ನವದೆಹಲಿ: ವೋಟ್ ಚೋರಿ (Vote chori) ಕುರಿತಂತೆ ಬಿಹಾರದಲ್ಲಿ ವಿರೋಧ ಪಕ್ಷಗಳು ಬೀದಿಗಿಳಿದಿವೆ. ಅಲ್ಲದೆ ಸಂಸತ್ನಲ್ಲಿ ಮುಖ್ಯ ಚುನಾವಣಾ ಆಯುಕ್ತ ವಿರುದ್ಧ ಮಾಹಾಭಿಯೋಗ ಪ್ರಸ್ತಾವನೆ ಮಂಡಿಸಲು ಇಂಡಿ ಮೈತ್ರಿಕೂಟ ನಾಯಕರು ಮುಂದಾಗುವ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ಶಾಕ್ ನೀಡಿದ್ದಾರೆ.
ವೋಟ್ ಚೋರಿ ಕುರಿತು ವಿರೋಧ ಪಕ್ಷಗಳಲ್ಲಿ ಆಕ್ರಮಣಕಾರಿ ನೀತಿ ಕಂಡುಬರುತ್ತಿದ್ದು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ 83 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರು ನಿನ್ನೆಯಷ್ಟೇ ನಡೆದ ಸಾಸಾರಾಂ ರ್ಯಾಲಿ ಬಳಿಕ ಇಂದು ಬೆಳಗ್ಗೆ ಸಂಸತ್ ಆವರಣದಲ್ಲಿ ಸಮಾಜವಾದಿ ಪಾರ್ಟಿಯೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ, ಮುಖ್ಯ ಚುನಾವಣೆ ಆಯುಕ್ತರ ಸುಳ್ಳಿನ ಪ್ರತಿಗಳನ್ನು ತೋರಿಸಿದರು.
हमारा हक़, हमारा वोट
— Akhilesh Yadav (@yadavakhilesh) August 18, 2025
बंद करो ये लूट-खसोट pic.twitter.com/zLNy2nKELN
ಆಗಸ್ಟ್ 13 ರಂದು ಬಿಜೆಪಿ ಮುಖಂಡ ಅನುರಾಗ್ ಠಾಕೂರ್ ನಡೆಸಿದ ಸುದ್ದಿಗೋಷ್ಠಿ ಬಿಜೆಪಿಗೆ ಸಂಕಷ್ಟಕ್ಕೆದೂಡಿದ್ದು, ಇದರಿಂದಾಗಿ ಈ ವಿಚಾರದಲ್ಲಿ ಬಿಜೆಪಿ ಸಕ್ರಿಯವಾಗಿ ಕಂಡುಬರುತ್ತಿಲ್ಲ. ಆದರೆ ವಿರೋಧ ಪಕ್ಷಗಳು ತಮ್ಮ ಆರೋಪವನ್ನು ವಿಸ್ತರಿಸುತ್ತಾ ಸಾಗಿದ್ದು, ಮಹಾರಾಷ್ಟ್ರದಿಂದ ಲೋಕಸಭೆ ಚುನಾವಣೆವರೆಗೆ ಹಲವು ಅನುಮಾನಗಳನ್ನು ಸೃಷ್ಟಿಸಿದೆ.
ಮುಖ್ಯ ಚುನಾವಣಾ ಆಯುಕ್ತರ ಟ್ರೋಲ್
ಇನ್ನೂ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣೆ ಆಯುಕ್ತರ ಉತ್ತರಗಳು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ನಗೆಪಾಟಲಿಗೆ ಒಳಗಾಗಿದ್ದು, ನೆಟ್ಟಿಗರಿಂದ ತೀವ್ರ ಟ್ರೋಲ್ಗೆ ಒಳಗಾಗುತ್ತಿದ್ದಾರೆ.
Wtf 😭😭 #VoteChor pic.twitter.com/1jXmAqC5Rf
— Jitesh (@Chaotic_mind99) August 18, 2025
ಮತ್ತೊಂದೆಡೆ ಬಿಹಾರದಲ್ಲಿ ರ್ಯಾಲಿ ನಡೆಸುತ್ತಿರುವ ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಆಕ್ರಮಣಕಾರಿ ಮಾತುಗಳು ತೀವ್ರಗೊಳಿಸಿದ್ದಾರೆ.
जननेता जनता के हक़ के लिए सड़क पर उतर आए हैं।
— Aakash (@OfficialAaKu) August 17, 2025
भीषण जनसंग्राम होगा! #TejashwiYadav #RahulGandhi pic.twitter.com/19vVKoFSVo