ದೊಡ್ಡಬಳ್ಳಾಪುರ: ವಿಶ್ವ ಯೋಗ ದಿನದ (International Yoga Day) ಅಂಗವಾಗಿ ನಗರದ ಪ್ರತಿಷ್ಠಿತ ನಳಂದ ಪ್ರೌಢಶಾಲೆ (Nalanda High School) ಮತ್ತು ಲಿಟ್ಲ್ ಏಂಜೆಲ್ಸ್ ಅನಂತ ಶಾಲೆಗಳಲ್ಲಿ (Little Angels Anantha School) ಯೋಗಾಭ್ಯಾಸವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ಅನುರಾಧ ಕೆ ಆರ್ ರವರು ಮಾತನಾಡಿ, ಯೋಗ ಅತ್ಯಂತ ಪ್ರಾಚೀನವಾದ ವಿದ್ಯೆಯಾಗಿದ್ದು ಋಗ್ವೇದದಲ್ಲಿ ಇದರ ಉಲ್ಲೇಖವಿದೆ ಎಂದರು.

ಶಿವನನ್ನು ಮೊದಲ ಯೋಗಿ (ಆದಿ ಯೋಗಿ Adiyogi) ಎಂದು ಹೇಳಲಾಗುತ್ತದೆ. ಮಹರ್ಷಿ ಪತಂಜಲಿ ಬರೆದ ಯೋಗ ಸೂತ್ರದಲ್ಲಿ ಯೋಗದ ಬಗ್ಗೆ ವಿಸ್ತಾರವಾದ ವಿವರಗಳಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಮೇರೆಗೆ ವಿಶ್ವಸಂಸ್ಥೆಯು ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದೆ. ಯೋಗದ ಉಪಯುಕ್ತತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಯೋಗ ದಿನದ ಮುಖ್ಯ ಉದ್ದೇಶವಾಗಿದೆ.

ಈ ವರ್ಷ ಯೋಗ- ಒಂದು ಭೂಮಿ ಒಂದು ಆರೋಗ್ಯ (Yoga For One Earth One Health) ಅಂದರೆ ಯೋಗದಿಂದ ಎಲ್ಲರಿಗೂ ಆರೋಗ್ಯ ಎಂದಾಗಿದೆ.

“ಲೋಕಾ: ಸಮಸ್ತಾ: ಸುಖಿನೋ ಭವಂತು” ಎಂಬಂತೆ ಎಲ್ಲರೂ ಯೋಗವನ್ನು ತಮ್ಮ ದಿನನಿತ್ಯ ಜೀವನದ ಭಾಗವಾಗಿ ಅಭ್ಯಾಸ ಮಾಡಿ ಆರೋಗ್ಯವಾಗಿರಬೇಕು.

ವಿದ್ಯಾರ್ಥಿಗಳು ಯೋಗ ಪ್ರಕಾರಗಳಾದ ಆಸನ ,ಧ್ಯಾನ, ಪ್ರಾಣಾಯಾಮಗಳಿಂದ ದೈಹಿಕ ಸದೃಢತೆ, ಮಾನಸಿಕ ಸ್ವಾಸ್ತ್ಯವನ್ನು ಗಳಿಸಿ, ಗುರಿ ಸಾಧಿಸುವಿಕೆ, ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಯೋಗಹ ಕರ್ಮಸು ಕೌಶಲಮ್ ಎಂದರೆ ಕೆಲಸದಲ್ಲಿ ನಿಪುಣತೆಯನ್ನು ಸಾಧಿಸುವಂತೆ ಮಾಡುವುದೇ ಯೋಗದ ಮೂಲ ಧರ್ಮವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳ ಅತ್ಯಾಕರ್ಷಕವಾದ ಯೋಗ ಪ್ರದರ್ಶನ ಕಾರ್ಯಕ್ರಮದ ಕೇಂದ್ರಬಿಂದುವಾಗಿತ್ತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಸುನೀತಾ ಪಿ, ಸಹ ಶಿಕ್ಷಕರು, ಶಾಲೆಗಳ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
