Rain causes chaos in Bengaluru: BY Vijayendra objects to state government's fun

ಬೆಂಗಳೂರಲ್ಲಿ ಮಳೆ‌ ನೀರಿನಿಂದ ಅವಾಂತರ: ರಾಜ್ಯ ಸರಕಾರದ ಮೋಜು ಎಂದು ಬಿವೈ ವಿಜಯೇಂದ್ರ ಆಕ್ಷೇಪ

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬೆಂಗಳೂರಿನಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಪೂರ್ವಭಾವಿ ಕೆಲಸ ಮಾಡಿಸುವುದನ್ನು ಬಿಟ್ಟು ಹೊಸಪೇಟೆಯಲ್ಲಿ ಮೋಜು ಮಾಡುತ್ತಿದೆ. ಎರಡು ವರ್ಷ ಪೂರ್ಣಗೊಳಿಸಿದ್ದನ್ನು ತಿಳಿಸಿ ಮೋಜು ಮಾಡುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಟೀಕಿಸಿದ್ದಾರೆ.

ಬಿಜೆಪಿ ನಿಯೋಗವು ಇಂದು ಸಿಲ್ಕ್ ಬೋರ್ಡಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿತ್ತು. ಮಳೆ ಹಾನಿಗೆ ಕಾರಣಗಳು, ಆಗಿರುವ ಹಾನಿ ಕುರಿತು ನಿಯೋಗವು ಪರಿಶೀಲಿಸಿತು. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.

ಬೆಂಗಳೂರಿನ ಅಭಿವೃದ್ಧಿ ಕಾಮಗಾರಿಗಳ ಕಡೆ ಮುಖ್ಯಮಂತ್ರಿಗಳು ಗಮನ ಕೊಡಬೇಕು. ಕೆಲಸಗಳನ್ನು ತ್ವರಿತ ಗತಿಯಲ್ಲಿ ಮುಗಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರಕಾರವು ಒಂದು ಅಯೋಗ್ಯ ಸರಕಾರ ಎಂದು ಅವರು ಆರೋಪಿಸಿದರು. ಈ ಸರಕಾರಕ್ಕೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಟೀಕಿಸಿದರು.

ಕೆಲವೇ ಕೆಲವು ಗಂಟೆ ಮಳೆ ಬಂದ ಸಂದರ್ಭದಲ್ಲಿ ಇಡೀ ಬೆಂಗಳೂರು ಮಹಾನಗರವು ಜಲಾವೃತವಾಗಿದೆ. ನಾಲ್ಕು ಜನರು ಪ್ರಾಣ ಕಳಕೊಂಡಿದ್ದಾರೆ.

ಡಿಕೆ ಶಿವಕುಮಾರ್ (DK Shivakumar), ಸಿದ್ದರಾಮಯ್ಯನವರು (Siddaramaiah) ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿಗೆ ಕೇವಲ ಗ್ರೇಟರ್ ಹೆಸರು ಸೇರಿಸಿದರೆ ಸಾಕಾಗುವುದಿಲ್ಲ ಸ್ವಾಮೀ.. ಎಂದರಲ್ಲದೆ, ಬೆಂಗಳೂರಿನ ಅಭಿವೃದ್ಧಿಗೆÉ ಎಷ್ಟು ಸಾವಿರ ಕೋಟಿ ಅನುದಾನ ಕೊಡಲಾಗಿದೆ ಎಂದು ಪ್ರಶ್ನಿಸಿದರು.

ಹಿಂದೆ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಸಾವಿರಾರು ಕೋಟಿ ಅನುದಾನದಲ್ಲಿ ಅನೇಕ ಕಾಮಗಾರಿಗಳು ನಡೆಯುತ್ತಿತ್ತು. ಆ ಗುತ್ತಿಗೆದಾರರಿಗೆ ಹಣ ಪಾವತಿಸದ ಕಾರಣ ಇವತ್ತು ಕೆಲಸ ಕಾರ್ಯಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೇ ನಿಂತಿವೆ ಎಂದು ಗಮನ ಸೆಳೆದರು.

ಡಿ.ಕೆ.ಶಿವಕುಮಾರ್ ಅವರು ಟಾಲೆಸ್ಟ್ ಟವರ್, ಸುರಂಗ ರಸ್ತೆ ಕುರಿತು ಮಾತನಾಡುತ್ತಾರೆ. ಬೆಂಗಳೂರಿನ ಮಹಾಜನತೆ, ಜನಸಾಮಾನ್ಯರು ಇವುಗಳನ್ನು ಕೇಳುತ್ತಿಲ್ಲ. ಬಂದ ಮಳೆಯ ನೀರು ಸರಿಯಾಗಿ ಹೋಗುವ ವ್ಯವಸ್ಥೆ ಆಗಬೇಕು. ರಾಜಕಾಲುವೆಯನ್ನು ಸರಿಪಡಿಸಬೇಕು. ಕೆರೆಗಳ ಒತ್ತುವರಿ ಸರಿಪಡಿಸಲು ಬಯಸುತ್ತಾರೆ ಎಂದು ತಿಳಿಸಿದರು.

ಹೂಳು ತೆಗೆಯುವಂತೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ನಿನ್ನೆ ಅಧಿಕಾರಿಗಳಿಗೆ ಹೇಳುತ್ತಿದ್ದರು. ಯಾಕೆ ಮಳೆ ಬರುವುದು ಗೊತ್ತಿಲ್ಲವೇ? ಮಳೆ ಯಾವ ತಿಂಗಳಲ್ಲಿ ಬರುತ್ತದೆಂದು ಇವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದರು. ಅಧಿಕಾರಿಗಳಿಗೆ ಸರಿಯಾಗಿ ತಿಳಿಸಿ ಮುಂಗಾರು ಮಳೆಗೆ ಮೊದಲು ಕೆಲಸ ಯಾಕೆ ಮಾಡಿಸಿಲ್ಲ ಎಂದು ಕೇಳಿದರು.

ಗ್ರೇಟರ್ ಬೆಂಗಳೂರು, ವಾಟರ್ ಬೆಂಗಳೂರು ಆಗಿದೆ

ವಿರೋಧ ಪಕ್ಷದ ನಾಯಕ ಆರ್.ಅಶೋಕ (R Ashoka) ಮಾತನಾಡಿ, ಬಿಜೆಪಿ ಅವಧಿಯಲ್ಲಿ 1,600 ಕೋಟಿ ರೂ. ಹಣವನ್ನು ಬೆಂಗಳೂರಿನ ಅಭಿವೃದ್ಧಿಗೆ ನೀಡಿದ್ದು, ಆ ಕಾಮಗಾರಿಗಳನ್ನು ಕಾಂಗ್ರೆಸ್‌ ಸರ್ಕಾರ ರದ್ದು ಮಾಡಿದೆ. ಆ ಕಾಮಗಾರಿಗಳು ನಡೆದಿದ್ದರೆ ಇಂತಹ ಪ್ರವಾಹದ ಸ್ಥಿತಿ ಬರುತ್ತಿರಲಿಲ್ಲ. ಬೆಂಗಳೂರಿಗೆ ಕಳೆದ 2 ವರ್ಷಗಳಲ್ಲಿ ಏನು ಮಾಡಿದ್ದೀರಿ ತಿಳಿಸಿ ಎಂದು ಆಗ್ರಹಿಸಿದರು.

ಇಡೀ ಬೆಂಗಳೂರು ಮಳೆಯಿಂದಾಗಿ ಮುಳುಗುತ್ತಿದ್ದು, ಜನರು ಪರದಾಡುತ್ತಿದ್ದಾರೆ. ಮಳೆಯಿಂದಾಗಿ ಐದು ಜನರು ಸತ್ತಿದ್ದಾರೆ. ಇಂಥವರ ಸಾವಿನ ಮೇಲೆ ಕಾಂಗ್ರೆಸ್‌ ಸಾಧನೆಯ ಸಮಾವೇಶ ಮಾಡುತ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಸಮಾವೇಶವನ್ನು ರದ್ದು ಮಾಡಬೇಕಿತ್ತು. ಕಾಂಗ್ರೆಸ್‌ನ ತಪ್ಪಿನಿಂದಲೇ ಜನರು ಸತ್ತಿದ್ದಾರೆ. ಇಂತಹ ಸಮಾವೇಶ ಮಾಡುವ ನೈತಿಕ ಅರ್ಹತೆ ಸರ್ಕಾರಕ್ಕೆ ಇಲ್ಲ ಎಂದು ಟೀಕಿಸಿದರು.

ಬೆಂಗಳೂರಿನ ಸಾಯಿ ಬಡಾವಣೆಗೆ ಡಿಸಿಎಂ ಡಿ.ಮಕೆ ಶಿವಕುಮಾರ್‌ (DK Shivakumar) ಭೇಟಿ ನೀಡಿ, ಅಭಿವೃದ್ಧಿ ಮಾಡುತ್ತೇನೆಂದು ಹೇಳಿದ್ದರು. ಸಿಲ್ಕ್‌ ಬೋರ್ಡ್‌ ಬಳಿ ಕಳೆದ ಸಲವೂ ಪ್ರವಾಹವಾಗಿತ್ತು. ಇಷ್ಟಾದರೂ ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆಯಾಗಿಲ್ಲ.

ಬಿಜೆಪಿ ಅವಧಿಯಲ್ಲಿ ರಾಜಕಾಲುವೆ, ರಸ್ತೆ ಅಭಿವೃದ್ಧಿಗೆ 1,600 ಕೋಟಿ ರೂ. ನೀಡಲಾಗಿತ್ತು. ಅದನ್ನು ಕಾಂಗ್ರೆಸ್‌ ರದ್ದು ಮಾಡಿದೆ. ಆ ಅಭಿವೃದ್ಧಿ ಕಾರ್ಯ ನಡೆದಿದ್ದರೆ, ಈ ರೀತಿ ಪ್ರವಾಹ ಆಗುತ್ತಿರಲಿಲ್ಲ. ಬೆಂಗಳೂರಿಗೆ ಪ್ರಗತಿಗೆ ಹಣ ನೀಡದೆ ಲೂಟಿ ಮಾಡಲು ಆ ಹಣವನ್ನು ಬಳಸಲಾಗಿದೆ. ಎಲ್ಲ ಹಣವನ್ನು ಸುರಂಗ ಮಾರ್ಗ ಯೋಜನೆಗೆ ಮೀಸಲಿಟ್ಟಿದ್ದಾರೆ. ಈಗ ಎಲ್ಲ ರಸ್ತೆಗಳಲ್ಲಿ ಸುರಂಗ ಆಗಿದೆ ಎಂದು ದೂರಿದರು.

ಪ್ರವಾಹದ ಸ್ಥಳಗಳಲ್ಲಿ ಸೆನ್ಸರ್‌ ಅಳವಡಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಆದರೆ ಯಾವ ಕೆಲಸವೂ ಆಗಿಲ್ಲ. ಏಪ್ರಿಲ್‌ 15 ರಂದೇ ಹವಾಮಾನ ಇಲಾಖೆ ಮಳೆ ಜೋರಾಗಲಿದೆ ಎಂದು ಸೂಚನೆ ನೀಡಿತ್ತು. ಒಂದು ತಿಂಗಳ ಸಮಯದಲ್ಲಿ ಬಿಬಿಎಂಪಿಯಿಂದ ಮುಂಜಾಗ್ರತಾ ಸಭೆ ನಡೆಸಿಲ್ಲ. ಸಮಾವೇಶಕ್ಕೆ ಮಾತ್ರ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡರು. 14 ಸಾವಿರ ಗುಂಡಿ ಮುಚ್ಚಿದ್ದೇವೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷವನ್ನು ಮುಚ್ಚಿಹಾಕಲು ಜನರೇ ಗುಂಡಿ ತೆಗೆಯುತ್ತಿದ್ದಾರೆ ಎಂದರು.

ಯುದ್ಧಕ್ಕೆ ಸಾಕ್ಷಿ ಕೇಳುವ ಇವರು, ಜನರು ಸಾಯುತ್ತಿರುವುದನ್ನು ಬಂದು ನೋಡಲಿ. ಇದಕ್ಕೆ ಯಾವುದೇ ಸಾಕ್ಷಿ ಬೇಕಿಲ್ಲ. ಬಿಜೆಪಿ ಅವಧಿಯಲ್ಲಿ ಪ್ರತಿ ವರ್ಷ ಏಳೆಂಟು ಸಾವಿರ ಕೋಟಿ ರೂ. ನೀಡಲಾಗುತ್ತಿತ್ತು. ಕಾಂಗ್ರೆಸ್‌ ಸರ್ಕಾರ ಬೆಂಗಳೂರಿಗೆ ನೀಡಿರುವ ಹಣವೆಲ್ಲವನ್ನೂ ಸುರಂಗ ನಿರ್ಮಿಸಲು ಬಳಸಲಾಗುತ್ತಿದೆ.

ಬೆಂಗಳೂರು ಮುಳುಗುತ್ತಿರುವ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿ ಇಲ್ಲ. ಗ್ರೇಟರ್‌ ಬೆಂಗಳೂರು ಹೋಗಿ ವಾಟರ್‌ ಬೆಂಗಳೂರು ಆಗಿದೆ. ಮನೆ ಬಾಗಿಲಿಗೆ ಅವಾಂತರ, ಸಾವುಗಳನ್ನು ಸರ್ಕಾರ ತರುತ್ತಿದೆ ಎಂದು ದೂರಿದರು.

ರಾಜಕೀಯ

ಮುಸ್ಲಿಮರಿಗೆ ಮೀಸಲು ಹೆಚ್ಚಳ ಮಾಡಿರುವುದು ಅಪಚಾರ: ಆರ್‌ ಅಶೋಕ ಕಿಡಿ

ಮುಸ್ಲಿಮರಿಗೆ ಮೀಸಲು ಹೆಚ್ಚಳ ಮಾಡಿರುವುದು ಅಪಚಾರ: ಆರ್‌ ಅಶೋಕ ಕಿಡಿ

ವಸತಿ ಯೋಜನೆಯಲ್ಲಿ ಮುಸ್ಲಿಮರ ಮೀಸಲು ಹೆಚ್ಚಳ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ. ಈ ಮೂಲಕ ಕಾಂಗ್ರೆಸ್‌ ಸರ್ಕಾರ ಜನರ ಹಕ್ಕನ್ನು ಕಸಿದಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ (R Ashoka)

[ccc_my_favorite_select_button post_id="109571"]
ದೊಡ್ಡಬಳ್ಳಾಪುರ ‘ಕ್ವಿನ್ ಸಿಟಿ’ ಕುರಿತು ಎಡಿಬಿ ಉನ್ನತ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ

ದೊಡ್ಡಬಳ್ಳಾಪುರ ‘ಕ್ವಿನ್ ಸಿಟಿ’ ಕುರಿತು ಎಡಿಬಿ ಉನ್ನತ ನಿಯೋಗಕ್ಕೆ ಪ್ರಾತ್ಯಕ್ಷಿಕೆ ಪ್ರಸ್ತುತಿ

ದೊಡ್ಡಬಳ್ಳಾಪುರ-ಡಾಬಸ್ ಪೇಟೆ ನಡುವೆ ನಿರ್ಮಾಣವಾಗಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಕ್ವಿನ್ ಸಿಟಿ’ (Kwin City) ಯೋಜನೆ ಬಗ್ಗೆ ಏಷ್ಯನ್ ಡೆವಲಪ್ಮೆಂಟ್

[ccc_my_favorite_select_button post_id="109562"]
ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ದೇಶವು ವಿಶ್ವದಲ್ಲಿ ನಂ.1 ಆಗಲು ಮಾನವ ಸಂಪನ್ಮೂಲದ ಸದ್ಭಳಕೆ ಆಗಬೇಕು: ಪ್ರಲ್ಹಾದ ಜೋಶಿ

ವಿಶ್ವದ ಬೇರೆ ಬೇರೆ ದೇಶಗಳಿಗೆ ಹೊಲಿಕೆ ಮಾಡಿದಾಗ ಭಾರತವು ಹೇರಳವಾದ ಮಾನವ ಸಂಪನ್ಮೂಲ ಹೊಂದಿದೆ ಸಚಿವ ಪ್ರಲ್ಹಾದ ಜೋಶಿ (Pralhad Joshi)

[ccc_my_favorite_select_button post_id="108459"]
ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಲಾಸ್ ಏಂಜಲೀಸ್‌ ಧಗಧಗ..!| Video ನೋಡಿ

ಪ್ರಸ್ತುತ ವರದಿ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಐಸಿಇ ದಾಳಿಗಳನ್ನು ಧಿಕ್ಕರಿಸಿ ಲಾಸ್ ಏಂಜಲೀಸ್‌ನಲ್ಲಿ ದೊಡ್ಡಮಟ್ಟದದಲ್ಲಿ ಶಾಂತಿಯುತ ಪ್ರತಿಭಟನೆ Los Angeles

[ccc_my_favorite_select_button post_id="108829"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪ್ರೇಯಸಿಯ ಕೊಂದು ಗೋವಾ ಕಾಡಿಗೆಸೆದ ಪಾಗಲ್ ಪ್ರೇಮಿ.. ಬೆಂಗಳೂರಲ್ಲಿ ಬಂಧನ..!

ಪ್ರೇಯಸಿಯ ಕೊಂದು ಗೋವಾ ಕಾಡಿಗೆಸೆದ ಪಾಗಲ್ ಪ್ರೇಮಿ.. ಬೆಂಗಳೂರಲ್ಲಿ ಬಂಧನ..!

ಮದುವೆಯಾಗಲು ಬೆಂಗಳೂರಿನಿಂದ ಗೋವಾಕ್ಕೆ ತೆರಳಿದ್ದ ಪ್ರೇಮಿಗಳಿಬ್ಬರ ನಡುವೆ ಉಂಟಾದ ಸಣ್ಣ ಮನಸ್ತಾಪದಿಂದ ಯುವಕ ತನ್ನ ಗೆಳತಿಯನ್ನು ಕೊಂದು ಕಾಡಿನಲ್ಲಿ ಬಿಸಾಕಿ (Murder)

[ccc_my_favorite_select_button post_id="109448"]
ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದೊಡ್ಡಬಳ್ಳಾಪುರ: ಬೈಕ್ಗೆ ಟ್ಯಾಂಕರ್ ಡಿಕ್ಕಿ.. ಸವಾರನ ಸ್ಥಿತಿ ಗಂಭೀರ

ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ (Accident) ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ

[ccc_my_favorite_select_button post_id="109301"]

ಆರೋಗ್ಯ

ಸಿನಿಮಾ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

CET ಫಲಿತಾಂಶ ಪ್ರಕಟ| ಫಲಿತಾಂಶ ನೋಡಲು ಲಿಂಕ್ ಇಲ್ಲಿದೆ

ವಿದ್ಯಾರ್ಥಿಗಳು ಸಾಕಷ್ಟು ಕಾತರದಿಂದ ಕಾಯುತ್ತಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ (CET) ಫಲಿತಾಂಶ ಪ್ರಕಟಗೊಂಡಿದೆ.

[ccc_my_favorite_select_button post_id="107812"]