ಸೌದಿ ಅರೇಬಿಯಾ: ಈಗಾಗಲೇ ಭಾರತ-ಪಾಕಿಸ್ತಾನ (India-Pakistan) ನಡುವೆ ಏಕಾಏಕಿ ಕದನ ವಿರಾಮದ (Ceasefire) ಘೋಷಣೆ ಕುರಿತಂತೆ ಅಮೇರಿಕಾದ (America) ಮಧ್ಯಸ್ಥಿಕೆಗೆ ಕಾರಣ, ಅಗತ್ಯ ಏನು ಎಂಬ ಕುರಿತು ಭಾರತದಾದ್ಯಂತ ವ್ಯಾಪಕ ಅನುಮಾನ, ಆಕ್ರೋಶಕ್ಕೆ ಕಾರಣವಾಗಿದ್ದರೆ, ಮೋದಿ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸುತ್ತಿವೆ.
ಇದರ ಬೆನ್ನಲ್ಲೇ ಮತ್ತೆ ಇಂದು ಕೂಡ ಸೌದಿ ಅರೇಬಿಯಾ ಪ್ರವಾಸದಲ್ಲಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತ – ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಗ್ನತೆಯನ್ನು ಕದನ ವಿರಾಮ ಘೋಷಿಸಲು ನನ್ನ ಯಶಸ್ವಿ ಆಳ್ವಿಕೆ ಕಾರಣ ಎನ್ನುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇಂದು ಅಧಿವೇಶನ ಒಂದರಲ್ಲಿ ಮಾತನಾಡಿದ ಅವರು, ಮೂರ್ ನಾಲ್ಕು ವರ್ಷಗಳಿಂದ ಬಗೆ ಹರಿಸಲಾಗದ ಸಮಸ್ಯೆಗಳನ್ನು ನನ್ನ ಅಳ್ವಿಕೆಯಲ್ಲಿ ಯಶಸ್ವಿಯಾಗಿ ಬಗೆ ಹರಿಸಲಾಗುತ್ತಿದೆ. ಇದಕ್ಕೆ ಸಾಕ್ಷಿ ಭಾರತ-ಪಾಕ್ ನಡುವಿನ ಕದನ ವಿರಾಮ ಎಂದಿದ್ದಾರೆ.
ಮುಂದುವರಿದ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಕಡಿಮೆ ಮಾಡಲು, ನಾನು ಆಯೋಜಿಸುತ್ತಿರುವ ಭೋಜನಕೂಟದಲ್ಲಿ ಭಾಗವಹಿಸಬೇಕು.
ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ನೆಲೆಸಲು ನಾವು ಮಧ್ಯಸ್ಥಿಕೆ ವಹಿಸಿ ಕದನ ವಿರಾಮ ಒಪ್ಪಂದ ಮಾಡಿಕೊಂಡೆವು.
ಯುದ್ಧ ನಿಲ್ಲಿಸಿ ವ್ಯಾಪಾರ ಮಾಡಲು ಸಲಹೆ ನೀಡಿದೆವು. ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡು ಬಲಿಷ್ಠ ರಾಷ್ಟ್ರಗಳ ನಾಯಕರು ಒಪ್ಪಿದ್ದಾರೆ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸಲು ಮಾತುಕತೆ ನಡೆಸುತ್ತಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಇದೇ ವೇಳೆ ಹೇಳಿದ್ದಾರೆ.