ನವದೆಹಲಿ: ಭಾರತೀಯ ಸೇನೆಯ ಅಪರೇಷನ್ ಸಿಂಧೂರ (Operation Sindoora) ದಾಳಿಗೆ ಪಾಪಿ ಪಾಕಿಸ್ತಾನ ತತ್ತರಿಸಿಹೋಗಿದೆ.
ಅಮೇರಿಕಾ ಅಧ್ಯಕ್ಷತೆಯಲ್ಲಿ ಶುಕ್ರವಾರ ರಾತ್ರಿ ನಡೆದ ಸುದೀರ್ಘ ಸಂಧಾನ ಸಭೆಯ ನಂತರ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ.
ಆದರೆ ತನ್ನ ಕುತಂತ್ರಿ ಬುದ್ದಿ ಬಿಡದ ಪಾಕ್ ಸೇನೆ, ಕದನ ವಿರಾಮ ಘೋಷಣೆ ಬಳಿಕವೂ ದಾಳಿ ನಡೆಸಿ ಭಾರತೀಯರನ್ನು ಕೆರಳಿಸಿದೆ.
ಇಂದು ಮಧ್ಯಾಹ್ನ ನಡೆಯಬೇಕಿದ್ದ ಭಾರತ ಮತ್ತು ಪಾಕ್ ನಡುವಿನ ಡಿಜಿಎಂಒಗಳ ಸಭೆಯನ್ನು ಮುಂದೂಡಲಾಗಿದ್ದು, ಇದೇ ದಿನ ಸಂಜೆ 5 ಗಂಟೆಯ ಬಳಿಕ ನಡೆಯುವ ಸಾಧ್ಯತೆಯಿದೆ.
ಇದರ ನಡುವೆ ಉಗ್ರರ ಸಂಹಾರ ಎಂದು ಆರಂಭಿಸಿದ ಆಪರೇಷನ್ ಸಿಂಧೂರವನ್ನು ಏಕಾಏಕಿ ಅಮೇರಿಕಾಗೆ ಮಣಿದು ಕದನ ವಿರಾಮ ಘೋಷಿಸಿದ್ದಕ್ಕೆ ಕೇಂದ್ರ ಸರ್ಕಾರದ ಬಗ್ಗೆ ಆಕ್ರೋಶ ದೇಶವಾಸಿಗಳಲ್ಲಿ ವ್ಯಾಪಕವಾಗಿದ್ದು, ದೇಶದ ಒಗ್ಗಟ್ಟನ್ನು ಅಮೇರಿಕಾದ ಮುಂದೆ ಮಂಡಿ ಊರಿಸಿದ್ದಾರೆಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಇಂದು ರಾತ್ರಿ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
ಹೌದು ಇಂದು (ಮೇ 12) ರಾತ್ರಿ 8 ಗಂಟೆಗೆ ಆಪರೇಷನ್ ಸಿಂಧೂರದ ನಂತರ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra modi ಮಾತನಾಡಲಿದ್ದಾರೆ.
ಅಮೇರಿಕಾದ ಒತ್ತಡಕ್ಕೆ ಮಣಿದಿದ್ದು ಏಕೆ..? ಪಾಕಿಸ್ತಾನಕ್ಕೆ ಯಾವ ಸಂದೇಶ ರವಾನೆ ಮಾಡಲಿದ್ದಾರೆ..? ಕದನ ವಿರಾಮ ಜಾರಿಯಲ್ಲಿ ಇರುವುದರಿಂದ ಮುಂದೇನು.? ಆಪರೇಷನ್ ಸಿಂಧೂರ ಇಲ್ಲಿಗೆ ಸಮಾಪ್ತಿಯಾಯಿತಾ ಅಥವಾ ಮುಂದುವರೆಯಲಿದ್ಯಾ, ಎಂಬಿತ್ಯಾದಿ ದೇಶವಾಸಿಗಳಲ್ಲಿನ ಪ್ರಶ್ನೆಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡುವ ನಿರೀಕ್ಷಿಯಿದೆ.