ದೊಡ್ಡಬಳ್ಳಾಪುರ (Doddaballapura): ಬಿರುಬಿಸಿಲ ನಡುವೆಯೂ ಶುಕ್ರವಾರ ನಗರದ ಹಲವೆಡೆ ಜನರು ಸಂಭ್ರಮದಿಂದ ಬಣ್ಣ ದೋಕುಳಿಯಾಡಿದರು. ಮಕ್ಕಳು ಪಿಚಕಾರಿಗಳ ಮೂಲಕ ಬಣ್ಣ ಎರಚಿಕೊಂಡರೆ, ದೊಡ್ಡವರು ಬಣ್ಣದ ನೀರಿನಲ್ಲಿ ಆಟವಾಡಿದರು.
ಯುವಕ-ಯುವತಿಯರು ರಸ್ತೆಗಳಲ್ಲೆ ಹೊಂಚು ಹಾಕಿ ತಮ್ಮ ಸ್ನೇಹಿತರಿಗೆ ಬಣ್ಣ ಎರಚುವ ಮೂಲಕ ಖುಷಿ ಕಂಡುಕೊಂಡರೆ, ಇನ್ನೂ ಕೆಲವರು ಶಾಲಾ-ಕಾಲೇಜು ಆವರಣದಲ್ಲಿ ಎಲ್ಲರಿಗೂ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದರು.
ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಶುಕ್ರವಾರ ಮಕ್ಕಳಾದಿಯಾಗಿ ಎಲ್ಲಾ ವಯಸ್ಸಿನವರು ಬಣ್ಣಗಳನ್ನು ಎರಚಿಕೊಂಡು ಸಂಭ್ರ ಮಿಸಿದರು. ಕೆಲವೆಡೆ ವ್ಯಾಪಾರಿ ಸಂಘಗಳು ಕೂಡ ಒಟ್ಟುಗೂಡಿ ಹೋಳಿ ಆಚರಿಸಿದ್ದು ವಿಶೇಷವಾಗಿತ್ತು.

ಇದೇ ವೇಳೆ ಮಾರ್ವಾಡಿ ಸಮುದಾಯದವರು ಮನೆ ಗಳಲ್ಲಿ ಒಂದೆಡೆ ಕೂಡಿ ಬಣ್ಣದೋಕುಳಿಯಾಡಿದರು.