿನ ಅವನೆದುರು ಪ್ರಕಟವಾದನು.

ಭಗವಂತನು ‘ನಾನು ನಿನ್ನ ನಾಮಜಪದಿಂದ ಬಹಳ ಪ್ರಸನ್ನನಾಗಿದ್ದೇನೆ, ನಿನಗೆ ಬೇಕಾದದ್ದನ್ನು ಕೇಳು’ ಎಂದು ಹೇಳಿದನು. ಆಗ ಭಿಕ್ಷುಕನು ದುರಾಸೆಯಿಂದ ಚಿನ್ನದ ನಾಣ್ಯಗಳನ್ನು ಕೇಳಿದನು. ಭಗವಂತನು ‘ಚಿನ್ನದ ನಾಣ್ಯಗಳನ್ನು ಯಾವ ಪಾತ್ರೆಯಲ್ಲಿ ತೆಗೆದುಕೊಳ್ಳುವೆ ?’ ಎಂದು ಕೇಳಿದಾಗ ಭಿಕ್ಷುಕನು ತನ್ನ ಅಂಗಿಯನ್ನು ಮುಂದೆಮಾಡಿದನು.

ಭಗವಂತನು ಚಿನ್ನದ ನಾಣ್ಯಗಳನ್ನು ಕೊಡುವ ಮೊದಲು ‘ಎಲ್ಲಿಯ ವರೆಗೆ ನೀನು ಚಿನ್ನದ ನಾಣ್ಯಗಳನ್ನು ಕೇಳುವುದು ಬಿಡುವುದಿಲ್ಲ ಅಲ್ಲಿಯ ವರೆಗೆ ನಾನು ನಿನ್ನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕುತ್ತಲೇ ಇರುವೆನು ಆದರೆ ಭೂಮಿಯ ಮೇಲೆ ಚಿನ್ನದ ನಾಣ್ಯಗಳು ಬೀಳಬಾರದು. ನೆಲದ ಮೇಲೆ ಬಿದ್ದರೆ ಈ ನಾಣ್ಯಗಳು ಮಣ್ಣಾಗುವವು’ ಎಂದು ಹೇಳಿದನು. ಭಿಕ್ಷುಕನು ಒಪ್ಪಿಕೊಂಡ.

ಭಗವಂತನು ಭಿಕ್ಷುಕನ ಅಂಗಿಯಲ್ಲಿ ಚಿನ್ನದ ನಾಣ್ಯಗಳನ್ನು ಹಾಕತೊಡಗಿದ. ಅಂಗಿಯು ತುಂಬುತ್ತ ಹೋಯಿತು ಹಾಗೂ ಭಿಕ್ಷುಕನ ದುರಾಸೆಯು ಹೆಚ್ಚುತ್ತ ಹೋಯಿತು. ಅವನು ‘ಸಾಕು’ ಎಂದು ಹೇಳಲಿಲ್ಲ, ದೇವರು ಕೊಡುವುದನ್ನು ನಿಲ್ಲಿಸಲಿಲ್ಲ. ಕೊನೆಯಲ್ಲಿ ಚಿನ್ನದ ನಾಣ್ಯಗಳ ಭಾರವನ್ನು ಆ ಅಂಗಿಯು ತಡೆದುಕೊಳ್ಳಲಿಲ್ಲ, ಅಂಗಿಯು ಹರಿದು ಹೋಯಿತು. ಇದರಿಂದ ಎಲ್ಲ ನಾಣ್ಯಗಳು ನೆಲದ ಮೇಲೆ ಬಿದ್ದು ಮಣ್ಣಾದವು.

ಮನಸ್ಸಿನಲ್ಲಿ ದುರಾಸೆ ಇರುವುದರಿಂದ ಇಷ್ಟೊಂದು ನಾಣ್ಯಗಳು ದೊರೆತರೂ ಭಿಕ್ಷುಕನು ಬಡವನಾಗಿಯೇ ಉಳಿದನು.

ಮಿತ್ರರೇ, ಈ ಕಥೆಯಿಂದ ಭಿಕ್ಷುಕನು ಎಲ್ಲಿ ತಪ್ಪಿದನು ಎಂಬುದು ತಮ್ಮ ಗಮನಕ್ಕೆ ಬಂದಿರಬಹುದು. ಅವನು ದುರಾಸೆ ಬಿಟ್ಟು, ಅವನ ಜೀವನಕ್ಕೆ ಬೇಕಾಗುವಷ್ಟು ನಾಣ್ಯಗಳಲ್ಲಿ ಸಂತುಷ್ಟನಾಗಿದ್ದರೆ ಅವನಿಗೆ ಅಷ್ಟೂ ಚಿನ್ನದ ನಾಣ್ಯಗಳು ದೊರೆಯುತ್ತಿದ್ದವು.

ಭಗವಂತನು ನೀಡಿದ್ದರಲ್ಲಿ ಸಂತೋಷದಿಂದ ಇರಬೇಕು. ದುರಾಸೆಯು ಬಹಳ ಕೆಟ್ಟದ್ದಾಗಿದೆ. ದುರಾಸೆಯಿಂದ ನಮಗೆ ಏನೂ ದೊರೆಯುವುದಿಲ್ಲ. ತಮಗೆ ಯಾವಾಗಲೂ ಆನಂದದಿಂದ ಇರಬೇಕಿದ್ದರೆ ಸಿಕ್ಕಿರುವುದರಲ್ಲಿ ಸಂತೋಷದಿಂದ ಇರಲು ಕಲಿಯಿರಿ.

ಕೃಪೆ; ಹಿಂದೂ ಜಾಗೃತಿ.

ರಾಜಕೀಯ

ನಾವು NDA ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ನಮ್ಮ ಸಿದ್ದಾಂತವನ್ನ ಮರ್ಜ್ ಮಾಡಿಲ್ಲ: ನಿಖಿಲ್ ಕುಮಾರಸ್ವಾಮಿ

ನಾವು NDA ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ನಮ್ಮ ಸಿದ್ದಾಂತವನ್ನ ಮರ್ಜ್

ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವತ್ತಿದ್ರೂ ಜಾತ್ಯತೀತಾನೇ ಜಾತ್ಯಾತೀತವಾಗಿ ಉಳಿಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

[ccc_my_favorite_select_button post_id="121129"]
ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾಗಬೇಕಿದೆ: ಸಿಎಂ ಸಿದ್ದರಾಮಯ್ಯ

ದಕ್ಷಿಣ ಭಾರತದಲ್ಲಿ ಸರ್ವೋಚ್ಛ ನ್ಯಾಯಾಲಯದ ಪೀಠ ಸ್ಥಾಪನೆಯಾದರೆ ನ್ಯಾಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಬಹು ದೊಡ್ಡ ಹೆಜ್ಜೆಯನ್ನು ಇರಿಸಿದಂತಾಗುತ್ತದೆ: ಸಿಎಂ ಸಿದ್ದರಾಮಯ್ಯ (Cm Siddaramaiah)

[ccc_my_favorite_select_button post_id="121121"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ದೊಡ್ಡಬಳ್ಳಾಪುರ: ಕ್ಯಾಂಟರ್- ಟ್ರ್ಯಾಕ್ಟರ್ ನಡುವೆ ಬೆಳ್ಳಂಬೆಳಗ್ಗೆ ಅಪಘಾತ.. ಓರ್ವ ಸಾವು

ಕ್ಯಾಂಟರ್ ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ (Accident) ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ *** ಬಳಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

[ccc_my_favorite_select_button post_id="121087"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!