ಬೆಂಗಳೂರು: ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಆದೇಶ ರದ್ದು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊಸಕೆರೆಯಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಟ ದರ್ಶನ್ (Actor Darshan) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕಾನೂನು ಪ್ರಕ್ರಿಯೆಗೆ ಮುಗಿಸಿ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲು ಕರೆದೊಯ್ಯಲಾಗಿದೆ.
ದರ್ಶನ್ ಕೊಡುಗೆ ಅಪಾರ
ಇನ್ನೂ ನಟ ದರ್ಶನ್ ಅವರ ಜಾಮೀನು ರದ್ದಾಗಿರುವುದರ ಕುರಿತು ಹಿರಿಯ ನಟಿ ಉಮಾಶ್ರೀ (Umashree) ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಚಿತ್ರರಂಗ ಹಾಗೂ ಸಮಾಜಕ್ಕೆ ಅನೇಕ ಕೊಡುಗೆಗಳನ್ನ ಕೊಟ್ಟಿದ್ದಾರೆ. ಅವರನ್ನ ಬಂಧಿಸಿರುವುದು ಸಿನಿಮಾ ರಂಗಕ್ಕೆ ದೊಡ್ಡ ನಷ್ಠ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಕೋರ್ಟ್ ನಿರ್ಧಾರವನ್ನ ನಾವು ಗೌರವಿಸಬೇಕು. ಪ್ರತಿಯೊಬ್ಬ ನಾಗರೀಕರು ಒಪ್ಪಿಕೊಳ್ಳಬೇಕು. ನಮಗೂ ಈ ವಿಚಾರದಲ್ಲಿ ಬಹಳ ಅನಿವಾರ್ಯ.
ದರ್ಶನ್ ಬಹಳ ಮುಖ್ಯವಾದ ಕೊಡುಗೆಗಳನ್ನ ಕೊಟ್ಟಿದ್ದಾರೆ. ಅವರಿಂದ ಚಿತ್ರರಂಗದ ಬೆಳವಣಿಗೆ ಆಗಿದೆ. ಅವರಿಂದ ಚಿತ್ರರಂಗಕ್ಕೆ ಬಹಳ ಒಳ್ಳೆಯದು ಆಗಿದೆ. ಈ ಬಗ್ಗೆ ಅನುಮಾನವೇ ಇಲ್ಲ. ಆದರೆ ಈಗ ನಡೆದಿರುವ ಘಟನೆಯಿಂದ ಚಿತ್ರರಂಗಕ್ಕೆ ನಷ್ಟ ಸಹ ಆಗಿದೆ.
ದರ್ಶನ್‌ನಿಂದ ಸಮಾಜಕ್ಕೆ ಹಾಗೂ ಚಿತ್ರರಂಗಕ್ಕೆ ಒಳ್ಳೆಯ ಕೆಲಸ ಆಗಬೇಕು. ಈ ಪ್ರಕರಣ ಇಲ್ಲಿಗೆ ಮುಗಿಯುತ್ತೆ ಅನಿಸೋದಿಲ್ಲ. ಪ್ರಕರಣ ಮುಗಿಯಬೇಕು. ಈ ವಿಚಾರವಾಗಿ ನ್ಯಾಯಾಲಯ ತೀರ್ಪು ಕೊಡಬೇಕು. ಮುಂದೆ ಏನಾಗುತ್ತೆ ನೋಡೋಣ, ನಾವು ಈಗಲೇ ನಿರಾಸೆ ಆಗೋದು ಬೇಡ. ಯಾರಿಗಾದರೂ ಒಬ್ಬರಿಗೆ ನ್ಯಾಯ ಸಿಗಬೇಗು, ಅಭಿಮಾನಿಗಳಲ್ಲಿ ನಾನು ಮನವಿ ಮಾಡೋದು ಇಷ್ಟೇ, ಸ್ವಲ್ಪ ಶಾಂತವಾಗಿರಿ ಎಂದು ಹೇಳಿದ್ದಾರೆ.
ವಿಚಾರ ತಿಳಿದು ಶಾಕ್ ಆಯ್ತು
ಜಾಮೀನು ರದ್ದು ಕುರಿತಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಚಾರ ಶಾಕ್ ಆಯ್ತು, ನ್ಯಾಯಾಲಯದ ತೀರ್ಪಿನ ಬಗ್ಗೆ ಹೆಚ್ಚು ಮಾತಾಡುವುದಿಲ್ಲ ಎಂದರು.
ಹಾಡಿನ ಬಿಡುಗಡೆ ಮುಂದೂಡಿಕೆ
ಮತ್ತೊಂದೆಡೆ ದರ್ಶನ್ ಬಂಧನದ ಬೆನ್ನಲ್ಲೇ ನಾಳೆ ಬಿಡುಗಡೆಯಾಗಬೇಕಿದ್ದ ಬಹು ನಿರೀಕ್ಷಿತ ದಿ ಡೆವಿಲ್ ಚಿತ್ರದ ಇದ್ರೇ ನೆಮ್ಮದಿಯಾಗ್ ಇರಬೇಕ್ ಗೀತೆಯ ಬಿಡುಗಡೆಯನ್ನು ಮುಂದೂಡಲಾಗಿದೆ.
ಈ ಕುರಿತು ಶ್ರೀ ಜೈಮಾತಾ ಕಂಬೈನ್ಸ್ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಲಾಗಿದೆ.
The song release scheduled for tomorrow has been cancelled for now. pic.twitter.com/D7AkG5xXtL
— Shri Jaimatha Combines (@sjmcfilms) August 14, 2025