ದೊಡ್ಡಬಳ್ಳಾಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (Patrakartara dhvani) ದೊಡ್ಡಬಳ್ಳಾಪುರ ತಾಲೂಕು ಘಟಕ ಇಂದು ಅಸ್ತಿತ್ವಕ್ಕೆ ಬಂದಿದೆ.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಘಟಕದಿಂದ ಇಂದು ಸಂಘದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.

ಬಳಿಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಣೆ ಮಾಡಿದ್ದರು.
ನೂತನ ಪದಾಧಿಕಾರಿಗಳು:
ಗೌರವಾಧ್ಯಕ್ಷ – ಆರ್.ಕೆಂಪೇಗೌಡ, ಅಧ್ಯಕ್ಷ – ಜನಪರ ಮಂಜು, ಉಪಾಧ್ಯಕ್ಷರು – ಡಿ.ಸಿ.ಚೌಡರಾಜ್, ಜಿ.ನಂಜುಂಡಯ್ಯ, ಪ್ರಧಾನ ಕಾರ್ಯದರ್ಶಿ – ಎನ್.ರಾಮಚಂದ್ರ (ಕೇಬಲ್), ಸಹಕಾರ್ಯದರ್ಶಿ – ಬಿ.ಪಿ.ಹರಿಕುಮಾರ್, ಖಜಾಂಚಿ – ಎನ್.ಆರ್.ಅರುಣ್ ಕುಮಾರ್, ಗೌರವ ಸಲಹೆಗಾರರು – ಪ್ರಮಿಳಾ ಮಹದೇವ್, ಕಾನೂನು ಸಲಹೆಗಾರರು – ಟಿ.ಎನ್.ಮುರುಳಿಧರ್, ನಿರ್ದೇಶಕರು – ಎಸ್.ವೇಣುಗೋಪಾಲ್, ಪಿ.ಮುನಿಯಪ್ಪ, ದೇವರಾಜ್, ಲಕ್ಷ್ಮೀನಾರಾಯಣ, ಮಂಜುನಾಥ್. ಎ., ಹರ್ಷಿತ್‌ರಾವ್, ಜಯರಾಮಯ್ಯ.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ರಾಜ್ಯ ಕಾರ್ಯದರ್ಶಿ ಎಂ.ದೇವರಾಜ್, ಜಿಲ್ಲಾಧ್ಯಕ್ಷ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ, ಜಿಲ್ಲಾ ಉಪಾಧ್ಯಕ್ಷ ಎಮ್.ಎಲ್.ಆನಂದ್ ಕುಮಾರ್ ಮತ್ತಿತರರಿದ್ದರು.