ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan ) ನಟನೆಯ ಬಹು ನಿರೀಕ್ಷಿತ ದಿ ಡೆವಿಲ್ (The Devil) ಸಿನಿಮಾದ ಹಾಡು ಬಿಡುಗಡೆಯ ದಿನಾಂಕ ಮರು ನಿಗದಿಯಾಗಿದೆ.
ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಲ್ಲಿ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಬಿಡುಗಡೆಯಾಗಬೇಕಿದ್ದ ದಿ ಡೆವಿಲ್ ಸಿನಿಮಾದ “ಇದ್ರೆ ನೆಮ್ಮದಿಯಾಗ್ ಇರ್ಬೇಕ್” ಸಾಂಗ್ ಬಿಡುಗಡೆ ಮುಂದೂಡಲಾಗಿತ್ತು.
ಈ ಕುರಿತಂತೆ ದರ್ಶನ್ ವಿರುದ್ಧವಾಗಿ ವರದಿ ಪ್ರಸಾರ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದ ಕೆಲ ಖಾಸಗಿ ಸುದ್ದಿವಾಹಿನಿಗಳು, ಸಿನಿಮಾದ ನಿರ್ಮಾಪಕ ಕಾಣೆಯಾಗಿದ್ದಾರೆ, ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ವರದಿ ಪ್ರಸಾರ ಮಾಡಿದ್ದವು.
ಈಗ ಆ ವರದಿಗಳಿಗೆ ತಿರುಗೇಟು ಎಂಬಂತೆ ಇದೇ ತಿಂಗಳ 24 ರಂದು ದಿ ಡೆವಿಲ್ ಸಿನಿಮಾದ “ಇದ್ರೆ ನೆಮ್ಮದಿಯಾಗ್ ಇರ್ಬೇಕ್ ಸಾಂಗ್” ಬಿಡುಗಡೆಯಾಗುತ್ತಿದೆ.
ಈ ಕುರಿತಂತೆ ಅಧಿಕೃತವಾಗಿ ಶ್ರೀ ಜಯಮಾತಾ ಕಂಬೈನ್ಸ್ ಟ್ವೀಟ್ ಮಾಡಿ ದಿನಾಂಕ ಘೋಷಿಸಿದ್ದು, ದಿ ಡೆವಿಲ್ ಸಿನಿಮಾದ ಬಿಡುಗಡೆ ಕುರಿತು ನಕಾರಾತ್ಮಕ ವರದಿ ಮಾಡಿದ್ದ ಖಾಸಗಿ ಸುದ್ದಿವಾಹಿನಿಗಳಿಗೆ ಹಿನ್ನಡೆಯಾಗಿದೆ.
ಆಗಸ್ಟ್ 24 ಭಾನುವಾರ ಬೆಳಗ್ಗೆ 10- 05 ಕ್ಕೆ " ದಿ ಡೆವಿಲ್ " ನ , ಮೊದಲನೆ ಹಾಡು ಬಿಡುಗಡೆ
— Shri Jaimatha Combines (@sjmcfilms) August 20, 2025
The Devil Unleashes The Heat on 24th August! #IdreNemdiyaagIrbek First Single from #TheDevil Drops at 10.05 AM!
A @AJANEESHB Musical 🎶
Challenging Star @dasadarshan #RachanaRai @YoodleeFilms… pic.twitter.com/4Zp4Fu3j2I
ಮತ್ತೊಂದೆಡೆ ದರ್ಶನ್ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾದ ಕಾರಣ ನೋವಿನಲ್ಲಿದ್ದ ಅವರ ಅಭಿಮಾನಿಗಳಿಗೆ ಸಂಭ್ರಮ ಕಂಡುಬಂದಿದೆ.