ನವದೆಹಲಿ: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gndhi) ಆರೋಪಿಸುತ್ತಿರುವ ಓಟ್ ಚೋರಿ (Vote Chori) ಕುರಿತಂತೆ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.
ಇದರ ಬೆನ್ನಲ್ಲೇ ಭಾರತೀಯ ಚುನಾವಣಾ ಆಯೋಗ ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಹತ್ವದ ಸುದ್ದಿಗೋಷ್ಟಿ ಕರೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಆ.1ರಂದು ಚುನಾವಣಾ ಆಯೋಗದ ವಿರುದ್ದ ಬೆಂಗಳೂರು ನಗರ ವ್ಯಾಪ್ತಿಯ ಮಹದೇವಪುರದಲ್ಲಿ ಲಕ್ಷ ಮತಗಳು ಅಕ್ರಮ ನಡೆದಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಕ್ರಮವಾಗಿದೆ ಎಂದು ಗಂಭೀರ ಆರೋಪಗಳನ್ನು ಮಾಡಿದ್ದರು.
‘ಮತ ಕಳವು’ ಆರೋಪ ಸಂಬಂಧ ಪುರಾವೆಗಳಿವೆ ಎಂದೂ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಗದ ಸುದ್ದಿಗೋಷ್ಠಿ ಬಗ್ಗೆ ಕುತೂಹಲ ಹೆಚ್ಚಿದೆ.
ಮತ್ತೊಂದೆಡೆ ಚುನಾವಣೆ ಆಯೋಗದ ಸುದ್ದಿಗೋಷ್ಠಿಗೂ ಮುನ್ನವೇ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಹೌದು ಇಂದು ಅಖಿಲೇಶ್ ಯಾದವ್ ಅವರು, ಓರ್ವ ಯುವಕ 8 ಬಾರಿ ಮತದಾನ ಮಾಡಿರುವ ಸೆಲ್ಫಿ ವಿಡಿಯೋ ಒಂದನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
चुनाव आयोग को चुनौती देता एक भाजपाई का ये वीडियो चुनावी धांधली करनेवालों द्वारा दिया गया, एक जीता जागता एफ़िडेविट है, CEC इसका जवाब तो दे। pic.twitter.com/hV8Ror0gRJ
— Akhilesh Yadav (@yadavakhilesh) August 17, 2025
ಇದರಲ್ಲಿ ಯುವಕನೋರ್ವ 8 ಬಾರಿ ಮತದಾನ ಮಾಡುತ್ತಿರುವುದಾಗಿ ಸೆಲ್ಫಿ ವಿಡಿಯೋ ಚಿತ್ರಕರಣ ಮಾಡಿದ್ದು, ಎಂಟು ಬಾರಿಯೂ ಬಿಜೆಪಿ (BJP)ಗೆ ಮತದಾನ ಮಾಡಿರುವುದು ಸೆರೆಯಾಗಿದೆ.
ಇನ್ನೂ ಈ ವಿಡಿಯೋ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಚುನಾವಣಾ ಆಯೋಗಕ್ಕೆ ಸವಾಲು ಹಾಕುವಂತೆ ಬಿಜೆಪಿ ನಾಯಕರ ಈ ವೀಡಿಯೊವನ್ನು ಚುನಾವಣಾ ವಂಚನೆಯಲ್ಲಿ ಭಾಗಿಯಾಗಿರುವುದಕ್ಕೆ ಜೀವಂತ ಅಫಿಡವಿಟ್, ಚುನಾವಣೆ ಆಯೋಗ ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದು ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.