ವೈರಲ್ ನ್ಯೂಸ್: ಅಡುಗೆ ಸಿಲಿಂಡರ್ ಬದಲಿಸುವ ವೇಳೆ ಮನೆಯೊಂದರಲ್ಲಿ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು (Cylinder burst), ಕೂದಲೆಳೆ ಅಂತರದಲ್ಲಿ ಇಬ್ಬರು ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಆರಂಭದಲ್ಲಿ ಎಲ್ ಪಿಜಿ ಸಿಲಿಂಡರ್ ಪೈಪ್ ನಲ್ಲಿ ಸೋರಿಕೆ ಉಂಟಾಗಿದೆ. ಇದನ್ನು ಗಮನಿಸಿದ ಮಹಿಳೆ ಸಿಲಿಂಡರ್ ಅನ್ನು ಹೊರಕ್ಕೆ ತರಲು ಪ್ರಯತ್ನಿಸಿದ್ದಾರೆ. ಆದರೆ ಅಡುಗೆ ಮನೆಯಿಂದ ಹಾಲ್ ಗೆ ತರುವಷ್ಟರಲ್ಲಿ ಗ್ಯಾಸ್ ಹೆಚ್ಚಿನ ಪ್ರಮಾಣದಲ್ಲಿ ಲೀಕ್ ಆದ್ದರಿಂದ ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ.
ಇದಾಗಿ ಕೆಲ ಸೆಕೆಂಡುಗಳ ಬಳಿಕ ಯುವಕ ಹಾಗೂ ಮಹಿಳೆ ಸಿಲಿಂಡರ್ ಹೊರ ತರಲೆಂದು ಹಾಲ್ ಗೆ ತಲುಪಿದ್ದಾರೆ. ಇನ್ನೇನು ಸಿಲಿಂಡರ್ ಎತ್ತಿ ತರಬೇಕು ಅನ್ನುವಷ್ಟರಲ್ಲಿ ಅಡುಗೆ ಮನೆಯಿಂದ ಬಂದ ಬೆಂಕಿ ಆವರಿಸಿ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಅದೃಷ್ಟವಾಶತ್ ಮನೆಯ ಬಾಗಿಲು ಕಿಟಕಿ ಎಲ್ಲವೂ ತೆರೆದಿಟ್ಟಿದ್ದರಿಂದ ಸ್ಫೋಟದ ತೀವ್ರತೆ ಕಡಿಮೆಯಾಗಿದೆ.
This is why we need instructions to be written in local languages.
— 👑Che_Krishna🇮🇳💛❤️ (@CheKrishnaCk_) June 23, 2025
All Cylinders will have instructions printed only in Hindi and English. pic.twitter.com/mzYjYHyWCK
ಘಟನೆಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಮನೆಯವರು ಪಾರಾಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ, ಇದಕ್ಕಾಗಿಯೇ ಸಾರ್ವಜನಿಕರಿಗೆ ಸೂಚನೆಗಳನ್ನು ಸ್ಥಳೀಯ ಭಾಷೆಗಳಲ್ಲಿ ಬರೆಯಬೇಕಾಗಿದೆ.
ಎಲ್ಲಾ ಸಿಲಿಂಡರ್‌ಗಳು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಸೂಚನೆಗಳನ್ನು ಮುದ್ರಿಸುತ್ತವೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಆದರೆ ಈ ವೈರಲ್ ವಿಡಿಯೋ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ.