ದೊಡ್ಡಬಳ್ಳಾಪುರ: ಅಪಘಾತ ಪ್ರಕರಣ ತಡೆಯುವ ನಿಟ್ಟಿನಲ್ಲಿ, ಬೇಕಾಬಿಟ್ಟಿ ವಾಹನ ಚಾಲನೆ ಮಾಡುವ ಚಾಲಕರಿಗೆ ಬಿಸಿ ಮುಟ್ಟಸಲು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ (Police station) ಇನ್ಸ್ಪೆಕ್ಟರ್ ಅಮರೇಶ್ ಗೌಡ (Amaresh Gowda) ನೇತೃತ್ವದ ಪೊಲೀಸರ ತಂಡ ರಸ್ತೆಗಿಳಿದು ಕಾರ್ಯಚರಣೆ ಆರಂಭಿಸಿದೆ.
ನಗರದ ಪ್ರವಾಸಿ ಮಂದಿರ ವೃತ್ತದ ಬಳಿ ಸಾರಿಗೆ ನಿಯಮ ಉಲ್ಲಂಘಿಸುತ್ತಿರುವವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡುತ್ತಿದ್ದಾರೆ.
ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೇಡ್, ಹೆಲ್ಮಟ್ ಧರಿಸದೆ ಬೈಕ್, ಸ್ಕೂಟರ್ ಚಾಲನೆ, ಕಾರಿಗೆ ಕಿಟಕಿ ಗ್ಲಾಸ್ಗೆ ಕಪ್ಪು ಬಣ್ಣದ ಪೇಪರ್ ಅಳವಡಿಸಿರುವವರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳಿಂದ ಅನೇಕರು ಅಕಾಲಿಕ ಸಾವನಪ್ಪುತ್ತಿದ್ದಾರೆ, ಬಹುತೇಕ ಅಪಘಾತಗಳಿಗೆ ಸಾರಿಗೆ ನಿಯಮ ಉಲ್ಲಂಘನೆ, ವಾಹನ ಸವಾರರ ಬೇಜವಬ್ದಾರಿ ಕಾರಣವಾಗಿದೆ.
ಈ ನಿಟ್ಟಿನಲ್ಲಿ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರು ಈ ರೀತಿ ಕಾರ್ಯಾಚರಣೆ ನಡೆಸಿದರೆ ಅಪಘಾತ ಪ್ರಕರಣಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.