ಬೆಂಗಳೂರು: ಬಡ ಮಹಿಳೆಯರಿಗಾಗಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಬಿಜೆಪಿಯವರು ಸಹಿಸದೆ ಪ್ರತಿಭಟನೆ ಮಾಡುತ್ತಿದ್ದಾರೆ, ಇವರ ನಾಟಕವನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹರಿಹಾಯ್ದರು.
ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರು ಜನಾಕ್ರೋಶ ಸಮಾವೇಶದ ಕುರಿತು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಜನ ಆಕ್ರೋಶಗೊಂಡಿದ್ದಾರೆ. ಬಿಜೆಪಿಯವರು ಮಾಡ್ತಿರುವ ಯಾತ್ರೆ ಕೇಂದ್ರದ ಮೇಲೆ ಮಾಡ್ತಿರುವ ಜನಾಕ್ರೋಶ ಯಾತ್ರೆ, ನಮ್ಮ ಮೇಲೆ ಮಾಡೋದಕ್ಕೆ ಅವರಿಗೆ ಏನೂ ಇಲ್ಲ ಎಂದರು.
52 ಸಾವಿರ ಕೋಟಿ ಹಣ ಬಜೆಟ್‌ನಲ್ಲಿಟ್ಟು ನಾವು ಬಡ ಮಹಿಳೆಯರಿಗಾಗಿ, ರಾಜ್ಯದ ಜನರಿಗೆ ಸಹಾಯ ಮಾಡ್ತಿದ್ದೇವೆ. ನಿನ್ನೆ ತಾನೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಟ್ಯಾಕ್ಸ್ ಹಾಕಿ 103ರೂಪಾಯಿ ಮಾಡಿದ್ದಾರೆ. ಲೀಟರ್ ಗೆ 43ರೂಪಾಯಿ ಅಷ್ಟು ಲಾಭ ಅವರಿಗೆ ಸಿಗ್ತಿದೆ, 43ಲಕ್ಷ ಕೋಟಿ ರೂಪಾಯಿ ಅವರಿಗೆ ಲೂಟಿ ಹೊಡಿಯಲು ಇದರಲ್ಲಿ ಸಿಗ್ತಿದೆ ಎಂದರು.
ರೈತರ ಬದುಕನ್ನ ಉಳಿಸಲು ನಾವು ಹಾಲಿನ ದರ ಏರಿಕೆ ಮಾಡಿದ್ದು, ಭೂಸಾ ಹಿಂಡಿ ಬೆಲೆಯಾಕೆ ಕಡಿಮೆ ಮಾಡಿಸೊಕೆ ಆಗಿಲ್ಲ. ಬೇರೆ ಬೇರೆ ರಾಜ್ಯದಲ್ಲಿ ಹಾಲಿನೆ ದರ ಹೆಚ್ಚಿದೆ. ನಾವು ರೈತರನ್ನ ಉಳಿಸಲು ಈ ತೀರ್ಮಾನ ತೆಗೆದುಕೊಂಡಿದ್ದು, ನೀರಿನ ಬೆಲೆ ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಿದ್ದೇವೆ.
ಇನ್ನೂ ಹೆಚ್ಚು ಮಾಡಬಹುದಿತ್ತು, ಚಿನ್ನದ ದರ ಲೆಕ್ಕಾ ಹಾಕಿ ಈಗ ಎಷ್ಟಾಗಿದೆ, ಮೂರು ವರ್ಷದ ಹಿಂದೆ ಎಷ್ಟಿತ್ತು ಈಗ ಎಷ್ಟಾಗಿದೆ? ಯುಪಿಎ ಸರ್ಕಾರ ಇದ್ದಾಗ 28 ಸಾವಿರ ಇತ್ತು ಎಂದರು.
ಸಿಮೆಂಟ್, ಕಬ್ಬಿಣ, ವೆಹಿಕಲ್, ಮೊಬೈಲ್, ಟಿವಿ, ಪ್ರಿಡ್ಜ್ ಬೆಲೆ ಹೆಚ್ಚಾಗಿದೆ. ಇದೆಲ್ಲಾ ಬಿಜೆಪಿಯವರಿಗೆ ಕಾಣಿಸ್ತಿಲ್ವಾ. ಏನ್ರಿ ಅಶೋಕ್ ,ವಿಜಯೇಂದ್ರ ಕಾಣಿಸ್ತಿಲ್ವಾ? ಇದು ರೈತರ ವಿರೋದಿ ಪಕ್ಷ,. ಬ್ಯಾಂಕ್‌ನಲ್ಲಿ ಎಲ್ಲದಕ್ಕೂ ದುಡ್ಡೂ ವಸೂಲು ಮಾಡ್ತಿದ್ದಾರೆ.. ಖರ್ಗೆ ಸಾಹೇಬ್ರು ಹೇಳ್ತಿದ್ರು ಇದು ದೊಡ್ಡ ಸ್ಕ್ಯಾಮ್ ಆಗಿದೆ ಎಂದು, ಚೆಕ್ ಬುಕ್ ತಕೊಂಡ್ರು ದುಡ್ಡು, ಪ್ರತಿ ಟ್ರಾನ್ಸಾಕ್ಷನ್ ಗೂ ದುಡ್ಡು. ನೀವು ಇದೆಲ್ಲದಕ್ಕೂ ಉತ್ತರ ಕೊಡಬೇಕು. .
ನಿಮ್ಮ ನ್ಯಾಷನಲ್ ಲೀಡರ್ ಫೋಟೋ ಹಾಕೊಳ್ಳಿ
ಪೊಸ್ಟರ್‌ನಲ್ಲಿ ನಂದು, ಸಿದ್ದರಾಮಯ್ಯ ಪೋಟೋ ಅಲ್ಲಾ ನಿಮ್ಮ ನ್ಯಾಷನಲ್ ಲೀಡರ್ ಪೊಟೋ ಹಾಕಿ.
ಮಹಿಳೆಯರೆ ಗಮನಿಸಿ ನಿಮಗಾಗಿ ಗ್ಯಾರಂಟಿ ಯೋಜನೆ ನೀಡಿದರೆ ಅದರ ವಿರುದ್ಧವಾಗಿ ಬಿಜೆಪಿ ಹೋರಾಟ, ನಾವು ಹೀಗೆ ಗ್ಯಾರಂಟಿ ಯೋಜನೆಗಳನ್ನ ಇಂಪ್ಲಿಮೆಂಟ್ ಮಾಡ್ತೇವೆ ಎಂದು ಅದ್ಕೊಂಡಿರಲಿಲ್ಲ. ಈಗ ತಳಮಳಗೊಂಡಿದ್ದಾರೆ.
ಕೇಂದ್ರದ ವಿರುದ್ಧ ಪ್ರತಿಭಟನೆ
ಬಿಜೆಪಿಯವರು ಹೋರಾಟ ನಿಲ್ಲಿಸಿ ಎನ್ನಲ್ಲ ನಾನು, ಜನಾಕ್ರೋಶ ಯಾತ್ರೆಯನ್ನು ಮೊದಲು ಕೇಂದ್ರ ಸರ್ಕಾರದ ವಿರುದ್ಧ ಎಂದು ಹಾಕಿ ಹೋರಾಡಿ. ಇದೇ 17ರಂದು ಜನಾಕ್ರೋಶ ಯಾತ್ರೆ ಮಾಡ್ತೇವೆ, ನಮ್ಮ ಸಿಎಂ ಸಿದ್ದರಾಮಯ್ಯ ನೇತ್ರತ್ವದಲ್ಲಿ ಮಾಡ್ತೇವೆ. ಸುಜ್ರೇವಾಲ ಅವರು ಇರ್ತಾರೆ. ನಾನು ಭಾಗಿಯಾಗ್ತೇನೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡ್ತೇವೆ, ಸರ ಬಿಡಿ ಮಾಂಗಲ್ಯ ತೆಗೆದುಕೊಳ್ಳೊಕೆ ಆಗಲ್ಲ. ಅಮೇರಿಕಾದ ನಿರ್ಧಾರದ ಬಗ್ಗೆ ಯಾಕೆ ಮಾತಾಡ್ತಿಲ್ಲ, ಫಾರಿನ್ ಪಾಲೀಸಿ ಬಗ್ಗೆ ಮಾತಾಡ್ತಿಲ್ಲ. ನಾವು ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮಾಡ್ತೇವೆ ಎಂದರು.