ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ನೀಡುತ್ತಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ಜೊತೆಗೆ ಎರಡು ಬ್ಯಾಂಕ್‌ಗಳು ವಿಲೀನ ಗೊಂಡಿದೆ.
ಈ ಕುರಿತಂತೆ ಗ್ರಾಹಕರಿಗೆ ಬ್ಯಾಂಕ್ ಸಂದೇಶ ಕಳುಹಿಸಿದ್ದು, ಭಾರತ ಸರ್ಕಾರದ ನಿರ್ದೇಶನದಂತೆ, ಕೆಜಿಬಿ(ಬಳ್ಳಾರಿ) ಮತ್ತು ಕೆವಿಜಿಬಿ(ಧಾರವಾಡ) ವಿಲೀನಗೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಹೆಸರಿನಲ್ಲಿ ಮೇ 1 ರಿಂದ ಕಾರ್ಯ ನಿರ್ವಹಿಸಲಿದೆ ಎಂದಿದೆ.
ನೂತನ ಬ್ಯಾಂಕಿನ ಸೇವಾ ವ್ಯಾಪ್ತಿ ಕರ್ನಾಟಕದಾದ್ಯಂತ. ಉತ್ತಮ ಸೇವೆಗೆ ಬ್ಯಾಂಕು ಸದಾ ಬದ್ಧ ಎಂದು ಬಳ್ಳಾರಿ ಕರ್ನಾಟಕ ಗ್ರಾಮೀಣ ಬ್ಯಾಂಕ್ (KGB) ಅಧ್ಯಕ್ಷರು ತಿಳಿಸಿದ್ದಾರೆ.