ದೊಡ್ಡಬಳ್ಳಾಪುರ (Doddaballapura); ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ಪತಿಯೇ ಪತ್ನಿಯನ್ನು ಹತ್ಯೆ (Murder) ಮಾಡಿರುವ ಆರೋಪ ತಾಲೂಕಿನ ನೇರಳೇಘಟ್ಟ ಗ್ರಾಮದಲ್ಲಿ ವರದಿಯಾಗಿದೆ.
ಮೃತ ಮಹಿಳೆಯನ್ನು 40 ವರ್ಷದ ರಾಧಮ್ಮ ಎನ್ನಲಾಗಿದ್ದು, ಹತ್ಯೆ ಆರೋಪದ ಪತಿ ಲಕ್ಷ್ಮಣ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ಪ್ರತಿ ನಿತ್ಯ ಇಬ್ಬರ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಕಳೆದ ರಾತ್ರಿ ಜಗಳ ವಿಕೋಪಕ್ಕೆ ತಿರುಗಿ ಲಕ್ಷ್ಮಣ ಹಲ್ಲೆ ಮಾಡಿದಾಗ ಗೋಡೆಗೆ ತಲೆ ಬಡಿಕೊಂಡ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ರಾಧಮ್ಮ ಸಾವನಪ್ಪಿದ್ದಾರೆ.
ವಿಷಯ ತಿಳಿದ ಪೊಲೀಸರು ಆರೋಪಿ ಲಕ್ಷ್ಮಣನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.