ಲಕ್ನೋ; ನಿನ್ನೆಯಷ್ಟೇ ಹೆಂಡತಿ ಹೊಡೆಯುತ್ತಾಳೆಂದು ಪೊಲೀಸ್ ಕಮಿಷನರ್ ಮುಂದೆ ಗಂಡನೋರ್ವ ಕಣ್ಣೀರು ಹಾಕಿದ್ದ ಘಟನೆಯ ವರದಿ ಬೆನ್ನಲ್ಲೇ, ದ್ವಿಚಕ್ರ ವಾಹನದಲ್ಲಿ (Bike) ಹೋಗುವಾಗಲೇ ಮಹಿಳೆಯೊಬ್ಬರು (Wife) ತಾಳಿಕಟ್ಟಿದ ಗಂಡನಿಗೆ (Husband) ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿಕೊಂಡು ಹೋದ ವಿಡಿಯೋ (Video) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದೆ.
ಅನೇಕರು ಈ ವಿಡಿಯೋವನ್ನು ಶೇರ್ ಮಾಡಿ, ಇತ್ತೀಚಿನ ದಿನಗಳಲ್ಲಿ ಗಂಡಸರಿಗೆ ಮದುವೆ ಎಂದರೆ ಯಾಕೆ ಭಯ ಗೊತ್ತಾ? ಎಂದು ಕ್ಯಾಪ್ಟನ್ ಕೊಡುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಜೋಡಿಯೊಂದರ ನಡುವೆ ಏಕಾಕಿ ಜಗಳ ಶುರುವಾಗಿದೆ.
ಗಾಡಿ ರಸ್ತೆ ಬದಿಯಲ್ಲಿ ನಿಲ್ಲುಸುವಂತೆ ಹೆಂಡತಿ ಹೇಳುತ್ತಾಳೆ. ಆದರೆ ಪತಿ ದ್ವಿಚಕ್ರ ವಾಹನವನ್ನು ನಿಲ್ಲಿಸುವುದಿಲ್ಲ, ನೋಡನೋಡುತ್ತಿದ್ದಂತೆ ಮಹಿಳೆ ತನ್ನ ಕಾಲಿನಿಂದ ಚಪ್ಪಲಿಯನ್ನು ತೆಗೆದು, ಮುಂದೆ ಗಾಡಿ ಓಡಿಸುತ್ತಿದ್ದ ಪತಿಯನ್ನು ಮನಬಂದಂತೆ ಬಾರಿಸಿದ್ದಾಳೆ.
ಪಾಪ ಪತ್ನಿ ಅಷ್ಟು ಹೊಡೆಯುತ್ತಿದ್ದರೂ ಗಂಡ ಮಾತ್ರ ಒಂದು ಕ್ಷಣಕ್ಕೂ ತಿರುಗಿ ಪ್ರತಿಕ್ರಿಯೆ ನೀಡದೇ ಬೈಕ್ ಓಡಿಸುವದರಲ್ಲೇ ಮಗ್ನನಾಗಿ ಮುಂದೆ ಸಾಗಿದ್ದಾನೆ.
Kalesh b/w Husband and wife on running bike, Wife started beating her husband over some mutual dispute In Lucknow UP pic.twitter.com/7Nay1x9tgi
— Ghar Ke Kalesh (@gharkekalesh) May 20, 2025
ಈ ವಿಡಿಯೋ ನೋಡಿದ ಕೆಲ ನೆಟ್ಟಿಗರು ಮಹಿಳೆ ಆತನನ್ನು ಸಾರ್ವಜನಿಕವಾಗಿ ಹೀಗೆ ಥಳಿಸಿರುವುದು ತಪ್ಪು, ಆಕೆಯ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಆಕೆ ಅಷ್ಟು ಹೊಡೆಯುತ್ತಿದ್ದಾಳೆ ಅಂದರೆ ಆತ ಮಾಡಿದ ತಪ್ಪು ಅಂತಹದ್ದೇನಿರಬಹುದು ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಮಂದಿ ವಾಟ್ ಎ ಬ್ಯಾಲೆನ್ಸ್ ಎಂದು ತಾಳ್ಮೆ ಕಳೆದುಕೊಳ್ಳದೆ ಬೈಕ್ ಚಲಾಯಿಸಿದ್ದನ್ನು ಪ್ರಶಂಸೆ ಮಾಡಿದರೆ, ಮತ್ತೆ ಕೆಲವರು ತಪ್ಪು ಮಾಡಬೇಡಿ, ಮಾಡಿ ಹೆಂಡತಿ ಕೈಯಲ್ಲಿ ಸಿಕ್ಕಿ ಬೀಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ