ದೊಡ್ಡಬಳ್ಳಾಪುರ: ನಗರದ ಮಾರುಕಟ್ಟೆ ಚೌಕ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ (Government School) 2002-03ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಸ್ನೇಹ ಮಿಲನ ಕಾರ್‍ಯಕ್ರಮ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ನಿವೃತ್ತ ಶಿಕ್ಷಕರಾದ ಕೆ.ಮಹಾಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಬಿ.ವಿ.ಸೂರ್‍ಯಪ್ರಕಾಶ್ ಉದ್ಘಾಟಿಸಿದರು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಹಿಂದಿನ ದಿನಗಳನ್ನು ಸ್ಮರಿಸಿ, ನೆನೆಪುಗಳನ್ನು ಹಂಚಿಕೊಂಡರು.
ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರಾದ ಕೆ.ಆರ್.ಉಮಾದೇವಿ, ಕೆ.ಜಿ.ಮುನಿರಾಜು, ಬನಪ್ಪ, ಬೊಮ್ಮರಾಜು, ಎಂ.ಎಲ್. ನಾಗರತ್ನ, ಬಿ.ಎಲ್.ಕವಿತಾ, ಬಿ.ಸರೋಜಾ, ಕೆ. ಎಸ್.ಚಂದ್ರಕಲಾ, ಎ.ಕುಬೇರಪ್ಪ , ಡಿ.ಮಂಜುನಾಥ, ಎಚ್.ಪುಟ್ಟಗಂಗಮ್ಮ , ಎನ್. ಆರ್.ಲತಾ ಅವರನ್ನು ಸನ್ಮಾನಿಸಲಾಯಿತು.