ದೊಡ್ಡಬಳ್ಳಾಪುರ (Doddaballapura): ತಾಲೂಕಿನಲ್ಲಿನ ರಸ್ತೆ ಅವ್ಯವಸ್ಥೆ ಮಿತಿಮೀರಿದ್ದು, ಗುಂಡಿಗಳು ಮಿತಿಮೀರಿದ ಪರಿಣಾಮ ವಾಹನ ಸವಾರರ ಪ್ರಾಣಹರಣಕ್ಕೆ ಕಾರಣವಾಗುತ್ತಿದೆ.
ಇದಕ್ಕೆ ನಿದರ್ಶನವೆಂಬಂತೆ ಹೊಸಹಳ್ಳಿ-ದೊಡ್ಡಬಳ್ಳಾಪುರ ನಡುವಿನ ರಸ್ತೆಯ ಹೊಸಹಳ್ಳಿ ಗ್ರಾಮದ ಸಮೀಪ ರಸ್ತೆಯಲ್ಲಿ ಗುಂಡಿಗಳು ಬಿದ್ದು, ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ಸವಾರರು ಗುಂಡಿ ತಪ್ಪಿಸುವಾಗ ಎಚ್ಚರ ತಪ್ಪಿ ಬೀಳುವಂತಾಗಿತ್ತು.
ಈ ಕುರಿತಂತೆ ಹೊಸಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ಕರಾರ್ ಹುಸೇನ್ ಅವರು, ಗುಂಡಿಗಳಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಟ್ರ್ಯಾಕ್ಟರ್ಗಳಿಂದ ಮಣ್ಣು ತರಿಸಿ, ರಸ್ತೆಯ ಗುಂಡಿಗಳನ್ನು ಮುಚ್ಚಿಸಿ ಸಮತಟ್ಟು ಮಾಡಿಸುವ ಪ್ರಶಂಸನೀಯ ಕಾರ್ಯ ಮಾಡಿದ್ದಾರೆ.