ಅಮರಾವತಿ: ಕರ್ನಾಟಕ ಮಾದರಿಯಲ್ಲಿ ಆಂಧ್ರಪ್ರದೇಶದಲ್ಲಿಯೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free bus travel) ಯೋಜನೆಗೆ ಸಿಎಂ ಚಂದ್ರಬಾಬು ನಾಯ್ಡು (Chandrababu Naidu) ಚಾಲನೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಇಂದು ಚಾಲನೆ ನೀಡಲಾಗಿದ್ದು, ಕರ್ನಾಟಕದ ಶಕ್ತಿ ಯೋಜನೆಯಂತೆ ಸ್ತ್ರೀ ಶಕ್ತಿ ಹೆಸರಿನಲ್ಲಿ ಮಹಿಳೆಯರು 5 ಬಗೆಯ ಬಸ್ಗಳಲ್ಲಿ ರಾಜ್ಯದಾದ್ಯಂತ ಉಚಿತ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ.
సూపర్ సిక్స్ నుంచి మరో సిక్సర్.. ఉచిత బస్సు ప్రయాణం స్త్రీశక్తి పథకం ప్రారభం.
— Telugu Desam Party (@JaiTDP) August 15, 2025
ఉండవల్లి నుంచి విజయవాడ బస్టాండ్ వరకు ఆర్టీసీ బస్సులో ప్రయాణం చేస్తున్న చంద్రబాబు గారు, పవన్ కళ్యాణ్ గారు, లోకేష్ గారు. దారి పొడుగునా, మంగళ హారతులతో మహిళల ఘనస్వాగతం. బస్సు వెళ్ళే ప్రతి సెంటర్లో తీన్… pic.twitter.com/66tGh1vydv
ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸಾಮಾನ್ಯ ಬಸ್ಗಳು, ಅಲ್ಪಾ ಬಸ್ಗಳು, ಸಿಟಿ ಆರ್ಡಿನರಿ ಬಸ್ಗಳು, ಮೆಟ್ರೊ ಎಕ್ಸ್ಪ್ರೆಸ್ ಹಾಗೂ ಎಕ್ಸ್ಪ್ರೆಸ್ ಬಸ್ಗಳಲ್ಲಿ ಆಂಧ್ರದಾದ್ಯಂತ ಪ್ರಯಾಣ ಮಾಡಬಹುದಾಗಿದೆ.
ಉಂಡವಲ್ಲಿ ಗುಹೆಗಳಿನಿಂದ ಬಸ್ನಲ್ಲಿ ಪ್ರಯಾಣ ಆರಂಭಿಸಿ ಯೋಜನೆಗೆ ಚಾಲನೆ ನೀಡಿದರು. ಉಂಡವಲ್ಲಿ ಸೆಂಟರ್, ತಾಡಪಳ್ಳಿ ಪ್ಯಾಲೆಸ್, ತಾಡೇಪಳ್ಳಿ ಸೆಂಟರ್, ಕನಕದುರ್ಗ ವಾದ್ರಿಯ ಮೂಲಕ ಪ್ರಯಾಣಿಸಿದರು.
#Amaravati—
— NewsMeter (@NewsMeter_In) August 15, 2025
Chief minister @ncbn, Deputy CM @PawanKalyan, and Minister @naralokesh traveled with women passengers from #Undavalli to #Vijayawada on an @apsrtc bus to kick off #AndhraPradesh’s #FreeBusTravelForWomen Scheme.
#WomenEmpowerment #FreeBusAP pic.twitter.com/Wxwon7xbF5
ಗುಂಟೂರು ಜಿಲ್ಲೆಯ ತಾಡೇಪಳ್ಳಿ ಮಂಡಲದಿಂದ ಮಹಿಳೆಯರೊಂದಿಗೆ ವಿಜಯವಾಡದ ಪಂಡಿತ ನೆಹರು ಬಸ್ ನಿಲ್ದಾಣದವರೆಗೆ ಪ್ರಯಾಣ ಮಾಡುವ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು.
ಸಿಎಂ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಸಚಿವ ನಾರಾ ಲೋಕೇಶ್ ಅವರು ಇದ್ದರು.
ಆಧಾರ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ತೋರಿಸಿ, ಕಂಡಕ್ಟರ್ ನೀಡುವ ಶೂನ್ಯ ಶುಲ್ಕದ ಟಿಕೆಟ್ನೊಂದಿಗೆ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
ಬಾಲಕಿಯರು, ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ತೃತೀಯಲಿಂಗಿಗಳು ಈ ಯೋಜನೆಯ ಲಾಭ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.
ಕೆಲ ತಿಂಗಳ ಹಿಂದೆ ಕರ್ನಾಟಕ ಯಶಸ್ವಿ ಯೋಜನೆಯಾದ ಶಕ್ತಿ ಯೋಜನೆಯ ಅನಿಷ್ಟಾನದ ಕುರಿತಂತೆ ಆಂಧ್ರಪ್ರದೇಶದ ಸರ್ಕಾರದ ಸಚಿವರು ಕರ್ನಾಟಕಕ್ಕೆ ಭೇಟಿ ನೀಡಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಶಕ್ತಿ ಯೋಜನೆ ಅನುಷ್ಠಾನದ ಕುರಿತು ಮಾಹಿತಿ ತಿಳಿದಿದ್ದು ಸ್ಮರಿಸಬಹುದಾಗಿದೆ.