ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಮಹಿಳೆಯೊಬ್ಬರು ಕರಗ (Karaga) ಹೊರುವ ವಿಶಿಷ್ಟ ಸಂಪ್ರದಾಯ ಹೊಂದಿರುವ ಶ್ರೀ ದೌಪದಮ್ಮ ನವರ ಕರಗವನ್ನು ಬಾಪೂಜಿ ನಗರದಲ್ಲಿರುವ ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ವತಿಯಿಂದ ಬುಧವಾರ ಆರಂಭಗೊಂಡಿದೆ.
ಈ ಕರಗ ಮಹೋತ್ಸವವನ್ನು ಮೇ 24ರವರೆಗೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುವುದು ಎಂದು ಶ್ರೀ ಅರುಂಧತಿ ಹರಿಜನ ಅಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ.ಎಂ.ಶಿವಾನಂದ ತಿಳಿಸಿದರು.
ಕೃಷ್ಣಗಿರಿಯ ಶ್ರೀಮತಿ ಪುಷ್ಪಾವತಮ್ಮನವರು ಶ್ರೀ ದೌಪದಮ್ಮನವರ ಕರಗವನ್ನು ಹೊತ್ತು ಇಡೀ ರಾತ್ರಿ ನಗರದಾದ್ಯಂತ ಸಂಚರಿಸಿ ಸಾವಿರಾರು ಭಕ್ತಾದಿಗಳಿಂದ ಪೂಜೆ ಸ್ವೀಕರಿಸುವರು.
ಕರಗದ ಪ್ರಯುಕ್ತ ನಗರದಲ್ಲಿ ಅನೇಕ ಕಡೆ ವಿಶೇಷ ವಿದ್ಯುತ್ ದೀಪಾಲಂಕಾರ, ವಿವಿಧ ಸಾಂಸ್ಕೃತಿಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.