ಹುಬ್ಬಳ್ಳಿ: ಇಷ್ಟು ಕುಡಿದು ಬಂದು ಗಂಡ ಕಿರುಕುಳ ನೋಡುತ್ತಿದ್ದಾನೆಂದು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಪತ್ನಿ ಕಿರುಕುಳ ನೀಡುತ್ತಿದ್ದಾಳೆ ಎಂದು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದು, ಪೊಲೀಸ್ ಠಾಣೆ (Police Station) ಮೆಟ್ಟಿಲೇರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಹೌದು ಹುಬ್ಬಳ್ಳಿಯಲ್ಲಿ ಗಂಡ ಹೆಂಡತಿಯ ನಡುವಿನ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಒಂದಡೆ ಗಂಡ ಕಿರುಕುಳ ಕೊಡ್ತಾನೆ ಅಂತ ಪತ್ನಿ ದೂರು ದಾಖಲಿಸಿದ್ರೆ, ಇತ್ತ ಪತ್ನಿ ಹೊಡೆಯುತ್ತಾಳೆ ಸಾರ್ ಅಂತ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಎದುರು ಪತಿ ಕಣ್ಣೀರಿಟ್ಟ ಘಟನೆ ಹುಬ್ಬಳ್ಳಿಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಅಯ್ಯೋ ನನ್ನ ಗಂಡ ವರದಕ್ಷಿಣೆ ಕಿರುಕುಳ ಕೊಡ್ತಾನೆ ಅಂತ ಪೊಲೀಸರ ಎದುರು ಪತ್ನಿ ಕಣ್ಣೀರು ಹಾಕಿದ್ರೆ, ಇನ್ನೊಂದೆಡೆ ಪತ್ನಿ ದಿನಂಪ್ರತಿ ನನ್ನ ಹೊಡೆಯುತ್ತಾಳೆ ಅಂತ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮುಂದೆ ಪತಿ ಕಣ್ಣೀರು ಹಾಕಿ ಕಷ್ಟ ಹೇಳಿಕೊಂಡಿದ್ದಾನೆ.
ಈ ವೇಳೆ ಖುದ್ದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ವ್ಯಕ್ತಿಯನ್ನು ಸಮಧಾನ ಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.