ಮೈಸೂರು (Harithalekhani): ಕುಡಿತಕ್ಕಾಗಿ ಹಣ ನೀಡದ ಕಾರಣ ಹೆತ್ತ ತಾಯಿಯನ್ನೇ ಮಗ ಕೊಲೆ (Murder) ಮಾಡಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲುಕಪ್ಪೆ ಬಳಿಯ ನವಿಲೂರು ಗ್ರಾಮದಲ್ಲಿ ನಡೆದಿದೆ.
ತಮ್ಮಯ್ಯ ಅವರ ಪತ್ನಿ ಗೌರಮ್ಮ (60 ವರ್ಚ) ಕೊಲೆಯಾದ ಮಹಿಳೆ. ಇವರ ಎರಡನೇ ಮಗ ಸ್ವಾಮಿ (40 ವರ್ಷ) ಕೊಲೆ ಆರೋಪಿ ಯಾಗಿದ್ದಾನೆ.
ಪಿರಿಯಾಪಟ್ಟಣ ತಾಲೂಕಿನ ನವಿಲೂರು ಗ್ರಾಮದ ತಮ್ಮಯ್ಯ ತಾವು ಸಾಕಿದ್ದ ಒಂದು ಜತೆ ಎತ್ತುಗಳನ್ನು ಮಾರಾಟ ಮಾಡಿದ್ದರು. ತನಗೂ ಇದರಲ್ಲಿ ಪಾಲು ಕೊಡಬೇಕು ಎಂದು ಮಗ ಸ್ವಾಮಿ ಆಗಾಗ ಗಲಾಟೆ ಮಾಡುತ್ತಿದ್ದರು. ಈ ನಡುವೆ ತಮ್ಮಯ್ಯ ಆರೋಗ್ಯ ಸರಿಯಿಲ್ಲದ ಕಾರಣ ಬೈಲುಕುಪ್ಪೆ ಸಾರ್ವಜನಿಕ ಆಸ್ಪತ್ರೆಗೆ ತೆರಳಿದ್ದರು.
ಆಗ ಮನೆಯಲ್ಲಿ ತಾಯಿ ಒಬ್ಬರೇ ಮಲಗಿದ್ದ ವೇಳೆ ಬಂದು ಕುಡಿಯಲು ಹಣ ಕೇಳಿದ್ದಾನೆ. ಆಗ ತಾಯಿ ಕೊಡದೇ ಇದ್ದಾಗ ಕೊಲೆ ಮಾಡಿದ್ದಾನೆ ಎಂದು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಂದೆ, ಮಗ ಸಾವು
ಭದ್ರಾವತಿ: ತಾಲೂಕಿನ ಬಿಆರ್ ಪಿ ಸಮೀಪದ ಭದ್ರಾನದಿಗೆ ಇಳಿದಿದ್ದ ಮಗನನ್ನ ರಕ್ಷಿಸಲು ಹೋದ ತಂದೆಯೂ ಸಹ ನೀರುಪಾಲಾಗಿದ್ದಾರೆ.
ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿಲ್ಲ.
ನಗರದ ಭೂತನಗುಡಿ ನಿವಾಸಿ ಹಫೀಜ್ ಜಾಬರ್ ಮತ್ತು ಅವರ 14 ವರ್ಷದ ಪುತ್ರ ಜಾವದ್ ಮತ್ತು ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು. ಊಟ ಮುಗಿಸಿ ಪುತ್ರ ಜಾವಾದ್ ಹಿನ್ನೀರಿನಲ್ಲಿ ಇಳಿದಿದ್ದಾನೆ. ನೀರಿನ ಅಳತೆಯನ್ನ ಅಂದಾಜಿಸದ ಜಾವದ್ ನೀರು ಪಾಲಾಗಿದ್ದಾನೆ.
ಆತನನ್ನ ರಕ್ಷಿಸಲು ತಂದೆ ಜಾಬರ್ ನೀರು ಪಾಲಾಗಿದ್ದಾರೆ.
ಎಸ್ ಎಸ್‌ಎಲ್‌ಸಿ ವಿದ್ಯಾರ್ಥಿಯಾದ ಜಾವದ್ ಶವವಾಗಿ ಪತ್ತೆಯಾದರೆ ತಂದೆ ಜಾಬರ್‌ನ ಹುಡುಕಾಟ ನಡೆದಿದೆ.
ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.