ದೊಡ್ಡಬಳ್ಳಾಪುರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಅಂತೆಯೇ ದೊಡ್ಡಬಳ್ಳಾಪುರ ತಾಲೂಕಿನಾಧ್ಯಂತ ರಾತ್ರಿಯಿಡೀ ಮಳೆ (Rain) ಸುರಿದಿದೆ.
ಭಾನುವಾರ ರಾತ್ರಿ ಬಳಿಕ ಶುರುವಾದ ಮಳೆ ಇಡೀ ರಾತ್ರಿ ಒಂದೇಸಮನೆ ಸುರಿಯಿತು. ಇಂದು ಬೆಳಿಗ್ಗೆಯೂ ಜಿಟಿ ಜಿಟಿ ಮಳೆ ಮುಂದುವರಿದಿದೆ.
ವರುಣನ ಅವಾಂತರಕ್ಕೆ ಜನಜೀವನ ಆಸ್ತವ್ಯಸ್ತವಾಗಿದೆ. ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಸ್ತೆಯಲ್ಲಿ ನೀರು ನಿಂತಲ್ಲೇ ನಿಂತಿವೆ.
ಕಸಬಾ, ದೊಡ್ಡಬೆಳವಂಗಲ, ಮಧುರೆ ತೂಬಗೆರೆ, ಸಾಸಲು ಸೇರಿದಂತೆ ಎಲ್ಲೆಡೆ ವ್ಯಾಪಕ ಮಳೆಯಾಗಿದೆ.
ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಕೆರೆ ಏರಿಯ ಮೇಲಿನ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ತುಂಬಿರುವುದು.