ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ (Delhi CM Rekha Gupta) ಅವರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದಾನೆ.
ಜನ ಸುವಾಯಿ ಎನ್ನುವ ಕಾರ್ಯಕ್ರಮ ನಡೆಸುವ ರೇಖಾ ಗುಪ್ತಾ ಅವರು ಖುದ್ದಾಗಿ ಜನರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸುತ್ತಿದ್ದ ವೇಳೆ ರೇಖಾ ಗುಪ್ತಾ ಅವರ ಮೇಲೆ ಹಲ್ಲೆ ನಡೆದಿದೆ.
ಏಕಾಏಕಿ ಕೂಗಾಡಲು ಆರಂಭಿಸಿದ ವ್ಯಕ್ತಿಯು ಬಳಿಕ ರೇಖಾ ಗುಪ್ತಾ ಅವರಿಗೆ ಕೆನ್ನೆಗೆ ಎರಡು ಬಾರಿ ಬಾರಿಸಿದ್ದಾನೆ. ಘಟನೆಯಲ್ಲಿ ರೇಖಾ ಗುಪ್ತಾ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಕೂಡಲೇ ಭದ್ರತಾ ಸಿಬ್ಬಂದಿಗಳು ರೇಖಾ ಗುಪ್ತಾರನ್ನು ರಕ್ಷಿಸಿ, ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯು ರಾಜೇಶ್ ಭಾಯಿ ಖಿಮ್ಮಿ (41) ಎನ್ನಲಾಗಿದೆ, ಆತನ ಹಿನ್ನೆಲೆಯ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಹಲ್ಲೆ ಆರೋಪಿ ದೂರುದಾರರ ಸೋಗಿನಲ್ಲಿ ಸರದಿ ಸಾಲಿನಲ್ಲಿ ಬಂದು ನಿಂತಿದ್ದ. ಸಿಎಂ ರೇಖಾ ಗುಪ್ತ ಅವರನ್ನು ಭೇಟಿಯಾಗಲು ತನ್ನ ಸರದಿ ಬಂದಾಗಿ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.
ಇನ್ನೂ ಹಲ್ಲೆ ನಡೆಸಿದ ವ್ಯಕ್ತಿ ಪ್ರಾಣಿ ಪ್ರಿಯನಾಗಿದ್ದಾನೆ ಎಂದು ಆತನ ತಾಯಿ ಹೇಳಿದ್ದು, ಬೀದಿ ನಾಯಿಗಳ ಕುರಿತು ನ್ಯಾಯಾಲಯದ ಆದೇಶ ಹಿನ್ನೆಲೆಯಲ್ಲಿ ಕಳವಳಗೊಂಡಿದ್ದ ಎನ್ನಲಾಗಿದೆ.