ಪೂರ್ಣಿಯಾ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಹಕ್ಕುಗಳ ಯಾತ್ರೆಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿ ಕಂಡುಬರುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸ್ವತಃ ಈ ಯಾತ್ರೆಯಲ್ಲಿ ಭಾಗವಹಿಸಿ, ಬಿಹಾರದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿರುವ ಬಿಜೆಪಿ ನಾಯಕರಲ್ಲಿ ತಳಮಳಕ್ಕೆ ಕಾರಣವಾಗಿದೆ.
ಭಾನುವಾರ ಪೂರ್ಣಿಯಾದಲ್ಲಿ ರಾಹುಲ್ ಗಾಂಧಿಯವರು ಪೂರ್ಣಿಯಾ ನಗರವನ್ನು ಪ್ರವೇಶಿಸಿದ ತಕ್ಷಣ, ಅವರು ಜೀಪ್ ಬಿಟ್ಟು, ಬುಲೆಟ) ಹತ್ತಿದರು. ಇದಾದ ನಂತರ ಅವರು ಬುಲೆಟ್ ಮೂಲಕ ಅರಾರಿಯಾವರೆಗಿನ ಪ್ರಯಾಣವನ್ನು ಪೂರ್ಣಗೊಳಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾಸಗಿ ಸುದ್ದಿವಾಹಿನಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ.
ರಾಹುಲ್ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸುತ್ತಿದ್ದಾಗ ಅವರ ಹಿಂದೆ ಬಿಹಾರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ಕುಳಿತಿದ್ದರು. ಆದರೆ, ಅವರು ಹೆಲ್ಮೆಟ್ ಧರಿಸಿರಲಿಲ್ಲ. ಇದು ಬಿಜೆಪಿ ಬೆಂಬಲಿತ ಮಾಧ್ಯಮಗಳಲ್ಲಿ ಆಕ್ಷೇಪಕ್ಕೆ ಒಳಗಾಗಿದೆ. ತೇಜಸ್ವಿ ಯಾದವ್ ಕೂಡ ಹೆಲ್ಮೆಟ್ ಧರಿಸಿ ಬುಲೆಟ್ ಓಡಿಸುತ್ತಿದ್ದರು. ರಾಹುಲ್ ಬೈಕ್ ಮುನ್ನಡೆಸುತ್ತಿದ್ದಾಗ ಅವರ ಬೆಂಗಾವಲು ಪಡೆ ಹಿಂದೆ ಇತ್ತು.
Idk why but Rahul Gandhi reminds me of my friend @DrNimoYadav riding the bike.
— Jitesh (@Chaotic_mind99) August 24, 2025
White T-shirt,Cargo pants ,boots, the swag while riding the bullet. Its all the same.🔥♥️
pic.twitter.com/yWwyjb393v
ದಾರಿಯಲ್ಲಿ ಅನೇಕ ಸ್ಥಳಗಳಲ್ಲಿ ರಾಹುಲ್ ಗಾಂಧಿ ಜನರೊಂದಿಗೆ ಕೈಕುಲುಕಿದರು. ಯುವಕರು ಮತ್ತು ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಾಂಗ್ರೆಸ್ ಸೇವಾ ದಳದ ಸದಸ್ಯರು ಸಹ ಕಾಣಿಸಿಕೊಂಡರು. ಕತಿಹಾರ್ ತಿರುವಿನಲ್ಲಿ ಶಾಲಾ ಹುಡುಗಿಯರು ಸಹ ಅವರನ್ನು ಸ್ವಾಗತಿಸಿದರು.
ಇದರ ನಡುವೆ ಲೈನ್ ಬಜಾರ್‌ನಲ್ಲಿ, ಒಬ್ಬ ಯುವಕ ರಾಹುಲ್ ಬೈಕ್ ಮುಂದೆ ಬಂದು ಅವನನ್ನು ಅಪ್ಪಿಕೊಂಡ. ಆದರೆ, ಭದ್ರತಾ ಸಿಬ್ಬಂದಿ ಅ ಯುವಕನನ್ನು ಚೆನ್ನಾಗಿ ನೋಡಿಕೊಂಡರು.