ದೊಡ್ಡಬಳ್ಳಾಪುರ: ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ 2024-25ನೇ ಸಾಲಿನ ಎಸ್ಎಸ್ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.
ಸರ್ಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC) ಶೇ.85 ಅಂಕಗಳು ಹಾಗೂ ಕನ್ನಡ ಭಾಷಾ ವಿಷಯದಲ್ಲಿ ಎಸ್ಎಸ್ಎಲ್‌ಸಿ (SSLC)ಯಲ್ಲಿ 125 ಅಂಕಗಳು ಹಾಗೂ ದ್ವಿತೀಯ ಪಿಯುಸಿ (PUC)ಯಲ್ಲಿ 100 ಅಂಕಗಳನ್ನು ಗಳಿಸಿರಬೇಕು.
ಖಾಸಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (PUC)ಯಲ್ಲಿ ಶೇ.95 ಅಂಕಗಳು ಹಾಗೂ ಕನ್ನಡ ಭಾಷಾ ವಿಷಯದಲ್ಲಿ ಎಸ್ಎಸ್ಎಲ್‌ಸಿ (SSLC) 125 ಅಂಕಗಳು ಹಾಗೂ ದ್ವಿತೀಯ ಪಿಯುಸಿ (PUC)ಯಲ್ಲಿ 100 ಅಂಕಗಳು ಅಂಕಗಳನ್ನು ಗಳಿಸಿರಬೇಕು.
ಅರ್ಹ ವಿದ್ಯಾರ್ಥಿಗಳು ತಮ್ಮ ಹೆಸರು, ಅಂಕಪಟ್ಟಿ (ಜೆರಾಕ್ಸ್ ಪ್ರತಿ ), ಇತ್ತೀಚಿನ ಭಾವಚಿತ್ರ, ದೂರವಾಣಿ ಸಂಖ್ಯೆಯೊಂದಿಗೆ ಜೂನ್ 20ರೊಳಗೆ ಸಹ್ಯಾದ್ರಿ ಆಸ್ಪತ್ರೆ, ಫ್ರೆಂಡ್ಸ ಹಾಲ್ ಮುಂಭಾಗ, ಪಾಲನಜೋಗಿಹಳ್ಳಿ, ದೊಡ್ಡಬಳ್ಳಾಪುರ ಇಲ್ಲಿಗೆ ತಲುಪಿಸಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. ಸಂಖ್ಯೆ 9663531611, 8073452305, 9060302558 ಸಂಪರ್ಕಿಸಬಹುದಾಗಿದೆ ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಮೇಶ್ ತಿಳಿಸಿದ್ದಾರೆ.