ದೊಡ್ಡಬಳ್ಳಾಪುರ: ಅನಾರೋಗ್ಯ ಕಾರಣ ನಿನ್ನೆ ನಿಧನರಾದ ದೇವಾಂಗ ಮಂಡಳಿ ಮಾಜಿ ಗೌರವ ಕಾರ್ಯದರ್ಶಿ ಎ.ಎಸ್.ಕೇಶವ (A.S.Keshava) ಅವರಿಗೆ ದೇವಾಂಗ ಮಂಡಳಿ (Devanga Mandali) ವತಿಯಿಂದ ಸಂತಾಪ ಸಭೆ ನಡೆಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು
ನಗರದ ದೇವಲ ಮಹರ್ಷಿ ವಿದ್ಯಾನಿಕೇತನ ಪ್ರೌಢಶಾಲೆಯ ಆವರಣದಲ್ಲಿ ಎ.ಎಸ್.ಕೇಶವ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ದೇವಾಂಗ ಮಂಡಳಿಯ ಅಧ್ಯಕ್ಷರಾದ ಎಂಜಿ ಶ್ರೀನಿವಾಸ್, ಉಪಾಧ್ಯಕ್ಷ ಪಿ ಗೋಪಾಲ್, ಕಾರ್ಯದರ್ಶಿ ಎಂಜಿ ಅನರನಾಥ್, ಸಹ ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಅಖಿಲೇಶ್ ಸೇರಿದಂತೆ ನಿರ್ದೇಶಕರು ಶಾಲೆಯ ಸಿಬ್ಬಂದಿಗಳು ಇದ್ದರು.