ಗೌರಿಬಿದನೂರು: ಗಲಾಟೆ ಮಾಡಿದನೆಂಬ ಕಾರಣ ತಂದೆ ಗದರಿದ್ದಕ್ಕೆ, ಆಟವಾಡುವೆ ಎಂದು ಮನೆ ಬಿಟ್ಟು ಹೋಗಿರುವ 14 ವರ್ಷದ ಬಾಲಕ ಹಿಂತಿರುಗಿ ಬಂದಿಲ್ಲ, ಇದರಿಂದಾಗಿ ಪೋಷಕರು ಕಂಗಾಲಾಗಿರುವ ಘಟನೆ ತೊಂಡೇಬಾವಿಯಲ್ಲಿ ನಡೆದಿದೆ.
ತಾಲೂಕಿನ ತೊಂಡೇಬಾವಿ ರೈಲ್ವೇ ನಿಲ್ದಾಣದ ನಿವಾಸಿ
ವೆಂಕಟೇಶ್ ಅವರು ಈ ಕುರಿತಂತೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಣೆಯಾದ ಬಾಲಕನನ್ನು ರಾಜೇಶ್ ಯಾದವ್ ( 14 ವರ್ಷ) ಎನ್ನಲಾಗಿದ್ದು, ಗುಂಡು ಮುಖ, 4.6 ಅಡಿ ಎತ್ತರ, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಟಿ ಶರ್ಟ್, ಜೀನ್ಸ್ ಪ್ಯಾಂಟ್ ಧರಿಸಿದ್ದ ಎನ್ನಲಾಗಿದೆ.
ಈ ಬಾಲಕ ಸುಳಿವು ಸಿಕ್ಕಲ್ಲಿ ಸಮೀಪ ಪೊಲೀಸ್ ಠಾಣೆ, ಮಂಚೇನಹಳ್ಳಿ ಪೋಲೀಸ್ ಠಾಣೆ ಮೊಬೈಲ್ ಸಂಖ್ಯೆ 9480802589, ತಂದೆ ವೆಂಕಟೇಶ್ ಮೊಬೈಲ್ ಸಂಖ್ಯೆ 9606114467ಗೆ ತಿಳಿಸಲು ಮನವಿ ಮಾಡಿದ್ದಾರೆ.