ನವದೆಹಲಿ: ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪಕ್ಕೆ ಸಂಬಂಧಪಟ್ಟಂತೆ ನಟ ದರ್ಶನ್ (Darshan), ಪವಿತ್ರ ಗೌಡ (Pavithra Gowda) ಸೇರಿದಂತೆ 7 ಮಂದಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರಿಕೋರ್ಟ್ ರದ್ದು ಮಾಡಿದೆ.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ನ್ಯಾಯವಾದಿ ಚಿದಾನಂದ್, ಅನಿಲ್ ನಿಶಾನಿ ಈ ಕುರಿತಂತೆ ಪ್ರತಿಕ್ರಿಯೆ ನೀಡಿ, ಹತ್ಯೆ ಆರೋಪದ ಕುರಿತು ಸರ್ಕಾರದ ಸಲ್ಲಿಸಿದ್ದ ಮೇಲ್ಮನವಿಯನ್ನು ಒಪ್ಪಿ, ದರ್ಶನ್ ಹಾಗೂ 7 ಮಂದಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.
ಸರ್ಕಾರದ ಪರ ವಕೀಲರು ಹಾಗೂ ಆರೋಪಿಗಳ ಪರ ವಕೀಲರು ಲಿಖಿತ ರೂಪದಲ್ಲಿ ಸಲ್ಲಿಸಿದ್ದ ವಾದವನ್ನು ಪರಿಶೀಲಿಸಿದ ಕೋರ್ಟ್ ಜಾಮೀನು ರದ್ದು ಮಾಡಿ ಆದೇಶ ಹೊರಡಿಸಿದೆ.
ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದೆ. ಈ ಆರೋಪಿಗಳಿಗೆ ಜೈಲಿನ ಆವರಣದಲ್ಲಿ 5 ಟ್ರೀಟ್ ಮೆಂಟ್ ನೀಡಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಈ ತೀರ್ಪನ್ನು ಎಲ್ಲಾ ಕಾರಾಗೃಹಗಳಿಗೆ ಕಳುಹಿಸಿಕೊಡಲು ಸೂಚನೆ ನೀಡಿದೆ.
ದರ್ಶನ್ ಸೇರಿದಂತೆ 7 ಆರೋಪಿಗಳನ್ನು ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.