ಮುಖ್ಯಮಂತ್ರಿಗಳೇ ನಿಮ್ಮ ಕೈಲಿ ಆ ರಾಜಕಾರಣಿ ರಾಜಕಾಲುವೆ ಒತ್ತುವರಿ ತೆರುವು ಮಾಡೋಕಾಗುತ್ತಾ?; ನಿಖಿಲ್ ಕುಮಾರಸ್ವಾಮಿ

Chief Minister, is it possible for you to clear the encroachment of that politician's Rajkaluve?; Nikhil Kumaraswamy

ಬೆಂಗಳೂರು: ದೊಡ್ಡ ಮಟ್ಟದ ಕಮರ್ಷಿಯಲ್ ಪ್ರಾಪರ್ಟಿ ಪ್ರಭಾವಿ ರಾಜಕಾರಣಿಗಾಗಿ ರಾಜಕಾಲುವೆ ಒತ್ತುವರಿ ಆಗಿದೆ. ರಾಜಕೀಯ ನಾಯಕರು ರಾಜಕಾಲುವೆ ನುಂಗಿ ಹಾಕುವ ಕೆಲಸ ‌ಮಾಡ್ತಿದ್ದಾರೆ. ಒಂದು ದಿನ ಟ್ಯಾಕ್ಸ್ ಕಟ್ಟೋದು ತಡ ಆದ್ರೆ ಜನರ ಕುತ್ತಿಗೆ ಮೇಲೆ ಕುಳಿತುಕೊಳ್ತೀರಾ. ಆದರೆ ಅದಕ್ಕೆ ‌ಪೂರಕವಾಗಿ ಯಾವುದೇ ಕೆಲಸ ಮಾಡಿಲ್ಲ ಎಂದು ಜೆಡಿಎಸ್ ಯಾವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ( Nikhil Kumaraswamy) ಸರ್ಕಾರದ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಜಕಾರಣಿಗಾಗಿ ರಾಜಕಾಲುವೆ ಒತ್ತುವರಿ ಆಗಿದೆ ಆರೋಪ

ನಿನ್ನೆ ಸಿಎಂ, ಡಿಸಿಎಂ ಪ್ರವಾಸ ಮಾಡಿದ್ರು. ಸಿಎಂ ಅವರು ರಾಜಕಾಲುವೆ ಒತ್ತುವರಿ ಆಗಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ರಾಜಕಾಲುವೆ ಒತ್ತುವರಿ ಮಾಡಿ ಬಿಲ್ಡಿಂಗ್ ಕಟ್ಟಿದ್ದಾರೆ. ಅವರನ್ನ ತೆರವು ಮಾಡೋಕೆ ಅಗುತ್ತಾ ಸಿಎಂ ಅವರೇ.? ಬಲಿಷ್ಠರಿಂದ ಒತ್ತುವರಿ ಆಗಿದೆ. ತೆರವು ಮಾಡೋಕೆ‌ ಸಾಧ್ಯನಾ? ಎಂದು ವಾಗ್ದಾಳಿ ನಡೆಸಿದರು.

ರಾಜಕಾಲುವೆ ‌ಒತ್ತುವರಿಯೇ ಜಾಸ್ತಿ ಆಗಿದೆ

ನಾವು ಹೋದ ಕ್ಷೇತ್ರದಲ್ಲಿ ಅಲ್ಲಿನ ಶಾಸಕರು 4-5 ಬಾರಿ ಗೆದ್ದಿರೋರು. ಮಂತ್ರಿ ಆಗಿರುವವರು ಇದ್ದರು.ವಿಪರ್ಯಾಸ ಅಂದರೆ ಅವರ ಸ್ವಂತ ಕ್ಷೇತ್ರದಲ್ಲಿ ಅವ್ಯವಸ್ಥೆ ಆಗಿದೆ. ನಾವು ಹೋದ ಕಡೆ ಜನ ಮಧ್ಯಮ ವರ್ಗದ ಜನರು.ಕಷ್ಟಪಟ್ಟು ಜೀವನ ಮಾಡ್ತಿದ್ದಾರೆ. ರಾಜಕಾಲುವೆ, ಕೆರೆ ಕಟ್ಟೆಗಳು ಬಗ್ಗೆ ಚರ್ಚೆ ಆಗಬೇಕು. ರಾಜಕಾಲುವೆ ‌ಒತ್ತುವರಿಯೇ ಜಾಸ್ತಿ ಆಗಿದೆ.

ಸಿಎಂ, ಡಿಸಿಎಂ ‌ಕಾಟಾಚಾರದ ಭೇಟಿ

ಡಿಸಿಎಂ ಅವರು ಲಘುವಾಗಿ ಮಾತಾಡಿದ್ದಾರೆ. ಮಳೆ ಬಂದರೆ ಏನು ತೊಂದರೆ ಅಂತ ಕೇಳ್ತಾರೆ. ಡಿಸಿಎಂ ಅವರ ಏರಿಯಾ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ಏರಿಯಾ?‌ ಇಲ್ಲಿ ಬದುಕೋರು ಬಡವರು. ಹೊಸಪೇಟೆಯಲ್ಲಿ 2 ವರ್ಷ ಸಾಧನಾ ಸಮಾವೇಶ ಮಾಡ್ತಿದ್ದಾರೆ. ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ನಿನ್ನೆ ಸಿಎಂ, ಡಿಸಿಎಂ ‌ಕಾಟಾಚಾರದ ಭೇಟಿ ಕೊಟ್ಟಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು

ಕಳೆದ 4-5 ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಅವಾಂತರ ಜಾಸ್ತಿ ಆಗಿದೆ‌. ಒಂದೇ ಒಂದು ಮಳೆಗೆ ಬೆಂಗಳೂರು ಯುರೋಪ್ ವೆನಿಸ್ ಸಿಟಿ ತರಹ ಬೆಂಗಳೂರು ಆಗಿದೆ. ಬೆಂಗಳೂರು-ವೆನಿಸ್ ದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ ಎಂದುಅವರು ವ್ಯಂಗ್ಯವಾಡಿದರು.

ಮಳೆಯಿಂದ ಹಾನಿಗೊಳಗದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾಧ್ಯಮ ಗಳ ಜತೆ ಮಾತನಾಡಿದರು ಅವರು, ಇಂದು ಬೆಂಗಳೂರುಮಳೆ ಹಾನಿ ಪ್ರದೇಶಗಳಿಗೆ ಪ್ರವಾಸ ಮಾಡಿದ್ರಿ, ಸ್ಥಳೀಯ ಜನರ ಸಮಸ್ಯೆ ಕೇಳಿದ್ದೇವೆ. ಜನರು ತಮ್ಮ ನೋವು ಹೇಳಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ದೊಡ್ಡ ಅವ್ಯವಸ್ಥೆ ಆಗಿದೆ. ಬೆಂಗಳೂರು ನಗರ ರಾಜ್ಯದ ಜಿಡಿಪಿಗೆ ಜಾಸ್ತಿ ಕೊಡುಗೆ ಕೊಡ್ತಿದೆ. ಬೆಂಗಳೂರಿನಿಂದ ಜಾಸ್ತಿ ತೆರಿಗೆ ಬರ್ತಿದೆ. ಆದರೆ ಬೆಂಗಳೂರಿಗೆ ಮೂಲಭೂತ ಸೌಕರ್ಯಗಳೇ ಇಲ್ಲ ಎಂದು ಅವರು ಕಿಡಿಕಾರಿದರು.

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾ ಮಳೆ ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಶಾಸಕರು, ಮಾಜಿ ಶಾಸಕರು, ಹಾಗೂ ಮುಖಂಡರನ್ನೊಳಗೊಂಡ ತಂಡ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲನೆ ನಡೆಸಿ, ಸಂಕಷ್ಟಕ್ಕೊಳಗಾದ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದ್ದೇವೆ ಇದನ್ನ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಜಯನಗರ, ಸಿಲ್ಕ್ ಬೋರ್ಡ್, ಮಹದೇವಪುರ ಪಣತ್ತೊರು ರೈಲ್ವೆ ಅಂಡರ್ ಪಾಸ್, ಹೆಣ್ಣೂರು ಸಾಯಿ ಬಡಾವಣೆ, ಸಾಯಿ ಲೇಔಟ್, ಸರ್ವಜ್ಞ ನಗರ ಸೇರಿದಂತೆ ಮಳೆ ಹಾನಿ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಮಳೆ ಬಂದಾಗ ಆಗೋ ಸಮಸ್ಯೆ ಒಂದು ವಾರದ ಚರ್ಚೆ ಆಗಿರಬಾರದು

ಸಾಯಿ ಲೇಔಟ್ ನಲ್ಲಿ 10 ವರ್ಷಗಳಿಂದ ನಿರಂತರ ಸಮಸ್ಯೆ ಆಗ್ತಿದೆ. ಜನರು ಮನೆಗಳನ್ನೇ ಖಾಲಿ ಮಾಡಿದ್ದಾರೆ. ಮನುಷ್ಯರು ವಾಸ ಮಾಡೋಕೆ ಆಗಲ್ಲ ಅಲ್ಲಿ. ಮಳೆಯಿಂದ ಕಾಯಿಲೆಗೆ ತುತ್ತಾಗುವ ಭೀತಿ ಇದೆ. ಸಿಎಂ ಅವರು ಬರ್ತಾರೆ ಅಂತ ತರಾತುರಿಯಲ್ಲಿ ಅಧಿಕಾರಿಗಳು ನಿನ್ನೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಜನರಿಗೆ ನಾನು ಮನವಿ ಮಾಡ್ತೀನಿ ಮಳೆ ಬಂದಾಗ ಆಗೋ ಸಮಸ್ಯೆ ಒಂದು ವಾರದ ಚರ್ಚೆ ಆಗಿರಬಾರದು. ಜೆಡಿಎಸ್ ಪಕ್ಷ ನಿಮ್ಮ ಜೊತೆ ಇದೆ. ಒಂದು ತಂಡ ಕಟ್ಟಿಕೊಂಡು ಸಿಎಂ, ಡಿಸಿಎಂ ಅವರಿಗೆ ಮನವಿ ಕೊಡೋಣ ಎಂದು ಅವರು ಧೈರ್ಯ ತುಂಬಿದರು.

ಬೆಂಗಳೂರಿಗೆ ದೇವೇಗೌಡರ ಕೊಡುಗೆ ಅಪಾರ

ಜೆಡಿಎಸ್ ಪಕ್ಷ ಅಂದರೆ ಗ್ರಾಮೀಣ ಭಾಗದ ಪಕ್ಷ ಅಂತ ಬಿಂಬಿಸಲಾಗಿದೆ. ಆದರೆ‌ ದೇವೇಗೌಡರು ಎಂಜಿನಿಯರ್ ಆಗಿ ಬೆಂಗಳೂರು ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ದೇವೇಗೌಡರ ಕೊಡುಗೆ ಅಪಾರ ಇದೆ. ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಕುಮಾರಸ್ವಾಮಿ ಅವರ ಕೊಡುಗೆಯೂ ಬೆಂಗಳೂರಿಗೆ ದೊಡ್ಡ ಕೊಡುಗೆ ಇದೆ. 14 ತಿಂಗಳು ಸಿಎಂ ಆಗಿದ್ದಾಗ ಅನೇಕ ಅಭಿವೃದ್ಧಿ ‌ಕೆಲಸ ಕುಮಾರಸ್ವಾಮಿ ಅವರು ಮಾಡಿದ್ದಾರೆ ಎಂದರು.

ಗ್ರೇಟರ್ ಬೆಂಗಳೂರು, ದುಡ್ಡು ಹೊಡೆಯೋ ಯೋಜನೆ

ಬೆಂಗಳೂರು ಅಭಿವೃದ್ಧಿಗೆ ನಮ್ಮ ಸಹಕಾರ ಇದೆ. ಜೆಡಿಎಸ್ ಗೆ ಇದ್ದ ಕಡಿಮೆ ಸಮಯದಲ್ಲಿ ಅನೇಕ ಅಭಿವೃದ್ಧಿ ‌ಕೆಲಸ ಬೆಂಗಳೂರಿಗೆ ಮಾಡಿದ್ದಾರೆ. ಈಗ ಮೂಲಭೂತ ಸೌಕರ್ಯಗಳ ಕುಸಿದು ಹೋಗಿದೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು. ಈಗ ಗ್ರೇಟರ್ ಬೆಂಗಳೂರು ಅಂತ ಹೊರಟಿದ್ದಾರೆ. ದುಡ್ಡು ಹೊಡೆಯೋಕೆ ಯೋಜನೆ ಅಷ್ಟೆ. GBA ಹಣ ಹೊಡೆಯೋಕೆ ಅಷ್ಟೇ ಎಂದು ಅವರು ವಾಗ್ದಾಳಿ ನಡೆಸಿದರು.

ಜಿಲ್ಲೆಯ ಹೆಸರು ಬದಲಾವಣೆ ಆದ ಕೂಡಲೇ ಅಭಿವೃದ್ಧಿ ಆಗಲ್ಲ

ರಾಮನಗರ ಹೆಸರು ಬೆಂಗಳೂರು ದಕ್ಷಿಣ ಅಂತ ಬದಲಾವಣೆ ವಿಚಾರಕ್ಕೆ ಮಾತನಾಡಿದ ಅವರು ಜಿಲ್ಲೆಯ ಹೆಸರು ಬದಲಾವಣೆ ಮಾಡಿದ ಕೂಡಲೇ ಜಿಲ್ಲೆ ಅಭಿವೃದ್ಧಿ ಆಗೊಲ್ಲ. ರಾಜಕೀಯ ಲಾಭಯಕ್ಕೆ ಹೆಸರು ಬದಲಾವಣೆ ಮಾಡೋಕೆ ಹೊರಟಿದ್ದಾರೆ.

ಬಿಡದಿಯಲ್ಲಿ ಟೌನ್ ಶಿಫ್ ಮಾಡೋಕೆ ಹೊರಟಿದ್ದಾರೆ. ರೈತರು ಅದಕ್ಕೆ ವಿರೋಧ ಮಾಡಿದ್ದಾರೆ. ರೈತರ ಜೊತೆ ಈ ಸರ್ಕಾರ ಚರ್ಚೆ ಮಾಡಿಲ್ಲ. ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ED ದಾಳಿ ವಿಚಾರಕ್ಕೆ ಮಾತನಾಡಿದ ಅವರು ಐಟಿ- ಇಡಿ ಸ್ವಾತಂತ್ರ್ಯ ಸಂಸ್ಥೆಗಳು. ಅವರಿಗೆ ಬರೋ ಮಾಹಿತಿ ಮೇಲೆ ದಾಳಿ ಮಾಡಿರುತ್ತಾರೆ. ದಾಖಲಾತಿ ಆಧಾರದಲ್ಲಿ ಮಾಹಿತಿ ಮೇಲೆ ದಾಳಿ ಮಾಡಿರುತ್ತದೆ‌. ಅವರು ಯಾವ ರೀತಿ ತನಿಖೆ ಮಾಡ್ತಾರೆ ನೋಡೋಣ. ತನಿಖೆಯಲ್ಲಿ ಎಲ್ಲಾ ವಿಷಯ ಗೊತ್ತಾಗಲಿದೆ ಎಂದರು.

ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್‌ ಬಾಬು ಸಿ.ಬಿ. ಅವರು, ಶಾಸಕರಾದ ಸಿ.ಎನ್‌. ಬಾಲಕೃಷ್ಣ ಅವರು, ಶ್ರೀ ಜಿ.ಡಿ. ಹರೀಶ್‌ ಗೌಡ, ಸ್ವರೂಪ್ ಪ್ರಕಾಶ್ ಅವರು, ವಿಧಾನ ಪರಿಷತ್‌ ಸದಸ್ಯರಾದ ಟಿ.ಎ. ಶರವಣ, ಮಾಜಿ ವಿಧಾನ ಪರಿಷತ್‌ ಸದಸ್ಯರಾದ ತಿಪ್ಪೇಸ್ವಾಮಿ ಅವರು ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಜತೆಯಲ್ಲಿದ್ದರು.

ರಾಜಕೀಯ

ಮೇ 8ಕ್ಕೆ ದೊಡ್ಡಬಳ್ಳಾಪುರದಲ್ಲಿ ‘JDS 25’ ಸಂಭ್ರಮ: ಭಿನ್ನಮತ ಶಮನ

ಮೇ 8ಕ್ಕೆ ದೊಡ್ಡಬಳ್ಳಾಪುರದಲ್ಲಿ ‘JDS 25’ ಸಂಭ್ರಮ: ಭಿನ್ನಮತ ಶಮನ

ಜೆಡಿಎಸ್‌ನ (JDS) ಹಿರಿಯ ಮುಖಂಡ ಹುಸ್ಕೂರು ಆನಂದ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ಭಿನಮತ ಶಮನವಾಗಿರುವ ಮಾಹಿತಿ ತಿಳಿದು ಬಂದಿದೆ.

[ccc_my_favorite_select_button post_id="121822"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಉಪನ್ಯಾಸಕಿ ಬಲಿ..!

ದೊಡ್ಡಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಉಪನ್ಯಾಸಕಿ ಬಲಿ..!

ದೊಡ್ಡಬಳ್ಳಾಪುರ (Doddaballapur) ನಿರ್ಜನ ಪ್ರದೇಶದಲ್ಲಿದ್ದ ಕಾರಿನಲ್ಲಿ (Car) ಸುಟ್ಟುಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪತ್ತೆಹಚ್ಚಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ (SP ) ಶ್ಲಾಘಿಸಿದ್ದು, ಅಭಿನಂದನೆ ಪತ್ರ ಹಾಗೂ ನಗದು ಪುರಸ್ಕಾರ ನೀಡುವುದಾಗಿ

[ccc_my_favorite_select_button post_id="121767"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]