ದೊಡ್ಡಬಳ್ಳಾಪುರ: ನಿನ್ನೆಯಷ್ಟೇ ನಡೆದ ಎತ್ತಿನಹೊಳೆ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ಬೆನ್ನಲ್ಲೇ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ದೊಡ್ಡಬಳ್ಳಾಪುರ ತಾಲೂಕಿಗೆ ಭೇಟಿ ನೀಡಲಿದ್ದಾರೆ.
ಈ ವೇಳೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ವೀಕ್ಷಿಸಿರುವ ಅವರು, ಭೈರಗೊಂಡ್ಲು ಜಲಾಶಯದ ಕುರಿತು ಸ್ಥಳ ಪರಿಶೀಲನೆ ನಡೆಸಲಿದ್ದಾರೆ.
ಮಧ್ಯಾಹ್ನ 1.15ಕ್ಕೆ ಬೈರಗೊಂಡ್ಲು, ಲಕ್ಕೇನಹಳ್ಳಿ, ಅಲಪ್ಪನಹಳ್ಳಿ, ಮಾದೇಶ್ವರ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಪರಿಶೀಲನೆ ಡಿಸಿಎಂ ನಡೆಸಲಿದ್ದಾರೆ.
(ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ)