ಚಿಕ್ಕಬಳ್ಳಾಪುರ: ಐತಿಹಾಸಿಕ ನಂದಿಗಿರಿ ಧಾಮದಲ್ಲಿ (Nandi Hills) ಸಚಿವ ಸಂಪುಟದ 2025ನೇ ಸಾಲಿನ 14ನೇ ಸಭೆ ಜುಲೈ 02 ರಂದು ನಡೆಯಲಿದೆ.
ಈ ಕುರಿತಂತೆ ಸರ್ಕಾರದ ಅಪರ ಕಾರ್ಯದರ್ಶಿ ಆರ್ ಚಂದ್ರಶೇಖರ್ ಸೂಚನಾ ಪತ್ರ ಬಿಡುಗಡೆ ಕಳುಹಿಸಿದ್ದಾರೆ.
ಇದರನ್ವಯ ಜುಲೈ, 02 ರಂದು ಬುಧವಾರ ಮಧ್ಯಾಹ್ನ 12:00 ಗಂಟೆಗೆ ಸಚಿವ ಸಂಪುಟದ 2025ನೇ ಸಾಲಿನ 14ನೇ ಸಭೆಯನ್ನು ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿರುವ “ಮಯೂರ ಸಭಾಂಗಣ”ದಲ್ಲಿ ಕರೆಯಲಾಗಿದೆ.
ಸಭೆಯ ಕಾರ್ಯಸೂಚಿಯನ್ನು ಪ್ರತ್ಯೇಕವಾಗಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ನಂದಿಗಿರಿ ಧಾಮದಲ್ಲಿ ಗುರುವಾರ (ಜೂ.19) ನಡೆಸಬೇಕಿದ್ದ ಸಚಿವ ಸಂಪುಟ ಸಭೆಯನ್ನು ಸರ್ಕಾರ ವಿಧಾನಸೌಧದ ಸಂಪುಟ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿತ್ತು. ಇದು ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
