ಆನೇಕಲ್: ಆನೇಕಲ್ ವಲಯದ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಅಪರಾಧ ನಿಯಂತ್ರಣ ಕೋಶದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿ, ಮೂರು ಜೀವಂತ ಉಡಗಳನ್ನು (Monitor lizards) ರಕ್ಷಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೋವಿಂದರಾಜನ್ ದೇವರಾಜ್ (42 ವರ್ಷ) ಎಂದು ಗುರುತಿಸಲಾಗಿದೆ. ಈತ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುರುಬರಪಲ್ಲಿ ತಾಲೂಕಿನ ಚಿಕ್ಕಾರಿಪುರಂ ನಿವಾಸಿ ಎಂದು ತಿಳಿದುಬಂದಿದೆ.
ಬಂಧಿತನು ಮಂಗಳವಾರ ಸಂಜೆ ಆನೇಕಲ್ ತಾಲೂಕಿನ, ಅತ್ತಿಬೆಲೆ ಹೋಬಳಿ, ಟಿವಿಎಸ್ ಕ್ರಾಸ್ ಬಳಿ ಅಕ್ರಮವಾಗಿ 3 ಜೀವಂತ ಉಡಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇಲೆ ಸೋವಿಂದರಾಜನ್ ದೇವರಾಜ್ ನನ್ನು ಬಂಧಿಸಲಾಗಿದೆ.
ಈ ವೇಳೆ ಬಟ್ಟೆ ಬ್ಯಾಗ್‌ನಲ್ಲಿದ್ದ 3 ಜೀವಂತ ಉಡಗಳನ್ನು ರಕ್ಷಿಸಲಾಗಿದೆ. ಬಂಧಿತನಿಂದ ಒಂದು ಸುಝುಕಿ ಅಕ್ಸಸ್ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ.