ಬೆಂಗಳೂರು: ನಾಡಹಬ್ಬ ದಸರಾ 2025ರ (Dasara 2025) ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವಿರೋಧದ ಕುರಿತು ಸ್ವತಃ ಬಾನು ಮುಷ್ತಾಕ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಮಾತನಾಡುವವರು ಮಾತಾಡಲಿ, ನಾನು ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
ಮೈಸೂರು ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆದ್ರೆ ಕೆಲವರು ಈ ಬಗ್ಗೆ ವಿರೋಧ ಮಾಡಿದ್ದಾರೆ. ಯಾರು ಏನು ಮಾತಾಡುತ್ತಾರೋ ಮಾತಾಡಲಿ. ನಾನು ಸೂಕ್ತ ಸಮಯದಲ್ಲಿ ನೀಡುತ್ತೇನೆ ಎಂದಿದ್ದಾರೆ.
ಈಗ ನನ್ನ ಆಯ್ಕೆಯನ್ನು ವಿರೋಧಿಸುವವರು ಮೊದಲು ನಾನು ಈ ಹಿಂದೆ ಏನು ಮಾತಾಡಿದ್ದೇನೆ ಎಂದು ಸರಿಯಾಗಿ ತಿಳಿಕೊಂಡು ಆ ನಂತರ ವಿರೋಧ ವ್ಯಕ್ತಪಡಿಸಲಿ. ಸುಮ್ಮನೆ ಯಾರೋ ವಿರೋಧ ಮಾಡಿದ್ರೆ ಅದಕ್ಕೆಲ್ಲಾ ನಾನು ಉತ್ತರ ಕೊಡಬೇಕಾ? ಅದರ ಅವಶ್ಯಕತೆ ಇದ್ಯಾ.? ಇದರ ಬಗ್ಗೆ ನಾನು ವಿವರವಾಗಿ ಮಾತಾಡ್ತೀನಿ ಎಂದು ಬಾನು ಮುಷ್ಕಾಕ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನನ್ನ ಆಯ್ಕೆಯನ್ನು ವಿರೋಧ ಮಾಡುವವರ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ಈಗ ಯಾರಿಗೆಲ್ಲ ವಿರೋಧವಿದೆಯೋ ಅವರು ಹಾಗೆ ಮಾಡಲು ಸ್ವತಂತ್ರರಿದ್ದಾರೆ. ಹಾಗಂತ ಈ ಹಂತದಲ್ಲಿ ನಾನು ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಆದ್ರೆ ಸೂಕ್ತವಾದ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡುವೆ ಎಂದಿದ್ದಾರೆ.