ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಇಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸುಬ್ರಮಣ್ಯ ಎ ಮಾತನಾಡಿ, “ಭಾರತವು ವಿವಿಧ ಸಂಸ್ಕೃತಿಗಳ ಆಗರ, ಜಗತ್ತಿನ ಸಂಸ್ಕೃತಿಗಳಲ್ಲಿ ಭಾರತದ ಸಂಸ್ಕೃತಿ ಶ್ರೀಮಂತ. ಇಂತಹ ದೇಶ ಇಡೀ ಜಗತ್ತಿಗೆ ಹಾಗೂ ಜಗತ್ತಿನ ಜನ ಆರೋಗ್ಯಪೂರ್ಣವಾಗಿರಲು, ಯೋಗವನ್ನು ತಿಳಿಸಿ ರೋಗಮುಕ್ತ ಜಗತ್ತು ಕಟ್ಟುವ ಕೈಂಕರ್ಯ ಮಾಡಿದ್ದು, ನಮ್ಮ ಹೆಮ್ಮೆಯ ಭಾರತ ದೇಶ.
ಇಂದಿನ ಸಮಾಜದಲ್ಲಿ ಸರ್ವರೂ ಯೋಗವನ್ನು ಹಾಗೂ ಯೋಗದ ಪ್ರತಿಯೊಂದು ಆಸನಗಳನ್ನು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ, ಬದುಕಿನ ಸತ್ಯವನ್ನು ಅರಿಯಬಹುದು.

ಯೋಗವು ರೋಗಮುಕ್ತ ಸಮಾಜವನ್ನು ನಿರ್ಮಾಣ ಮಾಡುತ್ತದೆ ಯೊಗ ದಿನ ಕೇವಲ ಜೂನ್ 21 ಕ್ಕೆ ಮಾತ್ರ ಸೀಮಿತವಾಗದೆ ನಿತ್ಯನೂತನವಾಗಬೇಕು.
ವಿದ್ಯಾರ್ಥಿ ಹಂತದಿಂದ ಬದುಕಿನ ಕೊನಯ ಹಂತದವರೆಗೂ ಯೋಗವನ್ನು ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ ಯೋಗದಿನದ ಆಚರಣೆಗೆ ಮಹತ್ವ ಬರುತ್ತದೆ. 2025 ರ ಈ ಯೋಗ ದಿನಾಚರಣೆಯು “ ಒಂದು ಭೂಮಿ-ಒಂದು ಆರೋಗ್ಯ” ಧ್ಯೇಯವಾಕ್ಯದೊಂದಿಗೆ ಆಚರಿಸಲ್ಪಡುತ್ತಿದೆ ಇಡೀ ದೇಶವು ಯೋಗದಿನವನ್ನು ಆಚರಿಸಿ ಅರೋಗ್ಯದೊಂದಿಗೆ ಆತ್ಮದ ಅರಿವನ್ನು ಅರಿತುಕೊಳ್ಳಬೇಕಾಗುತ್ತದೆ ಎಂದು ಮಾತನಾಡಿದರು.
ಯೋಗದ ಮಹತ್ವದ ಬಗ್ಗೆ ಶಾಲಾ ಮಕ್ಕಳು ಕಿರು ಭಾಷಣ ನೀಡಿದರು. ರಿಥಮಿಕ್ ಯೋಗ ಪ್ರದರ್ಶನವನ್ನೂ ಸಹ ಶಾಲೆಯ ಮಕ್ಕಳು ಅತ್ಯದ್ಭುತವಾಗಿ ನಡೆಸಿಕೊಟ್ಟರು
ಸುಮಾರು 900 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಶಾಲಾ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.