ದೊಡ್ಡಬಳ್ಳಾಪುರ: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಉಂಟಾಗುತ್ತಿರುವ ದೌರ್ಜನ್ಯ ಪ್ರಕರಣ ಕಡಿವಾಣ ಹಾಗೂ ಮಹಿಳೆಯರ ರಕ್ಷಣೆಗೆ ಇರುವ ಕಾಯ್ದೆಗಳ ಕುರಿತು ಮಹಿಳಾ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಬಿ. ನವೀನ್ ಕುಮಾರ್ (Dr.M.B. Naveen Kumar) ಅವರು ಸಲಹೆ ನೀಡಿದರು.
ನಗರದ ಹೊರವಲಯದಲ್ಲಿರುವ ಜುಬಿಲಿಯಂಟ್ ಕಾರ್ಖಾನೆಯಲ್ಲಿ ಮಹಿಳಾ ಕಾರ್ಮಿಕರು ಹಾಗೂ ಸಿಬ್ಬಂದಿಗಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ನಮ್ಮ ಸಂವಿಧಾನದ 14ನೇ ವಿಧಿಯಡಿ ಎಲ್ಲರಿಗೂ ಸಮಾನ ರಕ್ಷಣೆ, ಅವಕಾಶ, ಹಕ್ಕು ಇದೆ. ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ದೌರ್ಜನ್ಯ ತಡೆಯಲು 2013ರಿಂದ ಕಾನೂನು ರಚನೆಯಾಗಿದ್ದು ಮಹಿಳೆಯರು ಯಾವುದೇ ಭಯವಿಲ್ಲದೆ ಜೀವನ ನಡೆಸಬಹುದು’.
‘ಮಹಿಳೆಯರಿಗೆ ಉಚಿತ ಕಾನೂನಿನ ನೆರವು ಇರಲಿದೆ. ಮಹಿಳೆಯರು ಯಾವುದೇ ರೀತಿಯ ದೌರ್ಜನ್ಯ ಎದುರಿಸಿದ್ದಲ್ಲಿ ಮುಚ್ಚು ಮರೆಯಿಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ. ಒಂದು ವೇಳೆ ಅಲ್ಲಿಯೂ ನಿಮಗೆ ಪರಿಹಾರ ಸಿಗದಿದ್ದರೆ ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ದರಾಗಿರುತ್ತೇವೆ. ಅಪರಾಧಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳುವಂತಗಬಾರದು’ ಎಂದು ಹೇಳಿದರು.
ಕಾನೂನಿಗೆ ಎಲ್ಲ ಧರ್ಮದ ಮಹಿಳೆಯರ ಅನ್ಯಾಯಕ್ಕೂ ನ್ಯಾಯ ಕೊಡಿಸುವ ಶಕ್ತಿ ಇದೆ. ಉಚಿತ ಕಾನೂನಿನ ವಿಷಯಗಳ ಬಗ್ಗೆ ಸರಳವಾಗಿ ವಿವರಿಸಿದರು.
‘ಭಾರತ ಮುಂದುವರೆದ ದೇಶ. ನಮ್ಮ ದೇಶದ ಮಹಿಳೆಯರು ಇದೀಗ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಅದ ಛಾಪು ಮೂಡಿಸುತ್ತಿದ್ದಾರೆ. ಕೆಲಸದ ಸಮಯದಲ್ಲಿ ದೌರ್ಜನ್ಯ ಎದುರಿಸಿದಾಗ ಅದನ್ನು ಮರೆಮಾಚಬಾರದು.’ ಎಂದರು.
ಇದೇ ವೇಳೆ ಕೆಲಸ ಮಾಡುವಂತಹ ಸ್ಥಳದಲ್ಲಿ ಹೆಣ್ಣು ಮಕ್ಕಳಿಗೆ ವಿಶ್ರಾಂತಿ ಕೊಠಡಿ ಸೌಲಭ್ಯಗಳು, ಸ್ವಚ್ಛವಾದ ಶೌಚಾಲಯದ ಸೌಲಭ್ಯ, ಕರ್ತವ್ಯ ನಿರ್ವಹಿಸುವಂತಹ ಕಡೆ ಸಿಸಿ ಕ್ಯಾಮೆರಾ ವ್ಯವಸ್ಥೆ, ತಾಯಿಯ ಅಕ್ಕರೆ ಅವಶ್ಯಕತೆ ಇರುವ ಶಿಶುಗಳ ಜೊತೆ ಬಂದಂತಹ ಕೆಲಸ ಮಾಡುವಂತಹ ಹೆಣ್ಣು ಮಕ್ಕಳಿಗೆ ಮಕ್ಕಳು ಆಟವಾಡಲು ವ್ಯವಸ್ಥೆ, ವೇತನ ಸಹಿತ ರಜೆ ಸೌಲಭ್ಯಗಳ, POSH ಕಮಿಟಿಯ ನಿರಂತರ ಸಭೆ ಕುರಿತು ಅರಿವು ಮೂಡಿಸಿದರು, ಅಲ್ಲದೆ She ಬಾಕ್ಸ್ ಅಳವಡಿಸುವಂತೆ ಕಾರ್ಖಾನೆ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಸಮಸ್ಯೆಗಳ ಕುರಿತು ಗಮನಕ್ಕೆ ತಂದು, ಪರಿಹರಿಸಿಕೊಂಡರು
ಈ ವೇಳೆ ಕಾರ್ಖಾನೆಯ ಹೆಚ್.ಆರ್. ರಘುರಾಮ್, ಎಚ್.ಆರ್. ಶಶಿಕುಮಾರ್, ಅಪರ ಮುಖ್ಯಸ್ಥ ಅಮಿತ್ ಗೇರ, ಪಿಎಸ್ಐ ಪಂಕಜ, ಸುನಿಲ್ ಗೋತ್ರಾಳೆ, ತನಿಕಾ ಸಹಾಯಕರಾದ ಮಹೇಶ್, ಕುಮಾರ್ ಮತ್ತಿತರರಿದ್ದರು.