ದೊಡ್ಡಬಳ್ಳಾಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಸಮಾರಂಭ ಆ.15 ರಂದು ಬೆಳಗ್ಗೆ 9 ಗಂಟೆಗೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸ್ವಾತಂತ್ರ್ಯದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಕಚೇರಿಗಳನ್ನು ಸಿಂಗರಿಸಲಾಗುತ್ತಿದೆ. ಅಂತೆಯೇ ತಾಲೂಕಿನ ಶಕ್ತಿ ಸೌಧವಾದ ಮಿನಿ ವಿಧಾನಸೌಧದ ಕಚೇರಿಯನ್ನು ತಳಿರು ತೋರಣ, ವಿದ್ಯುತ್ ದೀಪಾಲಗಳಿಂದ ಸಿಗರಿಸಲಾಗಿದೆ.
ಆದರೆ ಕಟ್ಟಡದಲ್ಲಿ ಕಟ್ಟಿರುವ ಜೇಡರ ಬಲೆಗಳನ್ನು ಸ್ವಚ್ಚಗೊಳಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ತಾಲೂಕು ಕಚೇರಿಯ ಹೊರಾಂಗಣದ ಮೇಲ್ಚಾವಣಿಯಲ್ಲಿ ಜೇಡರ ಬಲೆಗಳು ಕಟ್ಟಿದ್ದು, ಸಿಬ್ಬಂದಿಗಳು ಗಮನಿಸದೆ, ತಳಿರು, ತೋರಣ ಕಟ್ಟಿ ಮೇಲೆಲ್ಲ ಥಳುಕು ಒಳಗೆ ಹುಳುಕು ಎಂಬಂತೆ ಕೆಲಸ ಮುಗಿಸಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತಂತೆ ಹರಿತಲೇಖನಿ ವರದಿ ಪ್ರಕಟಿಸಿತ್ತು. ವರದಿ ಬೆನ್ನಲ್ಲೇ ಹೆಚ್ಚೆತ್ತ ಅಧಿಕಾರಿಗಳು ಜೇಡರ ಬಲೆಗಳನ್ನು ಸ್ವಚ್ಛಗೊಳಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಮನ್ನಣೆ ನೀಡಿದ್ದಾರೆ.