ಉತ್ತರಕಾಶಿ (Harithalekhani): ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕೆಂಬ ರೀಲ್ಸ್ (Reels) ಹುಚ್ಚಿನಿಂದಾಗಿ ಅನೇಕ ಅವಾಂತರಗಳು ಸೃಷ್ಟಿಯಾಗಿ, ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದರು ಜನತೆಗೆ ಬುದ್ದಿ ಬರುತ್ತಿಲ್ಲ.
ಅದೇ ರೀತಿ ರೀಲ್ಸ್ ಮಾಡಿ ವೈರಲ್ ಆಗಬೇಕು ಎಂದುಕೊಂಡ ಗೃಹಿಣಿಯೋರ್ವರು ಗಂಗೆಯ ಪಾಲಾಗಿದ್ದಾರೆ.
ಉತ್ತರಪ್ರದೇಶದ ಉತ್ತರಕಾಶಿಯ ಮಣಿಕರ್ಣಿಕಾ ಘಾಟ್ ನಲ್ಲಿ ಈ ಘಟನೆ ನಡೆದಿದ್ದು, ಗಂಗಾ ನದಿಯಲ್ಲಿ ರೀಲ್ಸ್ ಮಾಡಲು ಮುಂದಾಗಿ ಗೃಹಿಣಿ ಮಗುವಿನ ಕಣ್ಣ ಮುಂದೆಯೇ ನೀರಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH : In a heartbreaking incident, a young woman lost her life while filming a reel in the river Ganga. She was swept away by the river’s strong current.#Uttarkashi #Ganga #StaySafe #ManikarnikaGhat pic.twitter.com/nQFmvdUM5Y
— upuknews (@upuknews1) April 16, 2025
ಈ ವಿಡಿಯೋದಲ್ಲಿ ಗಮನಿಸಿದ್ರೆ, ನದಿಯಲ್ಲಿ ನೀರಿನ ಸೆಳೆತ ಎಷ್ಟು ಬಲವಾಗಿದೆ ಅನ್ನೋದು ಗೊತ್ತಾಗುತ್ತೆ. ಆದ್ರೆ ಅದ್ಯಾವುದನ್ನೂ ಲೆಕ್ಕಿಸದೆ ಮಗುವಿನ ಕೈಗೆ ಮೊಬೈಲ್ ನೀಡಿ ಗಂಗಾ ನದಿಯಲ್ಲಿ ರೀಲ್ಸ್ ಮಾಡಲು ನೀರಿಗಿಳಿದ ಮಹಿಳೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ರೀತಿಯ ಸಾಕಷ್ಟು ಘಟನೆಗಳು ಮರುಕಳಿಸುತ್ತಲೇ ಇದ್ದು ಇನ್ನಾದ್ರೂ ರೀಲ್ಸ್ ಹುಚ್ಚಾಟಕ್ಕೆ ತಮ್ಮನ್ನು ತಾವೇ ಅಪಾಯಕ್ಕೆ ದೂಡಿಕೊಳ್ಳುವ ಪ್ರವೃತ್ತಿಯನ್ನು ಜನ ಬಿಡಬೇಕಿದೆ.